ಅಹಮದಾಬಾದ್: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ T20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ (India) 168 ರನ್‌ಗಳ ಭರ್ಜರಿ ಜಯ ಸಾಧಿಸಿತು. ಸಿಕ್ಸರ್, ಬೌಂಡರಿಗಳ ಸುರಿಮಳೆಯ ಈ ಆಟದಲ್ಲಿ ಭಾರತದ ಪರ 21 ಬೌಂಡರಿ, 13 ಸಿಕ್ಸ್‌ಗಳು ದಾಖಲಾಯಿತು.
Advertisement
ಈ ಪಂದ್ಯದಲ್ಲಿ ಉತ್ತಮ ಆಲ್‌ರೌಂಡರ್ ಪ್ರದರ್ಶನ ನೀಡಿದ ಟಿ20 ನಾಯಕ ಹಾರ್ದಿಕ್ ಪಾಂಡ್ಯ (Hardik Pandya) 176.47 ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿ 17 ಎಸೆತಗಳಲ್ಲಿ 30 ರನ್ (4 ಬೌಂಡರಿ, 1 ಸಿಕ್ಸರ್) ಚಚ್ಚಿದರು. ಅಲ್ಲದೇ ಮಾರಕ ಬೌಲಿಂಗ್ ದಾಳಿಯಿಂದ 4 ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: 3rd T20I: ಶತಕ ಸಿಡಿಸಿ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‍ನಲ್ಲಿ ನೂತನ ದಾಖಲೆ ಬರೆದ ಗಿಲ್
Advertisement
Advertisement
ಬಳಿಕ ಮಾತನಾಡಿದ ಅವರು, ಟೀಂ ಇಂಡಿಯಾ (Team India) ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಹೋದ ಬಳಿಕ ಅವರ ಜವಾಬ್ದಾರಿ ಇದ್ದಕ್ಕಿದ್ದಂತೆ ನನ್ನ ಮೇಲೆ ಬಂದಿದೆ. ನಾನು ಹೊಸತನಕ್ಕೆ ಹೊಂದಿಕೊಳ್ಳಲು ಎದುರು ನೋಡುತ್ತೇನೆ. ಇದರಿಂದ ನನ್ನ ಸ್ಟ್ರೈಕ್‌ರೇಟ್ ಕಡಿಮೆಯಾಗಬಹುದು ಎಂದು ಪಾಂಡ್ಯ ಭಾವುಕರಾಗಿದ್ದಾರೆ. ಇದನ್ನೂ ಓದಿ: 3rd T20I: ಗಿಲ್ ಘರ್ಜನೆಗೆ ಕಿವೀಸ್ ಗಪ್ ಚುಪ್ – ಟಿ20 ಸರಣಿ ಗೆದ್ದ ಭಾರತ
Advertisement
ಮಹಿ ಆಡುತ್ತಿದ್ದಾಗ ನಾನು ಇನ್ನೂ ಚಿಕ್ಕವನಾಗಿದ್ದೆ, ಗ್ರೌಂಡ್ ಸುತ್ತಲೂ ಹೊಡೆಯುತ್ತಿದೆ. ಆದರೆ ಮಹಿ ಹೋದ ನಂತರ ಇದ್ದಕ್ಕಿದ್ದಂತೆ ಆ ಜವಾಬ್ದಾರಿ ನನ್ನ ಮೇಲೆ ಬಂದಿದೆ. ನಾವು ಉತ್ತಮ ಫಲಿತಾಂಶಗಳನ್ನೇ ಪಡೆಯುತ್ತಿದ್ದೇವೆ. ನಾನು ಸ್ವಲ್ಪ ನಿಧಾನವಾಗಿ ಆಡುತ್ತಿದ್ದೇನೆ. ಆದರೂ ಪರವಾಗಿಲ್ಲ ಎಂದು ಹೇಳಿದ್ದಾರೆ.
ಮುಂದುವರಿದು, ನಾನು ಯಾವಾಗಲೂ ಸಿಕ್ಸರ್ ಹೊಡೆಯುವುದನ್ನ ಎಂಜಾಯ್ ಮಾಡುತ್ತೇನೆ. ಏಕೆಂದರೆ ಅದು ಜೀವನ. ನಾನು ಪಾಟ್ನರ್‌ಶಿಪ್ ನಂಬಿದ್ದೇನೆ. ನನ್ನ ಪಾಲುದಾರನಿಗೆ ಹಾಗೂ ತಂಡಕ್ಕೆ ನಾನು ಅಲ್ಲಿದ್ದೇನೆ ಎಂಬ ನಂಬಿಕೆ ಬರಬೇಕು. ನಾನು ಈಗಾಗಲೇ ಹೆಚ್ಚಿನ ಗೇಮ್ ಆಡಿದ್ದೇನೆ. ಆದ್ದರಿಂದ ಒತ್ತಡವನ್ನು ಹೇಗೆ ತೆಗೆದುಕೊಳ್ಳಬೇಕು, ಅದನ್ನು ಹೇಗೆ ನಿಭಾಯಿಸಬೇಕು ಎಂಬುದನ್ನ ಕಲಿತಿದ್ದೇನೆ. ಬಹುಶಃ ಮುಂದೆ ನಾನು ಸ್ಟ್ರೈಕ್‌ರೇಟ್ ಕಡಿಮೆ ಮಾಡಬೇಕಾಗಬಹುದು ಎಂದು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k