Sunday, 22nd July 2018

Recent News

ಕ್ರಿಕೆಟ್ ಆಡುವಾಗ ಕುಸಿದು ಬಿದ್ದು ಯುವಕ ಸಾವು

ಮಂಗಳೂರು: ಕ್ರಿಕೆಟ್ ಆಟವಾಡುತ್ತಿದ್ದ ವೇಳೆ ಆಟಗಾರ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ.

ಮೃತ ಯುವಕನನ್ನು ಉಪ್ಪಳ ಜೋಡುಕಲ್ಲು ಕಯ್ಯಾರು ನಿವಾಸಿಯಾದ ನಾರಾಯಣ ಎಂಬವರ ಪುತ್ರ ಪದ್ಮನಾಭ ಎಂದು ಗುರುತಿಸಲಾಗಿದೆ. ಮೀಯಪದವು ಶಾಲಾ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ದೇರಂಬಲ ತಂಡದ ಆಟಗಾರನಾಗಿ ಪದ್ಮನಾಭ ತೆರಳಿದ್ದರು.

ಓವರಿನ ಕೊನೆಯ ಒಂದು ಎಸೆತದ ವೇಳೆ ಪದ್ಮನಾಭ ಕುಸಿದುಬಿದ್ದಿದ್ದಾರೆ. ಕೂಡಲೇ ಸಹ-ಆಟಗಾರರು ಈತನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ಯುವಷ್ಟರಲ್ಲಿ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

Leave a Reply

Your email address will not be published. Required fields are marked *