Connect with us

Districts

ಅನ್ನಭಾಗ್ಯದಲ್ಲೂ ಪ್ಲಾಸ್ಟಿಕ್ ಅಕ್ಕಿ ವಿತರಣೆ ಆರೋಪ- ರಬ್ಬರ್ ಬಾಲ್‍ನಂತೆ ಪುಟಿಯುತ್ತಿದೆ ಅನ್ನದ ಉಂಡೆ

Published

on

ಕೊಪ್ಪಳ: ಇದು ಇಡೀ ರಾಜ್ಯದ ಜನರು ಬೆಚ್ಚಿ ಬೀಳುವ ಸುದ್ದಿ. ಅಂಗಡಿ, ಮಾಲ್‍ಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಸಿಕ್ಕಿದ್ದಾಯ್ತು. ಇದೀಗ ಸರ್ಕಾರದ ವತಿಯಿಂದಲೇ `ಪ್ಲಾಸ್ಟಿಕ್ ಅಕ್ಕಿ’ ಭಾಗ್ಯ.

ಹೌದು. ಅನ್ನಭಾಗ್ಯ ಯೋಜನೆಯಡಿ ವಿತರಿಸಲಾಗಿರುವ ಅಕ್ಕಿ ಪ್ಲಾಸ್ಟಿಕ್ ಅಕ್ಕಿ ಎಂಬ ಆರೋಪ ಕೇಳಿಬಂದಿದೆ. ಕೊಪ್ಪಳ ಜಿಲ್ಲೆಯ ಪಡಿತರ ವಿತರಣಾ ಕೇಂದ್ರದಲ್ಲಿ ಪ್ಲಾಸ್ಟಿಕ್ ಅಕ್ಕಿ ವಿತರಣೆಯಾಗಿದೆ ಎಂದು ಆರೋಪಿಸಲಾಗಿದೆ.

ಗಂಗಾವತಿ ತಾಲೂಕಿನ ಶ್ರೀರಾಮನಗರ ಗ್ರಾಮದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಗ್ರಾಹಕರು ಮನೆಗೆ ಬಂದು ಪರಿಶೀಲನೆ ಮಾಡಿದಾಗ ಪ್ಲಾಸ್ಟಿಕ್ ಅಕ್ಕಿ ಎಂದು ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಅಕ್ಕಿ ಪಡೆದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ನೀವು ಓದ್ಲೇಬೇಕು, ಖರೀದಿಸಿದ ಅಕ್ಕಿ ಪ್ಲಾಸ್ಟಿಕ್ ಅಕ್ಕಿನಾ ಎಂದು ಕಂಡುಹಿಡಿಯೋಕೆ ಇಲ್ಲಿದೆ 5 ವಿಧಾನಗಳು

ಇದನ್ನೂ ಓದಿ: ಮೊಟ್ಟೆ ತಿನ್ನೋ ಬೆಂಗಳೂರಿಗರೇ ಎಚ್ಚರವಾಗಿರಿ!

ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರೋ ಆಹಾರ ಇಲಾಖೆ ಅಧಿಕಾರಿ ಗೀತಾ, ಸಾರ್ವಜನಿಕರಿಂದ ನಮಗೆ ಈ ಬಗ್ಗೆ ಮಾಹಿತಿ ಬಂದಿದೆ. ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಬೇರೆ ಕಡೆಯಲ್ಲೂ ಇದನ್ನ ಪರೀಕ್ಷೆ ಮಾಡಿ ದೃಢಪಡಿಸಿಕೊಳ್ತಿದ್ದೀವಿ. ಯಾಕಂದ್ರೆ ಒಂದು ಮನೆಯಲ್ಲಿ ಈ ರೀತಿ ಸಿಕ್ಕಿದೆ. ಅದೇ ನ್ಯಾಯಬೆಲೆ ಅಂಗಡಿಯಿಂದ ಅಕ್ಕಿ ತೆಗೆದುಕೊಂಡು ಹೋದ ಬೇರೆಯವರ ಮನೆಯಲ್ಲೂ ಇದನ್ನ ಚೆಕ್ ಮಾಡ್ತೀವಿ. ಈಗ ದೂರು ಬಂದಿರೋದು ಇದೊಂದೇ ಮನೆಯಿಂದ ಅಂತ ಹೇಳಿದ್ರು.

ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲೂ ಕೂಡ ಅನ್ನಭಾಗ್ಯ ಅಕ್ಕಿಯೇ ರಬ್ಬರ್ ಬಾಲ್‍ನಂತೆ ಪುಟಿಯುತ್ತಿದ್ದು ಜನರನ್ನ ದಂಗು ಬಡಿಸಿದೆ. ಮಾಗಡಿ ಟೌನ್‍ನ ಸೋಮೇಶ್ವರ ಕಾಲೋನಿ ಹಾಗೂ ತಾಲೂಕಿನ ಪರಂಗಿಚಿಕ್ಕನಪಾಳ್ಯದಲ್ಲಿ ಕಲಬೆರಕೆ ಅಕ್ಕಿಯಿಂದ ಮಾಡಿದ ಅನ್ನದ ಉಂಡೆ ರಬ್ಬರ್ ಬಾಲ್‍ನಂತೆ ಪುಟಿದ ಘಟನೆ ನಡೆದಿದೆ. ಸೋಮೇಶ್ವರ ಕಾಲೋನಿಯ ಶ್ರೀನಿವಾಸ್ ಹಾಗೂ ಪರಂಗಿಚಿಕ್ಕನಪಾಳ್ಯದ ನಿವಾಸಿ ಶಿವಕುಮಾರ್ ಎಂಬವರು ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ವಾರ ಅಕ್ಕಿಯನ್ನ ತಂದಿದ್ರು. ತಂದ ಅಕ್ಕಿ ಕಲಬೆರಕೆಯಿಂದ ಕೂಡಿದ್ದು, ಈ ಅಕ್ಕಿಯಿಂದ ಅನ್ನ ತಿಂದಾಗ ಮೈ ಕೈ ನೋವು ಬಂದು ಸಂಕಷ್ಟ ಅನುಭವಿಸ್ತಾ ಇದ್ರು. ಇದೀಗ ಪ್ಲಾಸ್ಟಿಕ್ ರೈಸ್ ಬಗ್ಗೆ ಸುದ್ದಿ ತಿಳಿದು ಅನ್ನವನ್ನ ಮುದ್ದೆ ಮಾಡಿ ನೆಲಕ್ಕೆ ಬಡಿದರೆ ಅದು ಪುಟಿಯುತ್ತಿದ್ದು ಇಷ್ಟು ದಿನ ತಿಂದದ್ದು ಪ್ಲಾಸ್ಟಿಕ್ ರೈಸಾ ಅನ್ನೋ ಗೊಂದಲಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: ಬೇಕರಿ ತಿನಿಸುಗಳಂದ್ರೆ ಇಷ್ಟನಾ? ಹಾಗಿದ್ರೆ ನೀವು ಈ ಸ್ಟೋರಿ ಓದ್ಲೇಬೇಕು

ಇದನ್ನೂ ಓದಿ: ಅಕ್ಕಿ, ಮೊಟ್ಟೆ ಆಯ್ತು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪ್ಲಾಸ್ಟಿಕ್ ಕ್ಯಾಬೇಜ್ – ವಿಡಿಯೋ ನೋಡಿ

ಹಾಸನದ ಅರಸೀಕರೆಯ ಬಿಜಿ ನಗರ ನಿವಾಸಿ ಸ್ವಾಮಿ ನಾಯ್ಕ ಎಂಬವರು ಈಗ ನಕಲಿ ಅಕ್ಕಿ ಕುರಿತು ದೂರು ನೀಡಿದ್ದಾರೆ. ಬಡಾವಣೆಯ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ತಿಂಗಳು ಖರೀದಿಸಿದ ಅಕ್ಕಿಯಲ್ಲಿ ಈ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿದೆ. ಅಕ್ಕಿ ಬೇಯಿಸಿ ಅನ್ನವನ್ನು ತಿಂದು ಕೆಲವರಿಗೆ ವಾಂತಿ ಬೇದಿ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿತ್ತು. ಸದ್ಯ ಅಕ್ಕಿಯನ್ನು ಆಹಾರ ಅಧಿಕಾರಿಗಳಿಗೆ ನೀಡಿದ್ದು ಪರಿಶೀಲನೆಗೆ ಮನವಿ ಮಾಡಿದ್ದಾರೆ. ಆಹಾರ ನಿರೀಕ್ಷಕ ಬಾಲಚಂದ್ರ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

https://www.youtube.com/watch?v=NfyNJVwLoqI

ಇದನ್ನೂ ಓದಿ: ನೀವು ತಿನ್ನುವ ಸಕ್ಕರೆ ಆರೋಗ್ಯಕ್ಕೆ ಎಷ್ಟು ಸೇಫ್?- ನೀರಿಗೆ ಹಾಕಿ ಪರೀಕ್ಷೆ ಮಾಡಿ

https://www.youtube.com/watch?v=OcNJ_ZrwYJM

Click to comment

Leave a Reply

Your email address will not be published. Required fields are marked *