ವಾಷಿಂಗ್ಟನ್: ವಿಮಾನ ಕ್ರ್ಯಾಶ್ ಆಗಿ ರೈಲು ಹಳಿಗಳ ಮೇಲೆ ಬಿದ್ದಿದ್ದ ಪೈಲಟ್‍ನ್ನು ರಕ್ಷಿಸಿರೋ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಈ ಭಯಾನಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅದೃಷ್ಟ ನೆಟ್ಟಗಿದ್ರೆ ಸಾವು ಕೂಡ ಟಚ್ ಮಾಡೋಕೆ ಹಿಂದೆ ಮುಂದೆ ನೋಡ್ಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಪಕೊಮಿಯಾದಲ್ಲಿ ಟೇಕ್ ಆಫ್ ಆದ ಕೆಲವೇನಿಮಿಷದಲ್ಲಿ ವಿಮಾನ ರೈಲು ಹಳಿಗೆ ಬಿದ್ದಿದೆ. ಇತ್ತ ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಕೆಳಕ್ಕೆ ಬಿದ್ದ ಪೈಲಟ್‍ನ ಪ್ರಾಣ ಅಧಿಕಾರಿಗಳ ಸಮಯೋಚಿತ ನಡತೆಯಿಂದ ಉಳಿದಿದೆ ಎಂದು ಸ್ಥಳೀಯ ಮಾಧ್ಯಮ ವರದಿಮಾಡಿದೆ. ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!
ವಿಮಾನ ಕೆಳಕ್ಕೆ ಬಿದ್ದೊಡನೆ ರೈಲು ಹಳಿಗಳ ಮೇಲೆ ಬಿದ್ದ ಪೈಲಟ್ ಕಂಡು ರೈಲು ನಿಲ್ಲಿಸುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಬಳಿಕ ಕೂದಲೆಳೆ ಅಂತರದಲ್ಲಿ ರೈಲು ನಿಂತಿದೆ. ಹಾಗಾಗಿ ತೀವ್ರವಾಗಿ ಗಾಯಗೊಂಡ ಪೈಲಟ್ ಪ್ರಾಣ ಉಳಿದಿದೆ ಎಂದು ಸ್ಥಳೀಯ ಮಾಧ್ಯಮ ತಿಳಿಸಿದೆ. ಇದನ್ನೂ ಓದಿ: ಜಿಎಸ್‍ಟಿ ನೋಟಿಸ್‌ನಲ್ಲಿ ಮೊತ್ತ ನೋಡಿ ಶಾಕ್ ಆದ ದಂಪತಿ!