ಬೆಂಗಳೂರು: ದೊಡ್ಡ ಮಟ್ಟದ ರಾಜಕೀಯ ಮನ್ವಂತರಕ್ಕೆ ಕರ್ನಾಟಕ ಭೂಮಿಕೆಯಾಗಲಿದೆ ಅಂತ ಕಳೆದ ವಾರದವರೆಗೂ ಯಾರೊಬ್ಬರೂ ಊಹಿಸಿರಲಿಲ್ಲ. ಹೌದು, ರಾಷ್ಟ್ರ ರಾಜಕಾರಣದ ಸಂಭಾವ್ಯ ಬದಲಾವಣೆಗೆ ಮುನ್ನುಡಿ ಬರೆಯಲು ಕರ್ನಾಟಕ ಹೊರಟಿದೆ.
ಕರ್ನಾಟಕದ ವರ್ತಮಾನದ ರಾಜಕೀಯ ವಿದ್ಯಮಾನವನ್ನೇ ಆಧಾರವಾಗಿಟ್ಟುಕೊಂಡು, ಮೋದಿ ವಿರುದ್ಧ ಮುನ್ನುಗ್ಗಲೇಬೇಕು ಎಂಬ ಛಲದಿಂದ ದೇಶದ ಬಿಜೆಪಿಯೇತರ ಮುಂಚೂಣಿ ನಾಯಕರೆಲ್ಲಾ ದೋಸ್ತಿ ಮಂತ್ರ ಜಪಿಸುತ್ತಾ ಬಿಗ್ ದಂಗಲ್ ಅಖಾಡಕ್ಕಿಳಿದಿದ್ದಾರೆ ಅಂತಾ ಹೇಳಲಾಗ್ತಿದೆ.
ಕರ್ನಾಟಕವೂ ಸೇರಿದಂತೆ ದೇಶದ 17ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಹಾಘಟ ಬಂಧನ ಏರ್ಪಡುವ ಸಾಧ್ಯತೆ ನಿಚ್ಛಳವಾದಂತಿದೆ. ಬುಧವಾರ ಹೆಚ್.ಡಿ.ಕುಮಾರಸ್ವಾಮಿ ಪದಗ್ರಹಣ ಸಮಾರಂಭ ಕೇವಲ ಅಧಿಕಾರ ಹಿಡಿಯುವ ಕಾರ್ಯಕ್ರಮಕ್ಕೆ ಸೀಮಿತವಾಗದೇ ಮೋದಿ ವಿರುದ್ಧ ಶಕ್ತಿ ಪ್ರದರ್ಶನದ ವೇದಿಕೆಯಾಗಿ ಮಾರ್ಪಡಲಿದೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಅಧ್ಯಕ್ಷ ರಾಹುಲ್ ಗಾಂಧಿ, ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ, ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಮೋದಿಯ ಎದುರಾಳಿಗಳೆಲ್ಲಾ ಈ ಪ್ರಮಾಣ ವಚನಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಮೂಲಕ 2019ರ ಕುರುಕ್ಷೇತ್ರಕ್ಕೆ ಬೆಂಗಳೂರಿನಿಂದಲೇ ಪಾಂಚಜನ್ಯ ಮೊಳಗಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ. ಹಾಗಾದ್ರೆ ಈ ಮಹಾಮೈತ್ರಿ ಮೋದಿಗೆ ಯಾಕೆ ಎಚ್ಚರಿಕೆಯ ಗಂಟೆ..? ಇದು ಮೋದಿಗೆ ಯಾವ ಸಂದೇಶ ರವಾನಿಸಲಿದೆ..? ಯಾರೆಲ್ಲಾ ಮೋದಿ ವಿರುದ್ಧ ನಿಂತಿದ್ದಾರೆ..? ತ್ರಿಶೂಲ ವ್ಯೂಹದ ಒಳಸುಳಿ ಏನು..? ಎಂಬವುದು ಈ ಕೆಳಗಿನಂತಿದೆ.
ತ್ರಿಶೂಲ ವ್ಯೂಹ..!
1. ತ್ರಿಶೂಲ ವ್ಯೂಹ – ಹೆಚ್.ಡಿ.ದೇವೇಗೌಡ
ಕರ್ನಾಟಕ – ಕಾಂಗ್ರೆಸ್ + ಜೆಡಿಎಸ್
ಲೋಕಸಭಾ ಸ್ಥಾನ – 28
2. ತ್ರಿಶೂಲ ವ್ಯೂಹ – ಮಾಯಾವತಿ – ಅಖಿಲೇಶ್ ಯಾದವ್
ಉತ್ತರ ಪ್ರದೇಶ -ಕಾಂಗ್ರೆಸ್ + ಎಸ್‍ಪಿ+ ಬಿಎಸ್‍ಪಿ
ಲೋಕಸಭಾ ಸ್ಥಾನ – 80
3. ತ್ರಿಶೂಲ ವ್ಯೂಹ – ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ – ಕಾಂಗ್ರೆಸ್ + ತೃಣಮೂಲ ಕಾಂಗ್ರೆಸ್
ಲೋಕಸಭಾ ಸ್ಥಾನ – 42
4. ತ್ರಿಶೂಲ ವ್ಯೂಹ – ತೇಜಸ್ವಿ ಯಾದವ್
ಬಿಹಾರ – ಕಾಂಗ್ರೆಸ್ + ಆರ್ ಜೆಡಿ
ಲೋಕಸಭಾ ಸ್ಥಾನ – 40
5. ತ್ರಿಶೂಲ ವ್ಯೂಹ – ಚಂದ್ರಬಾಬು ನಾಯ್ಡು
ಆಂಧ್ರಪ್ರದೇಶ – ಕಾಂಗ್ರೆಸ್ + ಟಿಡಿಪಿ
ಲೋಕಸಭಾ ಸ್ಥಾನ – 25
6. ತ್ರಿಶೂಲ ವ್ಯೂಹ – ಚಂದ್ರಶೇಖರ್ ರಾವ್
ತೆಲಂಗಾಣ – ಕಾಂಗ್ರೆಸ್ + ಟಿಆರ್‍ಎಸ್
ಲೋಕಸಭಾ ಸ್ಥಾನ – 17
7. ತ್ರಿಶೂಲ ವ್ಯೂಹ – ಸ್ಟಾಲಿನ್
ತಮಿಳುನಾಡು – ಕಾಂಗ್ರೆಸ್ + ಡಿಎಂಕೆ
ಲೋಕಸಭಾ ಸ್ಥಾನ – 39
8. ತ್ರಿಶೂಲ ವ್ಯೂಹ – ಪಿಣರಾಯಿ ವಿಜಯನ್
ಕೇರಳ – ಯುಡಿಎಫ್ + ಎಲ್‍ಡಿಎಫ್
ಲೋಕಸಭಾ ಸ್ಥಾನ – 20
9. ತ್ರಿಶೂಲ ವ್ಯೂಹ – ಅರವಿಂದ್ ಕೇಜ್ರಿವಾಲ್
ದೆಹಲಿ – ಕಾಂಗ್ರೆಸ್ + ಆಪ್
ಲೋಕಸಭಾ ಸ್ಥಾನ – 07
10. ತ್ರಿಶೂಲ ವ್ಯೂಹ – ಶರದ್ ಪವಾರ್
ಮಹಾರಾಷ್ಟ್ರ – ಕಾಂಗ್ರೆಸ್ + ಎನ್‍ಸಿಪಿ + ಶಿವಸೇನೆ
ಲೋಕಸಭಾ ಸ್ಥಾನ – 48
11. ತ್ರಿಶೂಲ ವ್ಯೂಹ – ಹೇಮಂತ್ ಸೊರೇನ್
ಜಾರ್ಖಂಡ್ – ಕಾಂಗ್ರೆಸ್ + ಜೆಎಂಎಂ
ಲೋಕಸಭಾ ಸ್ಥಾನ – 14
12. ತ್ರಿಶೂಲ ವ್ಯೂಹ – ಅಭಯ್ ಸಿಂಗ್ ಚೌಟಾಲ
ಹರಿಯಾಣ – ಕಾಂಗ್ರೆಸ್ + ಲೋಕದಳ
ಲೋಕಸಭಾ ಸ್ಥಾನ – 10
13. ತ್ರಿಶೂಲ ವ್ಯೂಹ – ಕ್ಯಾಪ್ಟನ್ ಅಮರೇಂದರ್ ಸಿಂಗ್
ಪಂಜಾಬ್ – ಕಾಂಗ್ರೆಸ್ + ಆಮ್ ಆದ್ಮಿ
ಲೋಕಸಭಾ ಸ್ಥಾನ – 13
14. ತ್ರಿಶೂಲ ವ್ಯೂಹ – ನವೀನ್ ಪಟ್ನಾಯಕ್
ಒಡಿಶಾ – ಕಾಂಗ್ರೆಸ್ + ಬಿಜು ಜನತಾದಳ
ಲೋಕಸಭಾ ಸ್ಥಾನ – 21
15. ತ್ರಿಶೂಲ ವ್ಯೂಹ – ಮೌಲಾನಾ ಬದ್ರುದ್ದೀನ್ ಅಜ್ಮಲ್
ಅಸ್ಸಾಂ – ಕಾಂಗ್ರೆಸ್ + ಎಐಯುಡಿಎಫ್
ಲೋಕಸಭಾ ಸ್ಥಾನ – 14
16. ತ್ರಿಶೂಲ ವ್ಯೂಹ – ಓಮರ್ ಅಬ್ದುಲ್ಲಾ
ಜಮ್ಮು ಕಾಶ್ಮೀರ – ಕಾಂಗ್ರೆಸ್ + ಜೆಎನ್‍ಸಿ
ಲೋಕಸಭಾ ಸ್ಥಾನ – 06
ತ್ರಿಶೂಲ ವ್ಯೂಹ – ಮೋದಿ ಸೋಲಿಸಲು ಮಹಾ ಸ್ಕೆಚ್..!
ಮಹಾಮೈತ್ರಿ – 424 ಸ್ಥಾನ
ಒಟ್ಟು ಲೋಕಸಭೆ ಸ್ಥಾನ – 543