ಬೆಂಗಳೂರು: ಜನಾರ್ದನ ರೆಡ್ಡಿ ಅವರನ್ನು ವಶಕ್ಕೆ ಪಡೆಯುವ ಮಾಹಿತಿ ಸಿಸಿಬಿಯಿಂದಲೇ ಸೋರಿಕೆ ಆಯ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ.
ಚೀಟಿಂಗ್ ಕೇಸ್ ನಲ್ಲಿ ರೆಡ್ಡಿ ಪಾತ್ರ ಇದೆ ಎನ್ನುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸಿಸಿಬಿ ಜನಾರ್ದನ ರೆಡ್ಡಿಯ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ಆದರೆ ಸಿಸಿಬಿಯಿಂದಲೇ ಮಾಹಿತಿ ಸೋರಿಕೆಯಾಗಿ ರೆಡ್ಡಿ ಈಗ ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
Advertisement
Advertisement
ಅಂಬಿಡೆಂಟ್ ಚೀಟಿಂಗ್ ಕೇಸ್ ನಲ್ಲಿ ರೆಡ್ಡಿ ಪಿಎ ಅಲಿಖಾನ್ ಪಾತ್ರ ಇದೆ ಎಂದು ಗೊತ್ತಾದ ತಕ್ಷಣ ಡಿಸಿಪಿ ಗಿರೀಶ್ ಅವರು ಆಳವಾದ ತನಿಖೆ ನಡೆಸಿದ್ದರು. ಈ ಪ್ರಕರಣದಲ್ಲಿ ರೆಡ್ಡಿ ಪಾತ್ರ ಇದೆ ಎಂದು ಆಧಾರ ಸಿಕ್ಕ ಬಳಿಕ ಅಲೋಕ್ ಕುಮಾರ್ ಅವರು ನೇರವಾಗಿ ಸಿಎಂಗೆ ಮಾಹಿತಿ ನೀಡಿದ್ದರು. ಈ ವಿಚಾರದ ಬಗ್ಗೆ ಶನಿವಾರ ಡಿಕೆ ಶಿವಕುಮಾರ್ ಜೊತೆ ಸಿಎಂ ಕುಮಾರಸ್ವಾಮಿ ಅವರು ಸಹ ಮಾತುಕತೆ ನಡೆಸಿದ್ದರು ಎನ್ನಲಾಗಿದೆ.
Advertisement
ಈ ವಿಚಾರಕ್ಕೆ ಸಂಬಂಧಪಟ್ಟಂತೆ ಉಪಚುನಾವಣೆ ಫಲಿತಾಂಶದರೆಗೂ ಸುಮ್ಮನಿರುವಂತೆ ಡಿಕೆಶಿ ಸೂಚನೆ ನೀಡಿದ್ದರು ಎನ್ನಲಾಗಿದೆ. ರೆಡ್ಡಿ ಪ್ರತಿಯೊಂದು ಚಲನವಲನದ ಬಗ್ಗೆ ಸಿಸಿಬಿ ಮಾಹಿತಿ ಪಡೆಯುತಿತ್ತು. ಸಿಸಿಬಿ ತನ್ನನ್ನು ವಶಕ್ಕೆ ಪಡೆಯಲು ಸಿದ್ಧತೆ ನಡೆಸುತ್ತಿದೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ರೆಡ್ಡಿ ಬಳ್ಳಾರಿಯಿಂದ ಹೈದರಾಬಾದಿಗೆ ತೆರಳಿದ್ದಾರೆ. ಈಗ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಎಲ್ಲಿದ್ದಾರೆ ಎನ್ನುವುದು ಗೊತ್ತಿಲ್ಲ.
Advertisement
ಉಪಚುನಾವಣೆಯವರೆಗೆ ಮೊಳಕಾಲ್ಮೂರು ತೋಟದ ಮನೆಯಲ್ಲೇ ಇದ್ದ ರೆಡ್ಡಿ ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಸಿಸಿಬಿ ಪೊಲೀಸರು ರೆಡ್ಡಿ ಪತ್ತೆಗಾಗಿ ನಿನ್ನೆ ಇಡೀ ದಿನ ಬೆಂಗಳೂರಿನ ಕೋರಮಂಗಲ, ಪಾರಿಜಾತ ನಿವಾಸ, ದೇವನಹಳ್ಳಿ, ಮೊಳಕಾಲ್ಮೂರಿನಲ್ಲಿ ಹುಡುಕಾಟ ನಡೆಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv