ಗದಗ: ನಗರಕ್ಕೆ ಕುಡಿಯುವ ನೀರು ಒದಗಿಸುವ ಯೋಜನೆಯ ಉದ್ಘಾಟನೆ ಆಗುವ ಮುನ್ನವೇ ಕಾಮಗಾರಿಯ ಪೈಪು ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದೆ.
Advertisement
ಜಿಲ್ಲೆಯ ಮುಂಡರಗಿ ತಾಲೂಕಿನ ಬರದೂರು ಗ್ರಾಮದ ಬಳಿ ಪೈಪ್ ಒಡೆದಿದ್ದು ನೀರು ಪೋಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗದಗ-ಬೆಟಗೇರಿ ಅವಳಿ ನಗರಕ್ಕೆ 24*7 ಯೋಜನೆಗೆ ಶಂಕುಸ್ಥಾಪನೆ ನೆರೆವೇರಿಸಿದ್ದರು. ಈ ಯೋಜನೆಯ ಮೂಲಕ ನಗರದ ಜನರ ದಾಹ ನೀಗಿಸಿಬೇಕ್ಕಿದ ನೀರು ಮಾರ್ಗ ಮಧ್ಯೆಯೇ ವ್ಯರ್ಥವಾಗಿ ಹರಿದು ಹೋಗುತ್ತಿದೆ.
Advertisement
Advertisement
ಪೈಪ್ ಒಡೆದಿದ್ದರಿಂದ ಬರದೂರು ಗ್ರಾಮದ ರೈತ ಚೆನ್ನಪ್ಪ ನಾಡಗೌಡರ ಹಾಗೂ ತಿಪ್ಪವ್ವ ಎಂಬವರ ಜಮೀನಿಗೆ ನೀರು ನುಗ್ಗಿದೆ. ಇದ್ರಿಂದ ಬರಗಾಲದಲ್ಲಿ 5 ಎಕರೆಯಲ್ಲಿ ಕಷ್ಟಪಟ್ಟು ಬೆಳೆದಿದ್ದ ಸೂರ್ಯಕಾಂತಿ ಬೆಳೆ ಜಲಾವೃತಗೊಂಡಿದೆ. ಅಧಿಕಾರಿಗಳ ಅಸಮರ್ಪಕ ಕಾಮಗಾರಿಯೇ ಇದಕ್ಕೆಲ್ಲಾ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Advertisement