ಬೆಂಗಳೂರು: ಪಿಂಕ್ ಹೊಯ್ಸಳ ಕೇಳಿದ್ರಿ, ಈಗ ಪಿಂಕ್ ಟಾಯ್ಲೆಟ್ ಬೆಂಗಳೂರಿಗೆ ಬರುತ್ತಿವೆ. ಯುವತಿಯರು, ಹೆಣ್ಣು ಮಕ್ಕಳು, ಮಹಿಳೆಯರ ರಕ್ಷಣೆಗೆ ಅಂತ ಮೂಡಿಬಂದಿರುವ ಹೊಸ ಪರಿಕಲ್ಪನೆ ಇದು.
ದೆಹಲಿಯಲ್ಲಿರೋ ಮಾದರಿ ಪಿಂಕ್ ಟಾಯ್ಲೆಟ್‍ಗಳನ್ನು ಬೆಂಗಳೂರಿಗೆ ತರೋಕೆ ಯೋಜನೆ ಸಿದ್ದವಾಗಿದೆ. ರಾಷ್ಟ್ರೀಯ ಮಕ್ಕಳು ಹಕ್ಕುಗಳ ಆಯೋಗ ಪಿಂಕ್ ಟಾಯ್ಲೆಟ್ ಯೋಜನೆಗೆ ಚಾಲನೆ ನೀಡುವಂತೆ ರಾಜ್ಯ ಮಕ್ಕಳ ಆಯೋಗಕ್ಕೆ ಸೂಚಿಸಿದೆ. ಸ್ವಚ್ಛತೆ, ರಕ್ಷಣೆ ಇದರ ಮುಖ್ಯ ಉದ್ದೇಶವಾಗಿದ್ದು, ದಿನದ 24 ತಾಸು ಕಾರ್ಯನಿರ್ವಹಿಸುತ್ತದೆ.
Advertisement
Advertisement
ಇದರ ಉಸ್ತುವಾರಿಯನ್ನ ಮಹಿಳೆಯರೇ ನೋಡಿಕೊಳ್ಳುತ್ತಾರೆ. ಸಾಲದ್ದಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ಯಂತ್ರಗಳನ್ನ ಕೂಡ ಅಳವಡಿಸಲಾಗಿರುತ್ತೆ. ಮೊಬೈಲ್ ಆ್ಯಪ್‍ಗಳಿಂದ ಇವುಗಳು ಇರುವ ಸ್ಥಳ ಕೂಡ ಗೊತ್ತಾಗುವಂತೆ ಮಾಡುವ ಉದ್ದೇಶ ಇದೆ.
Advertisement
Advertisement
ಈ ಪತ್ರದಿಂದ ಪ್ರೇರಿತವಾಗಿರೋ ರಾಜ್ಯ ಮಕ್ಕಳ ಆಯೋಗ, ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಪಿಂಕ್ ಟಾಯ್ಲೆಟ್ ಮಾಡೋ ಇರಾದೆ ವ್ಯಕ್ತಪಡಿಸಿದೆ.