ಜೈಪುರ: ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ತಂದೆ, ತಾಯಿಯನ್ನು ಖುಷಿಯಿಂದ ನೋಡಿಕೊಳ್ಳಬೇಕು ಮತ್ತು ಅವರಿಗೆ ಕೀರ್ತಿ ತರಬೇಕು ಎಂಬ ಕನಸು ಇರುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಪೈಲಟ್ ಓರ್ವ ವಿಮಾನವನ್ನು ಚಲಾಯಿಸುವ ಮೂಲಕ ತನ್ನ ತಂದೆ, ತಾಯಿಯನ್ನು ರಾಜಸ್ಥಾನದ ಜೈಪುರಕ್ಕೆ ಬಿಟ್ಟು, ಮನೆಗೆ ಕಳುಹಿಸಿಕೊಟ್ಟಿದ್ದಾನೆ. ಆದರೆ ವಿಮಾನ ಹತ್ತಿದ ಪೋಷಕರಿಗೆ ವಿಮಾನ ಚಲಾಯಿಸಲು ಹೊರಟಿರುವುದು ತಮ್ಮ ಮಗ ಎಂಬ ವಿಚಾರ ತಿಳಿಯದೇ ಕೊನೆಗೆ ಶಾಕ್ ಆಗಿದ್ದಾರೆ.
Advertisement
ಪೈಲಟ್ ಕಮಲ್ ಕುಮಾರ್ ಅವರು ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇಲ್ಲಿಯವರೆಗೂ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ವೀಡಿಯೋದಲ್ಲಿ ಪೋಷಕರು ವಿಮಾನವನ್ನು ಹತ್ತುತ್ತಾರೆ. ಈ ವೇಳೆ ಇದ್ದಕ್ಕಿದ್ದಂತೆ ತಮ್ಮ ಮಗನನ್ನು ಪ್ರವೇಶದ್ವಾರದಲ್ಲಿ ನೋಡಿ ಆಶ್ಚರ್ಯಗೊಳ್ಳುತ್ತಾರೆ. ನಂತರ ಮಗನ ಕೈ ಹಿಡಿದು ತಾಯಿ ನಗುತ್ತಾರೆ. ಅಲ್ಲದೇ ಕಾಕ್‍ಪಿಟ್‍ನಲ್ಲಿ ಕಮಲ್ ತನ್ನ ಪೋಷಕರೊಂದಿಗೆ ಕುಳಿತಿರುವ ದೃಶ್ಯವನ್ನು ಸಹ ವೀಡಿಯೋದಲ್ಲಿ ನೋಡಬಹುದಾಗಿದೆ. ಇದನ್ನೂ ಓದಿ: ದೇಶದಲ್ಲೇ ಮೊದಲ ಬಾರಿಗೆ ವ್ಯಕ್ತಿಯಲ್ಲಿ ಆಫ್ರಿಕನ್ ಹಂದಿಜ್ವರ ಪತ್ತೆ
Advertisement
View this post on Instagram
Advertisement
ನಾನು ಚಲಾಯಿಸುವುದನ್ನು ಪ್ರಾರಂಭಿಸಿದಾಗಿನಿಂದಲೂ ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ ಮತ್ತು ಕೊನೆಗೂ ಜೈಪುರದಲ್ಲಿರುವ ನಮ್ಮ ಮನೆಗೆ ತಂದೆ, ತಾಯಿಯನ್ನು ತಲುಪಿಸಲು ನನಗೆ ಅವಕಾಶ ಸಿಕ್ಕಿತು. ಈ ಅನುಭವವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ ಎಂದು ವೀಡಿಯೋ ಜೊತೆಗೆ ಕಮಲ್ ಕುಮಾರ್ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಿದ್ದು, ಡಿಕೆಶಿಯನ್ನು ತೆಗಳಿ, ಖರ್ಗೆ, ಹರಿಪ್ರಸಾದ್‌ರನ್ನು ಹೊಗಳಿದ ಈಶ್ವರಪ್ಪ
Advertisement
ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ. ಅಲ್ಲದೇ ಕಾಮೆಂಟ್ ಮಾಡುವ ಮೂಲಕ ಕಮಲ್ ಕುಮಾರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.