– ಮದ್ವೆಯಾಗೋದಾಗಿ ಅಪ್ರಾಪ್ತ ಗೆಳೆಯನಿಂದ ರೇಪ್
ಮುಂಬೈ: ಅಪ್ರಾಪ್ತ ಹುಡುಗನೊಬ್ಬ ಮದುವೆಯಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಅನೇಕ ಬಾರಿ ಅತ್ಯಾಚಾರ ಎಸಗಿರುವ ಘಟನೆ ನಗರದಲ್ಲಿ ನಡೆದಿದೆ.
ಸಂತ್ರಸ್ತೆ ತಾಯಿ ಮಗಳ ರೂಮಿನಲ್ಲಿ ಗರ್ಭಪಾತದ ಮಾತ್ರೆಗಳನ್ನು ನೋಡಿದ ನಂತರ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಅಪ್ರಾಪ್ತೆಗೆ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಅಪ್ರಾಪ್ತ ಹುಡುಗನನ್ನು ಬೋರಿವಾಲಿ ಪೊಲೀಸರು ಬಂಧಿಸಿದ್ದಾರೆ.
Advertisement
Advertisement
ಆರೋಪಿ ಮತ್ತು 16 ವರ್ಷದ ಸಂತ್ರಸ್ತೆ ಶಾಲೆಗೆ ಹೋಗುವಾಗ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಇಬ್ಬರು ಪ್ರೀತಿಸುತ್ತಿದ್ದರು. ನಂತರ ಆರೋಪಿ ಸಂತ್ರಸ್ತೆಗೆ ಮದುವೆಯಾವುದಾಗಿ ಭರವಸೆ ನೀಡಿ, ಪದೇ ಪದೇ ಆಕೆಯನ್ನು ತನ್ನ ರೂಮಿಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಕಳೆದ ವಾರ ಸಂತ್ರಸ್ತೆಯ ತಾಯಿಗೆ ಮಗಳ ರೂಮಿನಲ್ಲಿ ಗರ್ಭಪಾತದ ಮಾತ್ರೆಗಳು ಕಂಡುಬಂದಿದೆ. ಇದರಿಂದ ಗಾಬರಿಯಾದ ತಾಯಿ ಮಗಳನ್ನು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ತನ್ನ ಗೆಳೆಯ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ನಡೆದ ಘಟನೆಯ ಬಗ್ಗೆ ವಿವರಿಸಿದ್ದಾಳೆ. ತಕ್ಷಣ ತಾಯಿ ಬೋರಿವಾಲಿ ಪೊಲೀಸ್ ಠಾಣೆ ಹೋಗಿ ದೂರು ದಾಖಲಿಸಿದ್ದಾರೆ.
Advertisement
ಸದ್ಯಕ್ಕೆ ಬೋರಿವಾಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಅಪ್ರಾಪ್ತ ಹುಡುಗನ ವಿರುದ್ಧ ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ತಾಯಿ ಸಂತ್ರಸ್ತೆಯ ರೂಮಿನಲ್ಲಿ ಗರ್ಭಪಾತದ ಮಾತ್ರೆಗಳನ್ನು ನೋಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ ಇನ್ಸ್ ಪೆಕ್ಟರ್ ಲಕ್ಷ್ಮಣ್ ಡುಂಬ್ರೆ ಹೇಳಿದ್ದಾರೆ.