ನವದೆಹಲಿ: ವಂದೇ ಮಾತರಂಗೂ ಜನ ಗಣ ಮನ ರಾಷ್ಟ್ರಗೀತೆಯಷ್ಟೇ ಗೌರವ ಸಿಗಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಬಿಜೆಪಿ ನಾಯಕ ಹಾಗೂ ಹಿರಿಯ ವಕೀಲ ಅಶ್ವಿನಿ ಉಪಾಧ್ಯಾಯ ದೆಹಲಿಯ ಹೈಕೋರ್ಟ್‌ಗೆ ಈ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಎಲ್ಲ ಶಾಲೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಗೀತೆಯ ಜೊತೆಗೆ ವಂದೇ ಮಾತರಂ ಹಾಡುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸುವಂತೆ ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಕುತುಬ್ ಮಿನಾರ್ ಬಳಿ ಪೂಜೆ ಮಾಡುವ ಹಕ್ಕು ಯಾರಿಗೂ ಇಲ್ಲ – ASI ಖಡಕ್ ಉತ್ತರ
Advertisement
Advertisement
‘ವಂದೇ ಮಾತರಂ’ ನಮ್ಮ ಇತಿಹಾಸ, ಸಾರ್ವಭೌಮತೆ, ಏಕತೆ ಮತ್ತು ಹೆಮ್ಮೆಯ ಸಂಕೇತವಾಗಿದೆ. ಯಾವುದೇ ನಾಗರಿಕರು ಯಾವುದೇ ಬಹಿರಂಗ ಅಥವಾ ರಹಸ್ಯ ಕೃತ್ಯದಿಂದ ಅಗೌರವ ತೋರಿದರೆ ಅದು ಸಮಾಜ ವಿರೋಧಿ ಚಟುವಟಿಕೆ ಮಾತ್ರವಲ್ಲದೇ ನಮ್ಮ ಹಕ್ಕುಗಳ ವಿನಾಶವಾಗುತ್ತದೆ. ದೇಶದ ಸಾರ್ವಭೌಮ ಪ್ರಜೆಯಾಗಿರಲು ವಂದೇ ಮಾತರಂ ಗೀತೆಗೆ ಗೌರವ ನೀಡಬೇಕು. ಇದಕ್ಕೆ ಅಗೌರವ ಕಂಡು ಬಂದಲ್ಲಿ ತಡೆಯಬೇಕು ಎಂದು ಕೋರಿದ್ದಾರೆ.
Advertisement
ದೇಶದಲ್ಲಿ ಎಲ್ಲೆಡೆ ವಂದೇ ಮಾತರಂ ನುಡಿಸಿದಾಗ ಎಲ್ಲರೂ ಎದ್ದುನಿಂತು ರಾಷ್ಟ್ರಗೀತೆಗೆ ನೀಡುವಂತೆ ಗೌರವ ನೀಡಬೇಕು, ಇದನ್ನು ನಾಟಕೀಯಗೊಳಿಸಬಾರದು. ಅಲ್ಲದೇ ವಾಣಿಜ್ಯ ಉಪಯೋಗಕ್ಕೆ ಗೀತೆಯನ್ನು ಬಳಸಿಕೊಳ್ಳಬಾರದು ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ರಹಸ್ಯ ಬಯಲಾಗುತ್ತೆಂಬ ಭಯಕ್ಕೆ ಮಾಜಿ ಚಾಲಕನ ಹತ್ಯೆಗೈದ YSRCP ಮುಖಂಡ