ರಾಜಸ್ಥಾನ: ಮಾನವರು ಆಸ್ತಿ ಮಾಡುವುದನ್ನು ನಾವು ಕೇಳಿದ್ದೇವೆ, ಆದರೆ ಪ್ರಾಣಿ ಪಕ್ಷಿಗಳ ಹೆಸರಿನಲ್ಲೂ ಆಸ್ತಿ ಮಾಡಿರುವುದನ್ನು ಕೇಳಿದ್ದೀರ. ರಾಜಸ್ಥಾನದ ನಾಗ್ಪುರ ಜಿಲ್ಲೆಯ ಜಸನಗರ್ ಊರಿನಲ್ಲಿರುವ ಪಾರಿವಾಳಗಳ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ.
ಪಾರಿವಾಳಗಳ ಹೆಸರಿನಲ್ಲಿ 27 ಅಂಗಡಿಗಳು, 126 ದೊಡ್ಡ ಭೂಮಿ, ಬ್ಯಾಂಕ್‍ನಲ್ಲಿ 30 ಲಕ್ಷ ರೂ ಹಣ ಸೇರಿದಂತೆ ಪಾರಿವಾಳಗಳ ಹೆಸರಿನಲ್ಲಿ 470 ಹಸುಗಳಿರುವ ಒಂದು ಗೋಶಾಲೆಯನ್ನೂ ನಡೆಸಲಾಗುತ್ತಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಡಿಜಿಟಲ್ ರ‍್ಯಾಲಿಗಳಿಗೆ ಬಿಜೆಪಿ ಸಂಪೂರ್ಣ ತಯಾರಿ ನಡೆಸಿದೆ: ಅಜಯ್ ಭಟ್
Advertisement
Advertisement
40 ವರ್ಷಗಳ ಹಿಂದೆ ಗುರು ಮುರುಧರ್ ಕೇಸರಿ ಎನ್ನುವ ಗುರುವಿನಿಂದ ಪ್ರೇರಣೆ ಪಡೆದ ಮಾಜಿ ಸರಪಂಚ್ ರಾಮದಿನ್ ಚೋಟಿಯಾ ಕಬುವಾನ್ ಎನ್ನುವ ಟ್ರಸ್ಟ್ ಪಾರಿವಾಳಗಳ ರಕ್ಷಣೆಗಾಗಿ ಸ್ಥಾಪಿಸಿದರು. ಈ ಮೂಲಕ ಪಾರಿವಾಗಳಿಗೆ ಪ್ರತಿದಿನ ನೀರು ಮತ್ತು ಆಹಾರ ಧಾನ್ಯಗಳ ಪೂರೈಕೆ ಮಾಡಲಾಗಿತ್ತದೆ. ಟ್ರಸ್ಟ್ ಮೂಲಕ 27 ಅಂಗಡಿಗಳನ್ನು ನಿರ್ಮಿಸಿ ಅದರಿಂದ ಬಂದ ಆದಾಯದ ಮೂಲಕ ಪಾರಿವಾಳಗಳಿಗೆ 3 ಚೀಲ ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಇದನ್ನೂ ಓದಿ: ಹಿಮದಿಂದ ಆವೃತವಾದ ಫೋಟೋ ಶೇರ್ ಮಾಡಿ ‘ಭೂಮಿಯ ಮೇಲಿನ ಸ್ವರ್ಗ’ ಎಂದ ರೈಲ್ವೇ ಸಚಿವ
Advertisement
Advertisement
ಪಾರಿವಾಳಗಳ ಬಳಿ ಇದೆ ಲಕ್ಷಾಂತರ ರೂಪಾಯಿ: 3 ಚೀಲ ಭತ್ತವನ್ನು 4 ಸಾವಿರ ರೂ ಖರ್ಚಿನಲ್ಲಿ ಪಾರಿವಾಳಗಳಿಗೆ ನೀಡಲಾಗುತ್ತದೆ ಇನ್ನು 470 ಹಸುಗಳಿರುವ ಗೋಶಾಲೆಗೂ ಆಹಾರ ಪೂರೈಸಲಾಗುತ್ತದೆ. ಟ್ರಸ್ಟ್‌ಗೆ ಅಂಗಡಿಗಳ ಬಾಡಿಗೆಯಿಂದ ತಿಂಗಳಿಗೆ 80 ಸಾವಿರ ರೂ. ಆದಾಯ ಬರುತ್ತದೆ. ಅಲ್ಲದೆ 126 ಬಿಘಾ ಭೂಮಿ ಸ್ಥಿರಾಸ್ತಿಯಾಗಿದೆ. ಎಲ್ಲ ಖರ್ಚಿನ ಬಳಿಕ ಪಾರಿವಾಳಗಳ ರಕ್ಷಣೆಗೆ ಉಳಿಸಿರುವ ಹಣ ಈಗ ಒಟ್ಟು 30 ಲಕ್ಷ ರೂ ಆಗಿದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್
ಉದ್ದೇಶವೇನು?: ಊರಿನ ಜನ ಪಾರಿವಾಳಗಳ ರಕ್ಷಣೆಗೆ ಬಹಿರಂಗವಾಗಿಯೇ ದಾನ ಮಾಡುತ್ತಿದ್ದಾರೆ. ಅದೆಲ್ಲ ಹಣವನ್ನು ಪಾರಿವಾಳಗಳಿಗೆ ನೀರಿನ ಕೊರತೆಯಾಗದಂತೆ ಮಾಡಲು ನಿರ್ಮಿಸಿದ ಅಂಗಡಿಗಳಿಗೆ ವಿನಿಯೋಗಿಸಲಾಗಿದೆ. ಇಂದು ಈ ಅಂಗಡಿಗಳಿಂದ ತಿಂಗಳಿಗೆ 9 ಲಕ್ಷ ರೂ ಆದಾಯ ಬರುತ್ತದೆ. ಈ ಹಣದಿಂದ ಪಾರಿವಾಳಗಳ ರಕ್ಷಣೆ ಮಾಡಲಾಗುತ್ತಿದೆ.