ಮುಂಬೈ: ಬಾಲಿವುಡ್ ತಾರೆ ಅನುಷ್ಕಾ ಶರ್ಮಾ, ಭಾರತೀಯ ಮಹಿಳಾ ಕ್ರಿಕೆಟ್ ದಂತಕಥೆ ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಿತ್ರ ಚಕ್ದಾ ಎಕ್ಸ್ ಪ್ರೆಸ್ನಲ್ಲಿ ನಟಿಸಲು ತಯಾರಿ ಆರಂಭಿಸಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದ ಫೋಟೋವೊಂದನ್ನು ಅನುಷ್ಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಚಿತ್ರಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ಕೊನೆಗೂ ತೆರೆ ಎಳೆದಿದ್ದಾರೆ.
ಈಗಾಗಲೇ ಅನುಷ್ಕಾ ಅವರು ಚಿತ್ರದ ಪೂರ್ವಸಿದ್ಧತಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಜೂಲನ್ ಗೋಸ್ವಾಮಿ ಅವರಂತೆ ಬೌಲಿಂಗ್ ಮಾಡುವುದು ಹೇಗೆ ಎಂಬುದನ್ನು ನೆಟ್ಸ್ನಲ್ಲಿ ಪ್ರ್ಯಾಕ್ಟಿಸ್ ಮಾಡುತ್ತಿರುವ ಫೋಟೋವೊಂದನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ ಅವರು ಗ್ರಿಪ್ ಬೈ ಗ್ರಿಪ್ #ಚಕ್ದಾ ಎಕ್ಸ್ ಪ್ರೆಸ್ ಎಂದು ಶೀರ್ಷಿಕೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್ನಲ್ಲಿ ಬಾಂಬ್ ಆರ್ಭಟ – 30 ಗಂಟೆಗಳ ಕಾಲ ಮೆಟ್ರೋ ಸುರಂಗದಲ್ಲೇ ಕುಳಿತ ಭಾರತೀಯ ವಿದ್ಯಾರ್ಥಿಗಳು
View this post on Instagram
ಈ ಚಿತ್ರದ ಮೂಲಕ ಅನುಷ್ಕಾ ತಮ್ಮ ಗರ್ಭಾವಸ್ಥೆಯ ನಂತರ ಮತ್ತೆ ಚಲನಚಿತ್ರಗಳಲ್ಲಿ ನಟಿಸಲು ಮರಳುತ್ತಿದ್ದಾರೆ. ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಜೂಲನ್ ಅವರು ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಪ್ರವಾಸಿಗರಿಗೆ ಸಿಹಿ ಸುದ್ದಿ- ಡಾರ್ಜಿಲಿಂಗ್ನ ಟಾಯ್ ರೈಲಿನ ದರ ಇಳಿಕೆ
ಭಾರತಕ್ಕಾಗಿ ಕ್ರಿಕೆಟ್ ಆಡುವ ತನ್ನ ಕನಸನ್ನು ನನಸಾಗಿಸಲು ಸ್ತ್ರೀ ದ್ವೇಷದ ರಾಜಕೀಯವು ಒಡ್ಡಿದ ಅಡೆತಡೆಗಳ ಮಧ್ಯೆಯೂ ಅವರು ತಮ್ಮ ಗುರಿಯನ್ನು ತಲುಪಲು ಯಶ್ವಸಿಯಾಗಿದ್ದರು. ಕೊನೆಗೆ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿಯಾಗಿ ಆಯ್ಕೆಯಾಗಿ, ದೇಶದ ಎಷ್ಟೋ ಮಹತ್ವಾಕಾಂಕ್ಷಿ ಕ್ರಿಕೆಟಿಗರಿಗೆ ಮಾದರಿಯಾಗಿದ್ದರು.
ಅವರ ಈ ಸ್ಫೂರ್ತಿದಾಯಕ ಪ್ರಯಾಣವನ್ನು ಚಕ್ದಾ ಎಕ್ಸ್ಪ್ರೆಸ್ ಚಿತ್ರದ ಮೂಲಕ ಗುರುತಿಸಲಾಗುತ್ತಿದ್ದು, 2018ರಲ್ಲಿ, ಜೂಲನ್ ಗೌರವಾರ್ಥವಾಗಿ ಭಾರತೀಯ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗಿತ್ತು. ಬಾಲಿವುಡ್ನ ಎಷ್ಟೋ ಪ್ರಭಾವಿ ನಟರಲ್ಲಿ ಅನುಷ್ಕಾ ಕೂಡಾ ಒಬ್ಬರಾಗಿದ್ದಾರೆ. ಅವರು ಸುಲ್ತಾನ್, ಪಿಕೆ, ಮತ್ತು ಸಂಜು ಅಂತಹ ಖ್ಯಾತ ಚಿತ್ರಗಳಲ್ಲಿ ನಟಿಸಿದ್ದಾರೆ. ವರದಿಗಳ ಪ್ರಕಾರ, ಅನುಷ್ಕಾ ಅವರು ಚಕ್ದಾ ಎಕ್ಸ್ ಪ್ರೆಸ್ನ 30 ದಿನಗಳ ಚಿತ್ರಕರಣಕ್ಕಾಗಿ ಯುಕೆಗೆ ಹಾರಲಿದ್ದಾರೆ.