ಮಡಿಕೇರಿ: ಪಿಕಪ್ ವಾಹನ (Pickup Truck) ಮತ್ತು ಮಹೇಂದ್ರ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಚಾಲಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೊಡಗು ಜಿಲ್ಲೆಯ ಸುಂಟಿಕೊಪ್ಪ (Suntikoppa) ಸಮೀಪದ 7ನೇ ಹೊಸಕೋಟೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಸುಂಟಿಕೊಪ್ಪ ಕಡೆಯಿಂದ ಕುಶಾಲನಗರ ಕಡೆಗೆ ತೆರಳುತ್ತಿದ್ದ ಅಶೋಕ್ ಲೈಲ್ಯಾಂಡ್ ಪಿಕಪ್ ವಾಹನ ಮತ್ತು ಬೆಂಗಳೂರಿನಿಂದ ಮಡಿಕೇರಿಗೆ ಬರುತ್ತಿದ್ದ ಮಹೇಂದ್ರ ಕಾರಿನ ನಡುವೆ ಅವಘಡ ಸಂಭವಿಸಿದೆ. ಇದನ್ನೂ ಓದಿ: Kolar| ಜೆಡಿಎಸ್ ಮಾಜಿ ಶಾಸಕನಿಂದ ಸರ್ಕಾರಿ ಭೂಮಿ ಒತ್ತುವರಿ ಆರೋಪ – ಸ್ಥಳೀಯರಿಂದ ಪ್ರತಿಭಟನೆ
ಇದರಿಂದ ಕಾರಿನ ಚಾಲಕ ಸ್ಟೇರಿಂಗ್ ನಡುವೆ ಅರ್ಧ ಗಂಟೆ ಸಿಕ್ಕಿಕೊಂಡಿದ್ದು, ಗಂಭೀರವಾಗಿ ಗಾಯಗೊಂಡಿದ್ದ. ನೆರವಿಗೆ ಧಾವಿಸಿದ ಸ್ಥಳೀಯರು ಇನ್ನೊಂದು ಲಾರಿಯಿಂದ ಕಾರಿನ ಮುಂಭಾಗಕ್ಕೆ ಹಗ್ಗ ಕಟ್ಟಿ ಎಳೆದು, ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ನಂತರ ಆಸ್ಪತ್ರೆಗೆ ಸಾಗಿಸಿದ್ದಾರೆ.
ಇನ್ನೂ ಘಟನೆಗೆ ಸಂಬಂಧಿಸಿದಂತೆ ಸುಂಟಿಕೋಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಿ.ಟಿ ರವಿ ಫೇಕ್ ಎನ್‌ಕೌಂಟರ್ ಮಾಡಬೇಕೆಂಬ ವಿಚಾರ ಅಲ್ಲಿನ ಪೊಲೀಸ್ ತಂಡಕ್ಕೆ ಇತ್ತು ಅನಿಸುತ್ತೆ: ಜೋಶಿ ಬಾಂಬ್