ಕುರೂಪಿ ಹೆಣ್ಣುಮಕ್ಕಳಿಗೆ ವರದಕ್ಷಿಣೆ ಸಹಕಾರಿ- ಪಠ್ಯಪುಸ್ತಕದಲ್ಲಿ ಪಾಠ

Public TV
2 Min Read
wedding 1 1

ನವದೆಹಲಿ: ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಪುಸ್ತಕವೊಂದರಲ್ಲಿ ನಮೂದಿಸಲಾಗಿದೆ. ಈ ಪುಸ್ತಕ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಪುಸ್ತಕದಲ್ಲಿ “ವರದಕ್ಷಿಣೆಯ ಉದ್ದೇಶ” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಈ ಸಂಗತಿಗಳನ್ನು ಪಟ್ಟಿ ಮಾಡಲಾಗಿದ. ಈ ಪುಸ್ತಕವು ನಸಿರ್ಂಗ್ ವಿದ್ಯಾರ್ಥಿಗಳಿರುವ ಪುಸ್ತಕವಾಗಿದ್ದು ಭಾರತೀಯ ನಸಿರ್ಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆಯಲಾಗಿದೆ ಎಂದು ಪುಸ್ತಕದ ಕವರ್ ಮೇಲಿದೆ. ಪುಟದ ಚಿತ್ರವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಶಿವಸೇನಾ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರಲ್ಲಿ ಈ ಪಠ್ಯವನ್ನು ತೆಗೆದುಹಾಕುವಂತೆ ಕರೆ ನೀಡಿದರು. ಇಂಥಾ ಪುಸ್ತಕಗಳು ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿರುವುದು ಭಯಾನಕವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

wedding 2

ಟಿಕೆ ಇಂದ್ರಾಣಿ ಅವರು ಬರೆದಿರುವ ದಾದಿಯರ ಸಮಾಜಶಾಸ್ತ್ರದ ಪಠ್ಯಪುಸ್ತಕದ (Textbook of Sociology for Nurses) ಪುಟ ಇದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

ಪುಸ್ತಕದಲ್ಲಿ ಏನಿದೆ?: ಪುಸ್ತಕದಲ್ಲಿ ಪಟ್ಟಿ ಮಾಡಿದ ವರದಕ್ಷಿಣೆಯ ಪ್ರಯೋಜನದ ಪಟ್ಟಿಯಲ್ಲಿ ಪೀಠೋಪಕರಣಗಳು, ರೆಫ್ರಿಜರೇಟರ್‌ಗಳು ಮತ್ತು ವಾಹನಗಳಂತಹ ಉಪಕರಣಗಳೊಂದಿಗೆ ಹೊಸ ಮನೆಯನ್ನು ಸಜ್ಜುಗೊಳಿಸಲು ವರದಕ್ಷಿಣೆ ಸಹಾಯಕವಾಗಿದೆ. ಪೋಷಕರ ಆಸ್ತಿಯಲ್ಲಿ ಪಾಲನ್ನು ಹುಡುಗಿಯರು ವರದಕ್ಷಿಣೆ ಮೂಲಕ ಪಡೆಯುತ್ತಾರೆ. ವರದಕ್ಷಿಣೆ ಎಂಬುದು ನಮ್ಮ ಸಾಮಾಜಿಕ ಪಾರಂಪರಿಕ ಪದ್ದತಿಯಾಗಿದ್ದು ಒಮ್ಮೆಗೇ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

wedding

ವರದಕ್ಷಿಣೆ ವ್ಯವಸ್ಥೆಯ ಪರೋಕ್ಷ ಪ್ರಯೋಜನ: ಪೋಷಕರು ಈಗ ತಮ್ಮ ಹೆಣ್ಣುಮಕ್ಕಳಿಗೆ ಕಡಿಮೆ ವರದಕ್ಷಿಣೆ ನೀಡುವ ಉದ್ದೇಶದಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ. ಪುಟದ ಕೊನೆಯ ಅಂಶವು ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

Share This Article
Leave a Comment

Leave a Reply

Your email address will not be published. Required fields are marked *