Connect with us

Latest

ಪ್ರತಿ ಭಾನುವಾರ 800 ಮಂದಿಗೆ ಊಟ ನೀಡ್ತಿದ್ದಾರೆ ಅಂಗವಿಕಲ

Published

on

ಜೈಪುರ: ರಾಜಸ್ಥಾನದ ಅಂಗವಿಕಲ ವ್ಯಕ್ತಿಯೊಬ್ಬರು ಪ್ರತಿ ಭಾನುವಾರ ಆಸ್ಪತ್ರೆ ಮುಂದೆ ನಿಂತು 700 ರಿಂದ 800 ಮಂದಿಗೆ ಊಟ ಹಾಕುತ್ತಿದ್ದು, ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

40 ವರ್ಷದ ಹಂಸರಾಜ್ ಸಾದ್ ಅವರು ಪ್ರತಿ ಭಾನುವಾರ ಸವಾಯಿ ಮಾನ್ಸಿಂಗ್ ಆಸ್ಪತ್ರೆಗೆ ಹೋಗಿ ಅಲ್ಲಿ 700ರಿಂದ 800 ಮಂದಿಗೆ ಬಿಸಿ ಬಿಸಿ ಊಟವನ್ನು ನೀಡುತ್ತಿದ್ದಾರೆ. ಹಂಸರಾಜ್ 2015ರಲ್ಲಿ ಒಬ್ಬರೇ ಈ ಕೆಲಸವನ್ನು ಶುರು ಮಾಡಿದ್ದರು. ಆಗ ಅವರು ಹೋಟೆಲ್‍ನಿಂದ ಊಟ ಪ್ಯಾಕ್ ಮಾಡಿಸಿ ಜನರಿಗೆ ನೀಡುತ್ತಿದ್ದರು. ಇದನ್ನೂ ಓದಿ: ಹಣ್ಣುಗಳನ್ನು ಮಾರಾಟ ಮಾಡಿ 200 ಬಡ ಜನರಿಗೆ ಊಟ ನೀಡ್ತಿರೋ ವ್ಯಕ್ತಿ

ಊಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಹಂಸರಾಜ್ 10 ಜನ ಇರುವ ತಮ್ಮ ತಂಡದ ಜೊತೆ 700ರಿಂದ 800 ಮಂದಿಗೆ ಮನೆಯಲ್ಲಿಯೇ ಅಡುಗೆ ಮಾಡಲು ಶುರು ಮಾಡಿದ್ದರು. ಡಿಸೈನರ್ ಉಡುಪುಗಳ ಅಂಗಡಿ ನಡೆಸುವ ಹಂಸರಾಜ್ ಬಾಲ್ಯದಿಂದಲೂ ಅಂಗವಿಕಲರಾಗಿದ್ದಾರೆ. ಇದನ್ನೂ ಓದಿ: ಸರ್ಕಾರಿ ಆಸ್ಪತ್ರೆಗೆ ಹೋಗಿ ವ್ಯಕ್ತಿಯಿಂದ ರೋಗಿಯ ಕುಟುಂಬಸ್ಥರಿಗೆ ಉಚಿತ ಆಹಾರ

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ದೇವಸ್ಥಾನ ಹಾಗೂ ಮಸೀದಿಗಳಲ್ಲಿ ಅಗತ್ಯವಿರುವವರಿಗೆ ಊಟ ನೀಡುವ ಸಾಮಾಜಿಕ ಕಾರ್ಯಕರ್ತರು ಕಂಡು ಬರುತ್ತಾರೆ. ಆದರೆ ಆಸ್ಪತ್ರೆಗೆ ಬರುವ ಜನರ ಬಳಿ ಔಷಧಿ ಖರೀದಿಸಲು ಹಣವಿರುವುದಿಲ್ಲ. ಹಾಗಾಗಿ ನಾನು ಆಸ್ಪತ್ರೆ ಬಳಿ ಜನರಿಗೆ ಊಟದ ವ್ಯವಸ್ಥೆ ಮಾಡಲು ಶುರು ಮಾಡಿದೆ ಎಂದರು. ಇದನ್ನೂ ಓದಿ: ಕಾಲೇಜಿಗೆ ಹೋಗಿ ಕನಸು ನನಸು ಮಾಡಿಕೊಳ್ಳಲು ಕ್ಯಾಬ್ ಚಲಾಯಿಸುತ್ತಿದ್ದಾಳೆ 19ರ ಯುವತಿ

ಊಟ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೋಡಿ ಆಸ್ಪತ್ರೆಯಲ್ಲಿ ನಾವು ಪ್ರತಿದಿನ ಅವರಿಗೆ ಆಹಾರವನ್ನು ನೀಡಬೇಕು ಎಂಬುದು ನಮ್ಮ ಯೋಜನೆ. ಆಸ್ಪತ್ರೆಗೆ ದೂರ ದೂರದಿಂದ ಶೇ. 50ರಷ್ಟು ಬಡ ಜನರು ಬರುತ್ತಾರೆ. ಹೀಗಿರುವಾಗ ಅವರಿಗೆ ಮನೆಯಿಂದ ಊಟ ತರಲು ಕಷ್ಟವಾಗುತ್ತದೆ ಎಂದು ಹಂಸರಾಜ್ ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *