ಫೋಟೋ, ವಿಡಿಯೋದೊಂದಿಗೆ 100ಕ್ಕೂ ಹೆಚ್ಚು ಯುವತಿಯರಿಗೆ ಬ್ಲಾಕ್‍ಮೇಲ್ – ಆರೋಪಿ ಅರೆಸ್ಟ್

Public TV
2 Min Read
ARREST

– ಆನ್‍ಲೈನ್ ಮೂಲಕ ವೈದ್ಯಕೀಯ ವಿದ್ಯಾರ್ಥಿನಿ ದೂರು
– ವೈದ್ಯರು, ವೈದ್ಯಕೀಯ ಹುಡುಗಿಯರೇ ಟಾರ್ಗೆಟ್

ಚೆನ್ನೈ: ನಿರುದ್ಯೋಗಿಯೊಬ್ಬ ಯುವತಿಯರ ಅಶ್ಲೀಲ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್ ಮಾಡುತ್ತಿದ್ದನು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಘಟನೆ ತಮಿಳುನಾಡಿನ ಮಧುರೈನಲ್ಲಿ ನಡೆದಿದೆ. ಆರೋಪಿ ನಗರದಲ್ಲಿ ಅನೇಕ ವೈದ್ಯ ಮಹಿಳೆಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ಸ್ನೇಹ ಬೆಳೆಸಿಕೊಂಡು ಬ್ಲಾಕ್‍ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದನು. ಇತ್ತೀಚೆಗೆ ಕನ್ಯಾಕುಮಾರಿ ಪೊಲೀಸ್ ವರಿಷ್ಠಾಧಿಕಾರಿಗೆ ಮಹಿಳೆಯೊಬ್ಬರು ಆನ್‍ಲೈನ್ ಮೂಲಕ ದೂರು ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

Phone 1

ಏನಿದು ಪ್ರಕರಣ?
ನಾಗರ್ ಕೋಯಿಲ್‍ನ ಗಣೇಶಪುರಂ ಮುಖ್ಯ ರಸ್ತೆಯಲ್ಲಿ ಆರೋಪಿ ಟಿ.ಕಾಶಿ ಅಲಿಯಾಸ್ ಸುಜಿ (26) ವಾಸಿಸುತ್ತಿದ್ದನು. ಈತ ಸೋಶಿಯಲ್ ಮೀಡಿಯಾ ಮೂಲಕ ಶ್ರೀಮಂತ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದನು. ಈತ ಇತರ ನಾಲ್ವರು ಸ್ನೇಹಿತರ ಸಹಾಯದಿಂದ ಬ್ಲಾಕ್‍ಮೇಲ್ ಮೂಲಕ ಅವರ ಬಳಿ ಹಣ ವಸೂಲಿ ಮಾಡುತ್ತಿದ್ದನು.

ಆರೋಪಿ ತಾನು ಉದ್ಯಮಿ, ಪೈಲಟ್ ಟ್ರೈನಿ, ವಕೀಲ ಎಂದು ಹೇಳಿಕೊಂಡು ಯುವತಿಯರು ಮತ್ತು ವಿವಾಹಿತ ಮಹಿಳೆಯರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಅಲ್ಲದೆ ಅವರಿಗೆ ಜಿಮ್ ವರ್ಕೌಟ್‍ನ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುತ್ತಿದ್ದನು. ಒಮ್ಮೆ ಯುವತಿಯರು ಆರೋಪಿ ಕಾಶಿಯನ್ನು ಭೇಟಿಯಾದಾಗ ಅವರ ಜೊತೆಗಿರುವಾಗ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಮೊಬೈಲ್ ಮೂಲಕ ಕ್ಲಿಕ್ಕಿಸಿಕೊಳ್ಳುತ್ತಿದ್ದನು.

MONEY 3

ಅಲ್ಲದೇ ಯುವತಿಯರಿಗೆ ಗೊತ್ತಿಲ್ಲದ ರೀತಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದನು. ಅಷ್ಟೇ ಅಲ್ಲದೇ ಯಾವ ಮಹಿಳೆಯರು ಆತನನ್ನು ಭೇಟಿಯಾಗುವುದಿಲ್ಲವೋ ಅವರೊಂದಿಗೆ ಮಾಡಿರುವ ಮೆಸೇಜ್ ಚಾಟ್ ನ ಸ್ಕ್ರೀನ್‍ಶಾಟ್ ತೆಗೆದುಕೊಳ್ಳುತ್ತಿದ್ದನು. ನಂತರ ಮಹಿಳೆಯರ ಬಳಿ ಹಣ ಕೇಳುತ್ತಿದ್ದನು. ಒಂದು ವೇಳೆ ಅವರು ಹಣ ಕೊಡಲು ನಿರಾಕರಿಸಿದರೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವೀಡಿಯೊಗಳನ್ನು ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಕನ್ಯಾಕುಮಾರಿ ಎಸ್‍ಪಿ ಎನ್ ಶ್ರೀನಾಥ್ ತಿಳಿಸಿದರು.

ಅನೇಕ ಹುಡುಗಿಯರು ಆತನ ಭಯದಿಂದ ದೂರು ನೀಡಲು ಮುಂದೆ ಬರಲಿಲ್ಲ. 100ಕ್ಕೂ ಹೆಚ್ಚು ಯುವತಿಯರು ಮತ್ತು ಮಹಿಳೆಯರನ್ನು ಆರೋಪಿ ಕಾಶಿ ಬ್ಲಾಕ್‍ಮೇಲ್ ಮಾಡಿದ್ದಾನೆ. ಅವರಲ್ಲಿ ವೈದ್ಯೆಯರು ಸೇರಿದಂತೆ ಹೆಚ್ಚಿನ ಮಹಿಳೆಯರು ಚೆನ್ನೈನಲ್ಲಿದ್ದಾರೆ. ಚೆನ್ನೈನ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ಗುರುವಾರ ರಾತ್ರಿ ಎಸ್‍ಪಿಗೆ ಆನ್‍ಲೈನ್ ಮೂಲಕ ದೂರು ನೀಡಿದ್ದಾಳೆ. ನಂತರ ಪೊಲೀಸರು ಈ ಕುರಿತು ದೂರು ದಾಖಲಿಸಿಕೊಂಡು ಆರೋಪಿ ಕಾಶಿಯನ್ನು ಬಂಧಿಸಿದ್ದಾರೆ. ಈ ವೇಳೆ ಆರೋಪಿ ಕಾಶಿಯ ಮನೆಯಿಂದ ಮೊಬೈಲ್ ಫೋನ್, ಹಾರ್ಡ್ ಡಿಸ್ಕ್ ಮತ್ತು ಸಿ.ಡಿಗಳನ್ನು ಅವರು ವಶಪಡಿಸಿಕೊಂಡಿದ್ದಾರೆ ಎಂದು ಶ್ರೀನಾಥ್ ಹೇಳಿದ್ದಾರೆ.

police 1 1

ಎಸ್‍ಪಿ ಶ್ರೀನಾಥ್ ತಮ್ಮ ಮೊಬೈಲ್ ನಂಬರ್ ನೀಡಿ, ತಮ್ಮನ್ನು ನೇರವಾಗಿ ಸಂಪರ್ಕಿಸಿ ಅಥವಾ ಮೊಬೈಲ್‍ಗೆ ಮೆಸೇಜ್ ಮಾಡುವ ಮೂಲಕ ದೂರುಗಳನ್ನು ಕಳುಹಿಸುವಂತೆ ಮೋಸ ಹೋಗಿರುವ ಮಹಿಳೆಯರಿಗೆ ಹೇಳಿದ್ದಾರೆ. ಜೊತೆಗೆ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ದೂರುದಾರರ ಗುರುತನ್ನು ರಹಸ್ಯವಾಗಿಡಲಾಗುವುದು ಎಂದು ತಿಳಿಸಿದ್ದಾರೆ.

ಆರೋಪಿ ಕಳೆದ ಆರು ವರ್ಷಗಳಿಂದ ಕನ್ಯಾಕುಮಾರಿ ಜಿಲ್ಲೆಯ ಮಹಿಳೆಯರು ಮತ್ತು ಚೆನ್ನೈನಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಹುಡುಗಿಯರನ್ನು ಮೋಸ ಮಾಡುತ್ತಿದ್ದಾನೆ ಎಂದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

arrest 5

Share This Article
Leave a Comment

Leave a Reply

Your email address will not be published. Required fields are marked *