ನವದೆಹಲಿ: ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆ ವಿವೋ ತೆರಿಗೆ ಪಾವತಿಯಿಂದ ತಪ್ಪಿಸಿಕೊಳ್ಳಲು ತನ್ನ ಕಂಪನಿ ವಹಿವಾಟಿನ ಶೇ.50 ಪ್ರತಿಶತದಷ್ಟು ಅಂದರೆ ಸುಮಾರು 62,476 ಕೋಟಿ ಹಣವನ್ನು ಚೀನಾಕ್ಕೆ ಕಳುಹಿಸಿಕೊಟ್ಟಿದೆ ಎಂದು ಜಾರಿ ನಿರ್ದೇಶನಾಲಯ (ED) ತಿಳಿಸಿದೆ.
Advertisement
ಚೀನಾ ಮೂಲದ ಮೊಬೈಲ್ ತಯಾರಿಕಾ ಸಂಸ್ಥೆಯ ತೆರಿಗೆ ವಂಚನೆ ಬಯಲಾಗಿದ್ದು, ಭಾರತದಲ್ಲಿ ತೆರಿಗೆ ಪಾವತಿಸಲು ತಪ್ಪಿಸುವುದಕ್ಕಾಗಿ ಬರೋಬ್ಬರಿ ಶೇ.50ರಷ್ಟು ತೆರಿಗೆ ಹಣವನ್ನು ಚೀನಾಗೆ ರವಾನಿಸಿದೆ. ವಿವೊ ಮೊಬೈಲ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ 23 ಕಂಪನಿಗಳ ಮೇಲೆ ಜಾರಿ ನಿರ್ದೇಶನಾಲಯ ಕಳೆದ ಎರಡು ದಿನಗಳ ಹಿಂದೆ ದಾಳಿ ಮಾಡಿತ್ತು. ಇದೀಗ ಶೇ.50 ರಷ್ಟು ಅಂದರೆ ಬರೋಬ್ಬರಿ 62, 476ಕೋಟಿ ರೂ. ಹಣವನ್ನು ಚೀನಾಗೆ ರವಾನಿಸಿರುವುದು ಬಯಲಾಗಿದೆ. ಇದನ್ನೂ ಓದಿ: ಧರ್ಮದ ಬಗ್ಗೆ ಮಾತನಾಡಲು ಸಾಧ್ಯವಿಲ್ಲದ ಭಾರತದಲ್ಲಿ ಬದುಕಲು ಬಯಸುವುದಿಲ್ಲ: ಮೆಹುವಾ
Advertisement
Advertisement
ಸಂಸ್ಥೆಯ ವಿವಿಧ ಬ್ಯಾಂಕ್‌ಗಳ 119 ಖಾತೆಗಳಲ್ಲಿ ಇರಿಸಿದ್ದ ಸುಮಾರು 465 ಕೋಟಿ ರೂ. ನಗದು ಹಣ ಹಾಗೂ 2 ಕೆ.ಜಿ. ಚಿನ್ನದ ಬಿಸ್ಕೆಟ್‌ಗಳನ್ನೂ ಜಪ್ತಿ ಮಾಡಲಾಗಿದೆ. 2018ರಲ್ಲೇ ವಿವೋದ ಇಬ್ಬರು ನಿರ್ದೇಶಕರು ದೇಶ ತೊರೆದಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಕ್ಯಾನರ್ ಅಡಿಯಲ್ಲಿ ನಕಲಿ ದಾಖಲೆಗಳನ್ನು ಬಳಸಿ ಹಲವಾರು ಕಂಪನಿಗಳನ್ನು ಸಂಯೋಜಿಸಿದ್ದಾರೆ. ಇದಕ್ಕೆ ಬೇಕಾದ ಸಾಕ್ಷ್ಯಾಧಾರಗಳೂ ನಮ್ಮ ಬಳಿಯಿವೆ. ಕೆಲವು ಚೀನಿ ಪ್ರಜೆಗಳು ತನಿಖೆಗೆ ಸಹಕರಿಸುತ್ತಿಲ್ಲ. ಇನ್ನೂ ಕೆಲವರು ಶೋಧ ಕಾರ್ಯ ಆರಂಭಿಸುತ್ತಿದ್ದಂತೆ ಪರಾರಿಯಾಗಿದ್ದಾರೆ, ಡಿಜಿಟಲ್ ಸಾಧನಗಳನ್ನು ಮರೆ ಮಾಚಲು ಪ್ರಯತ್ನಿಸುತ್ತಿದ್ದಾರೆ ಎಂದು ಇ.ಡಿ ಆರೋಪಿಸಿದೆ. ಇದನ್ನೂ ಓದಿ: ಹಿಂದೂಗಳಿಗೆ ಕಾನೂನು ನೆರವು ನೀಡಲು ವಿಹೆಚ್‌ಪಿ, ಭಜರಂಗದಳದಿಂದ ಸಹಾಯವಾಣಿ
Advertisement
Chinese side is closely following developments (on ED raids on Vivo). Chinese govt has always asked Chinese companies to abide by laws & regulations when doing business overseas. We firmly support Chinese companies in safeguarding their lawful rights & interests:Chinese MoFA Spox https://t.co/5m1cShwjq4
— ANI (@ANI) July 7, 2022
ಏನಿದು ಪ್ರಕರಣ?
ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (EB) ತನಿಖೆಯನ್ನು ತೀವ್ರಗೊಳಿಸಿದ ಬೆನ್ನಲ್ಲೇ ವಿವೋ ನಿರ್ದೇಶಕರಾದ ಝೆಂಗ್‌ಶೆನ್ ಔ ಮತ್ತು ಜಾಂಗ್ ಜೀ ಅವರು ಭಾರತದಿಂದ ಪರಾರಿಯಾಗಿದ್ದಾರೆಂದು ಸುದ್ದಿಸಂಸ್ಥೆ ವರದಿ ಮಾಡಿತ್ತು. ಇ.ಡಿ ಮಂಗಳವಾರ ವಿವೋ ಮತ್ತು ಸಂಬಂಧಿತ ಸಂಸ್ಥೆಗಳ 44 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ಗಳ ಪ್ರಕರಣ ದಾಖಲಿಸಿದ ಇ.ಡಿ ಉತ್ತರ ಪ್ರದೇಶ, ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಹಲವು ಕಡೆಗಳಲ್ಲಿ ದಾಳಿ ನಡೆಸಿತ್ತು.
ಗ್ರ‍್ಯಾಂಡ್ ಪ್ರಾಸ್ಪೆಕ್ಟ್ ಇಂಟರ್‌ನ್ಯಾಷನಲ್ ಕಮ್ಯೂನಿಕೇಷನ್ ಪ್ರೈವೆಟ್ ಲಿಮಿಟೆಡ್ ಜಮ್ಮು ಕಾಶ್ಮೀರದಲ್ಲಿ ವಿವೋ ಫೋನ್‌ಗಳನ್ನು ಮಾರಾಟ ಮಾಡುತ್ತಿದೆ. ಈ ಕಂಪನಿಯ ಸುಳ್ಳು ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಂಡಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. ಇಬ್ಬರು ಕಂಪನಿ ಸೆಕ್ರೆಟರಿ ಮತ್ತು ಚಾರ್ಟರ್ಡ್ ಅಕೌಂಟೆಂಟ್ ಒಬ್ಬರಿಗೆ ಈ ವಿಚಾರ ಗೊತ್ತಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಅಕ್ರಮಕ್ಕೆ ಸಾಥ್ ನೀಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಗ್ರ‍್ಯಾಂಡ್ ಪ್ರಾಸ್ಪೆಕ್ಟ್ ಕಂಪನಿ ಕೆವೈಸಿ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿತ್ತು.