ಬೆಂಗಳೂರು: ಈ ಬಾರಿ ಕೂಲ್ ಕೂಲ್ ವೆದರ್ ಇದ್ದರೂ ಜನರ ಪ್ರಾಣ ಕೊಲ್ಲುವ ಬೇಸಿಗೆ ಇರಲಿದೆ ಎಂಬ ಮಾಹಿತಿಯೊಂದು ಭೂತಜ್ಞರಿಂದ ಬಂದಿದೆ. ಜ್ವಾಲಾಮುಖಿಯ ಜ್ವಾಲೆಗೆ ಬೆಂಗಳೂರು, ದೆಹಲಿ ಸೇರಿದಂತೆ ಭಾರತ ಬಿಸಿಲಿನಿಂದ ಸುಡಲಿದೆ. ದಿ ಮೋಸ್ಟ್ ಡೇಂಜರಸ್ ಬೇಸಿಗೆ ಈ ವರ್ಷ ಸಂಭವಿಸಲಿದೆಯಂತೆ.
ಈ ಬಾರಿ ದೇಶದ ಮಹಾನಗರದಲ್ಲಿ ಕಿಲ್ಲರ್ ಬೇಸಿಗೆ ಭೀತಿ ಶುರುವಾಗಿದೆ. ಜ್ವಾಲಾಮುಖಿ ಕಪ್ಪು ಬೂದಿ ಮತ್ತು ಕಂಡರಿಯದ ರಣ ಭೀಕರ ಸಾಂಕ್ರಾಮಿಕ ಕಾಯಿಲೆಗೆ ಈ ಬಾರಿಯ ಬೇಸಿಗೆ ನಾಂದಿ ಹಾಡಲಿದೆ ಅನ್ನೋದು ಭೂಗರ್ಭ ತಜ್ಞರ ಎಚ್ಚರಿಕೆಯಾಗಿದೆ.
Advertisement
Advertisement
ಜ್ವಾಲಮುಖಿರ ರೌದ್ರ ನರ್ತನ ಅದ್ಯಾವ ಪರಿ ಇದೆ ಅಂದ್ರೆ ಈ ಬಾರಿ ಫಿಲಿಫೈನ್‍ನಲ್ಲಿ ಸುಮಾರು 55 ಸಾವಿರ ಅಡಿ ಜ್ವಾಲಮುಖಿ ಭೂಮಿಯಡಿಯಿಂದ ಸ್ಫೋಟಗೊಂಡು ಚಿಮ್ಮಿದೆ. ಇದು ಅತಿ ಹೆಚ್ಚು ಎತ್ತರ ಚಿಮ್ಮಿದ ಜ್ವಾಲಮುಖಿಯಾಗಿದೆ. ಇದು ಕಪ್ಪು ಅನಿಲ ಅಂದ್ರೆ ವಿಷಾನಿಲವನ್ನು ಹೊರಹೊಮ್ಮಿಸಿದ್ದು ಇಡೀ ನೀಲಾಕಾಶವನ್ನು ಕಪ್ಪು ಕಪ್ಪಾಗಿ ಮಾಡಿಬಿಟ್ಟಿದೆಯಂತೆ. ಈ ಜ್ವಾಲಾಮುಖಿಯ ಸ್ಫೋಟ ವಿಷಾನಿಲದ ಎಫೆಕ್ಟ್ ಭಾರತಕ್ಕೂ ಕಾಡಲಿದ್ದು ಈ ಬಾರಿ ಬೇಸಿಗೆಗೆ ಸಾಂಕ್ರಾಮಿಕ ರೋಗದ ತಾಣವಾಗಲಿದೆ ಎನ್ನುವ ಎಚ್ಚರಿಕೆಯನ್ನು ಭೂ ಗರ್ಭ ತಜ್ಞ ಹೆಚ್.ಎಸ್ ಪ್ರಕಾಶ್ ಕೊಟ್ಟಿದ್ದಾರೆ.
Advertisement
Advertisement
ವಿಚಿತ್ರ ಅಂದ್ರೆ ಈ ಬಾರಿ ಬೇಸಿಗೆಯಲ್ಲಿ ಉಷ್ಣಾಂಶ ಕಡಿಮೆಯಾಗಲಿದೆಯಂತೆ. ಆದರೆ ಚೀನಾದ ಕರೋನಾ ವೈರಸ್ ಮಾದರಿಯ ವೈರಸ್ ಈ ಜ್ವಾಲಮುಖಿಯ ಅನಿಲದಲ್ಲಿ ಉತ್ಪತ್ತಿಯಾಗಲಿದ್ದು ಭಾರತಕ್ಕೆ ಮಾರಕವಾಗಲಿದೆಯಂತೆ. ಈ ಜ್ವಾಲಾಮುಖಿಯ ಸ್ಫೋಟ ಬೇಸಿಗೆ ಮಾತ್ರವಲ್ಲ ಮುಂಗಾರಿನ ಮೇಲೆ ವೈರುದ್ಯ ಪರಿಣಾಮ ಬೀರಲಿದೆ. ಒಂದೋ ಈ ಬಾರಿಯೂ ರಾಜ್ಯದ ಕೆಲವಡೆ ಪ್ರವಾಹದ ಭೀತಿ ಇಲ್ಲದಿದ್ದರೆ, ಬರದ ಪರಿಸ್ಥಿತಿ ಉದ್ಭವವಾಗಲಿದೆ.
ಒಟ್ಟಾರೆ ಈ ಜ್ವಾಲಮುಖಿ ವಾತಾವರಣವನ್ನು ಪ್ರಕೃತಿಯನ್ನು ಹದಗೆಡಿಸಲಿದೆ ಎಂದು ಭೂಗರ್ಭ ಶಾಸ್ತ್ರಜ್ಞರು ಹೇಳುತ್ತಾರೆ. ಈ ಹಿಂದೆ ಕಾಲಾರ, ಪ್ಲೇಗ್‍ನಂತಹ ಮಾರಕ ರೋಗದ ಹಿಂದೆ ಇಂತಹ ದೊಡ್ಡ ದೊಡ್ಡ ಜ್ವಾಲಮುಖಿಗಳ ಸ್ಫೋಟ ಕಾರಣವಾಗಿತ್ತು. ಇದೀಗ ಮತ್ತೆ ಈ ಭೀತಿ ಅವರಿಸಿದೆ.