ಬೆಂಗಳೂರು: ಆರ್‌ಸಿಬಿಯ (RCB) ಸ್ಟಾರ್ ಆಟಗಾರ ಫಿಲ್ ಸಾಲ್ಟ್(Phil Salt) ಬೌಂಡರಿ ಗೆರೆಯ ಬಳಿ ಹೈದರಾಬಾದಿನ ಹೆನ್ರಿಕ್ ಕ್ಲಾಸೆನ್(Heinrich Klaasen) ಅವರ ಕ್ಯಾಚ್ (Catch) ಹಿಡಿದಿದ್ದು ಈಗ ಬಹಳ ಚರ್ಚೆಗೆ ಗ್ರಾಸವಾಗಿದೆ.
31 ರನ್(22 ಎಸೆತ, 2 ಬೌಂಡರಿ, 1 ಸಿಕ್ಸ್) ಉತ್ತಮವಾಗಿ ಆಡುತ್ತಿದ್ದ ಕ್ಲಾಸನ್ ರೋಮರಿಯೋ ಶೆಫಾರ್ಡ್ ಅವರ ಎಸೆತವನ್ನು ಸಿಕ್ಸ್ ಸಿಡಿಸಲು ಬಲವಾಗಿ ಹೊಡೆದರು. ಈ ವೇಳೆ ಬೌಂಡರಿ ಗೆರೆಯ ಬಳಿ ಸಾಲ್ಟ್ ಅತ್ಯುತ್ತಮವಾಗಿ ಹಿಡಿದು ಸಂಭ್ರಮಿಸಿದರು.
ಕ್ಯಾಚ್ ಹಿಡಿದ ಬೌಂಡರಿ ಗೆರೆಯ ಬಳಿಯಲ್ಲೇ ಸಾಲ್ಟ್ ಬಿದ್ದ ಕಾರಣ ಫೀಲ್ಡ್ ಅಂಪೈರ್ ತೀರ್ಪನ್ನು ಮೂರನೇ ಅಂಪೈರಿಗೆ ವರ್ಗಾಯಿಸಿದರು. ರೀಪ್ಲೈನಲ್ಲಿ ಸಾಲ್ಟ್ ಕ್ಯಾಚ್ ಹಿಡಿದಾಗ ಬೌಂಡರಿ ಗೆರೆಯ ಪಟ್ಟಿ ಅಲುಗಾಡದ ಕಾರಣ ಮೂರನೇ ಅಂಪೈರ್ ಔಟ್ ತೀರ್ಪು ನೀಡಿದರು. ಇದನ್ನೂ ಓದಿ: ಡಫಿ ಮಿಂಚು| ಆರ್‌ಸಿಬಿ ಕ್ಯಾಪ್ ಧರಿಸಿದ ಮೊದಲ ಪಂದ್ಯದಲ್ಲೇ ಭರ್ಜರಿ ಬೌಲಿಂಗ್
That’s not just a catch, that’s a full-on rollercoaster at the ropes 😮💨
Screen badi, awaazein badi. Apne smart TV ke JioHotstar app pe dekhiye Champions waali commentary LIVE💥#TATAIPL 2026 | #RCBvSRH | LIVE NOW 👉 https://t.co/LWOEeT2vNG pic.twitter.com/IzIDC3MtkX
— Star Sports (@StarSportsIndia) March 28, 2026
ಬೌಂಡರಿ ಗೆರೆಯ ಬಳಿಯೇ ನಿಂತಿದ್ದ ಕ್ಲಾಸನ್ ಸ್ಕ್ರೀನ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿ ಹೊರನಡೆದರು. ರೀಪ್ಲೈಯಲ್ಲಿ ಜಾಸ್ತಿ ಸೆಕೆಂಡ್ ಪರಿಶೀಲನೆ ನಡೆಸದೇ ಪಟ್ಟಿ ಅಲುಗಾಡದ ಕಾರಣ ಔಟ್ ತೀರ್ಪು ನೀಡಲಾಗಿತ್ತು. ಇದನ್ನೂ ಓದಿ: ಮೊದಲ ಪಂದ್ಯದಲ್ಲೇ ದಾಖಲೆ ಬರೆದ ವಿರಾಟ್ ಕೊಹ್ಲಿ!
ಸಾಲ್ಟ್ ನಾಯಕ ಇಶನ್ ಕಿಶನ್ ಅವರ ಕ್ಯಾಚನ್ನು ಡೈವ್ ಹೊಡೆದು ಒಂದು ಕೈಯಲ್ಲಿ ಪಡೆದಿದ್ದಾರೆ. ಕಿಶನ್ 80 ರನ್(38 ಎಸೆತ, 8 ಬೌಂಡರಿ, 5 ಸಿಕ್ಸ್) ಹೊಡೆದಿದ್ದಾಗ ಸಿಕ್ಸ್ ಸಿಡಿಸಲು ಬಲವಾಗಿ ಹೊಡೆದರು. ಈ ವೇಳೆ ಓಡಿ ಬಂದ ಸಾಲ್ಟ್ ಡೈವ್ ಹೊಡೆದು ಒಂದೇ ಕೈಯಲ್ಲಿ ಕ್ಯಾಚ್ ಹಿಡಿದು ಅಭಿಮಾನಿಗಳನ್ನು ರಂಜಿಸಿದರು.
Is it a bird? Is it a plane? Nah… it’s Phil Salt flying! 🦅
A one-handed screamer at the boundary to send the captain back – absolute madness 😮💨🔥
Screen badi, awaazein badi. Apne smart TV ke JioHotstar app pe dekhiye Champions waali commentary LIVE💥#TATAIPL 2026 | #RCBvSRH… pic.twitter.com/oKmayJdODT
— Star Sports (@StarSportsIndia) March 28, 2026

