ಬೆಂಗಳೂರು: ಪಿಜಿಸಿಇಟಿ-2026ಕ್ಕೆ (PGCET-2026) ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿಗೆ ಅಭ್ಯರ್ಥಿಗಳ ಅರ್ಹತೆಗೆ ಅನುಗುಣವಾಗಿ ಜುಲೈ 3ರಿಂದ 6ರವರೆಗೆ ಅಂತಿಮ ಅವಕಾಶ ಕಲ್ಪಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಿಳಿಸಿದೆ.
ಈ ಮುಂಚೆ ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ ದಾಖಲಿಸಿರುವ ವಿವರಗಳನ್ನು ಮಾರ್ಪಾಡು ಮಾಡುವ ಮುನ್ನ ಅರ್ಜಿಯಲ್ಲಿ ಮುದ್ರಿತವಾಗಿರುವ ಮಾಹಿತಿಯನ್ನು ಗಮನವಿಟ್ಟು ಪರಿಶೀಲಿಸಿ ನಂತರ ತಿದ್ದುಪಡಿ ಮಾಡಬೇಕು ಹಾಗೂ ಮೀಸಲಾತಿ ವಿವರಗಳನ್ನು ತಪ್ಪದೆ ಪರಿಶೀಲಿಸಬೇಕು. ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಚರ್ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವವರಿಗೆ ಇದು ಅನ್ವಯವಾಗುತ್ತದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಗುರುವಾರ ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ಎಂಇ/ಎಂ.ಟೆಕ್ : ಜು.10ರಂದು ದಾಖಲೆ ಪರಿಶೀಲನೆ
ಪ್ರಸಕ್ತ ಸಾಲಿನಲಿ ಎಂ.ಇ./ಎಂ.ಟೆಕ್. ಆಯ್ದ ಕೋರ್ಸುಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಜುಲೈ 10ರ ಬೆಳಿಗ್ಗೆ 10:30ರಿಂದ ಸಂಜೆ 4ರೊಳಗೆ ಮೂಲ ದಾಖಲೆಗಳ ಪರಿಶೀಲನೆಗೆ ಖುದ್ದು ಹಾಜರಾಗಲು ಸೂಚಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಭಯೋತ್ಪಾದಕ ದಾಳಿಗೆ ಸಂಚು ರೂಪಿಸಿದ್ದ ನಾಲ್ವರ ಬಂಧನ
ಜೈವಿಕ ತಂತ್ರಜ್ಞಾನ, ಕೆಮಿಕಲ್ ಎಂಜಿನಿಯರಿಂಗ್, ಎನ್ವಿರಾನ್‌ಮೆಂಟಲ್ ಎಂಜಿನಿಯರಿಂಗ್, ಪಾಲಿಮರ್ ಸೈನ್ಸ್, ಜವಳಿ ತಂತ್ರಜ್ಞಾನ, ಆರ್ಕಿಟೆಕ್ಚರ್ ಕೋರ್ಸುಗಳಿಗೆ ಇದು ಅನ್ವಯವಾಗುತ್ತದೆ. ಎಂ.ಆರ್ಕಿಟೆಕ್ಚರ್ ಕೋರ್ಸಿಗೆ ಅರ್ಜಿ ಸಲ್ಲಿಸಿರುವವರು ಈ ಮೇಲಿನ ಪ್ರಮಾಣಪತ್ರಗಳ ಜೊತೆಗೆ ಪಿಜಿಇಟಿಎ-26ರಲ್ಲಿ ಪಡೆದಿರುವ ಅಂಕಪಟ್ಟಿಯನ್ನು ಸಹ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.
