ನವದೆಹಲಿ: ಪಿಎಫ್‌ಐ (PFI) ದೇಶದಲ್ಲಿ ಮೂಲಭೂತವಾದ ಮತ್ತು ಮತಾಂಧತೆಯನ್ನು ಹೆಚ್ಚಿಸಿದೆ ಅದರ ನಿಷೇಧ ವಿಳಂಬ ಮಾಡುವುದು ರಾಷ್ಟ್ರೀಯ ಹಿತಾಸಕ್ತಿಗೆ ಸೂಕ್ತವಾಗಿರಲಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ.
ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಅವರು, ಪಿಎಫ್‌ಐ ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ: ಅಮಿತ್ ಶಾ
Advertisement
Advertisement
ಪಿಎಫ್‌ಐ (PFI) ಮತಾಂಧತೆಯನ್ನು ಭಯೋತ್ಪಾದನೆಗೆ (Terrorism) ಕಚ್ಛಾವಸ್ತುವಿನಂತೆ ಬಳಕೆ ಮಾಡಿಕೊಳ್ಳುತ್ತಿತ್ತು. ಅವರ ಚಟುವಟಿಕೆಗಳು ದೇಶದ ಹಿತಾಸಕ್ತಿಗೆ ಸಮಗ್ರತೆಗೆ ಪೂರಕವಾಗಿರಲಿಲ್ಲ. ಆರಂಭದಲ್ಲಿ ಇದು ಕೇರಳ (Kerala) ಮತ್ತು ಕರ್ನಾಟಕದಲ್ಲಿ (Karnataka) ಮಾತ್ರ ಪ್ರಬಲವಾಗಿತ್ತು. ನಂತರದಲ್ಲಿ ದೇಶದ ಎಲ್ಲ ಕಡೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿತ್ತು. ಅಲ್ಲದೇ ವಿದೇಶಿ ಸಂಪರ್ಕ ಹೊಂದಿತ್ತು ಎಂದು ವಿವರಿಸಿದ್ದಾರೆ.
Advertisement
Advertisement
ಪಿಎಫ್‌ಐ ಕೋಮುವಾದ ಬಳಸಿಕೊಂಡು ದೇಶದಲ್ಲಿ ಗಲಭೆ ಸೃಷ್ಟಿಸುವ ಬಗ್ಗೆ ತನಿಖಾ ಸಂಸ್ಥೆಗಳು ವರದಿ ನೀಡಿದ್ದವು. ಸಾಕಷ್ಟು ದಾಖಲೆಗಳು ಲಭ್ಯವಾಗದ ಹಿನ್ನಲೆ ದೇಶದ ಸಮಗ್ರತೆಯ ದೃಷ್ಟಿಯಿಂದ ಪಿಎಫ್‌ಐ ನಿಷೇಧ ಮಾಡುವುದು ಅನಿವಾರ್ಯವಾಗಿತ್ತು ಎಂದು ಅಮಿತ್ ಶಾ ಹೇಳಿದ್ದಾರೆ. ಇದನ್ನೂ ಓದಿ: 2024ರ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಪ್ರತಿಸ್ಪರ್ಧಿಯೇ ಇಲ್ಲ: ಅಮಿತ್ ಶಾ
ಪಿಎಫ್‌ಐ-ಕಾಂಗ್ರೆಸ್ ಒಂದೇ ಅಂತಾ ಹೇಳಲ್ಲ: ಪಿಎಫ್‌ಐಗೆ ಕಾಂಗ್ರೆಸ್ (Congress) ಸಹಾಯ ಮಾಡುವ ಬಗ್ಗೆ ಮಾತನಾಡಿದ ಅವರು, ಪಿಎಫ್‌ಐ ವಿರುದ್ಧ ಕರ್ನಾಟಕವೂ ಸೇರಿದಂತೆ ಹಲವು ಕಡೆ ಪ್ರಕರಣಗಳಿದೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಪಿಎಫ್‌ಐ ಸದಸ್ಯರ ಮೇಲಿದ್ದ ಎಲ್ಲ ಕೇಸುಗಳನ್ನು ವಾಪಸ್ ಪಡೆಯಲಾಯಿತು. ನಾನು ಪಿಎಫ್‌ಐ-ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖ ಅಂತಾ ಎಂದೂ ಹೇಳಿಲ್ಲ. ಆದರೆ ಕಾಂಗ್ರೆಸ್ ಪಿಎಫ್‌ಐ ಅನ್ನು ಮತರಾಜಕಾರಣಕ್ಕೆ ಬಳಸಿದೆ ಅದನ್ನು ಮೀರಿಯೂ ನಾವು ಪಿಎಫ್‌ಐ ನಿಷೇಧಿಸಿದ್ದೇವೆ ಬೀಗಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k