ಬೆಂಗಳೂರು: ದೇಶಾದ್ಯಂತ ಪಿಎಫ್‌ಐ (PFI) ವಿರುದ್ಧ ನಡೆದ ಎನ್‌ಐಎ (NIA) ದಾಳಿಗೆ ತೆಲಂಗಾಣದ ಆಟೋನಗರ್‌ನಲ್ಲಿ ನಡೆಯುತ್ತಿದ್ದ ಕರಾಟೆ ಕ್ಲಾಸ್ (Karate Class) ಕಾರಣ ಎನ್ನುವ ಸ್ಫೋಟಕ ಸತ್ಯ ಬಯಲಾಗಿದೆ.
Advertisement
ತೆಲಾಂಗಣದ (Talangana) ಆಟೋನಗರ್ ನಲ್ಲಿ ಅಬ್ದುಲ್ ಖಾದರ್ ಎಂಬಾತ ನಡೆಸುತ್ತಿದ್ದ ಕರಾಟೆ ಕ್ಲಾಸ್ (Karate Class) ಇದಕ್ಕೆಲ್ಲಾ ಕಾರಣ. ಕರಾಟೆ ಕ್ಲಾಸ್ ನೆಪದಲ್ಲಿ ಪಿಎಫ್‌ಐ ಸದಸ್ಯರಿಗೆ ಇಲ್ಲಿ ಉಗ್ರ ಚಟುವಟಿಕೆಯ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಹೈದರಾಬಾದ್‌ನ (Hyderabad) ಎನ್‌ಐಎನಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.
Advertisement
Advertisement
ಹೈದರಾಬಾದ್ ಎನ್‌ಐಎನಲ್ಲಿ ಆರೋಪಿ ಅಬ್ದುಲ್ ಖಾದರ್ ಸೇರಿ 27 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು. ಇದರಲ್ಲಿ ಹಲವರನ್ನು ಎನ್ಐಎ ಧಿಕಾರಿಗಳು (NIA Officers) ಬಂಧಿಸಿದ್ದರು. ಕರಾಟೆ ಕ್ಲಾಸ್‌ನಲ್ಲಿದ್ದವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ವಿಧ್ವಂಸಕ ಕೃತ್ಯಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ದೇಶಾದ್ಯಂತ ಇದೇ ರೀತಿ ಸಂಚು ಮಾಡುತ್ತಿರುವುದರ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.
Advertisement
ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳ ತಂಡ ಏಕಕಾಲಕ್ಕೆ ದೇಶದ 15 ರಾಜ್ಯಗಳಲ್ಲಿ 93 ಕಡೆ ದಾಳಿ ಮಾಡಿದೆ ಎಂದು ಹೈದರಾಬಾದ್ ಎನ್‌ಐಎ ಅಧಿಕಾರಿಗಳು ದಾಖಲಿಸಿದ್ದ ಎಫ್‌ಐಆರ್ ಮಾಹಿತಿ ಬಹಿರಂಗಗೊಂಡಿದೆ.