ಸಂಪೂರ್ಣ ನಿಷೇಧವಾಗುತ್ತಾ PFI – ಕೇಂದ್ರ ಸರ್ಕಾರದ ಮುಂದಿನ ಪ್ಲ್ಯಾನ್ ಏನು?

Advertisements

ಬೆಂಗಳೂರು: ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆ ಕೇಂದ್ರ ಸರ್ಕಾರ (Central Government) ಐದು ವರ್ಷಗಳಿಗೆ ಪಿಎಫ್‍ಐ (PFI) ಸಂಘಟನೆಯನ್ನು ದೇಶಾದ್ಯಂತ ನಿಷೇಧ ಮಾಡಿದೆ. ಇದೀಗ 5 ವರ್ಷಗಳ ನಿಷೇಧದ ಬಳಿಕ ಸರ್ಕಾರ ಮುಂದೇನು ಮಾಡುತ್ತೆ ಎಂಬ ಪ್ರಶ್ನೆ ಎದ್ದಿದೆ.

Advertisements

ಪಿಎಫ್‍ಐ ಸಂಘಟನೆ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪ ಪದೇ ಪದೇ ಕೇಳಿಬರುತ್ತಿತ್ತು. ಜೊತೆಗೆ ಈ ಸಂಘಟನೆಯನ್ನು ಬ್ಯಾನ್ ಮಾಡಬೇಕೆಂಬ ಕೂಗು ಕೇಳಿಬರುತ್ತಿತ್ತು. ಕೇಂದ್ರಕ್ಕೆ ರಾಜ್ಯ ಸರ್ಕಾರಗಳು ಮನವಿಯನ್ನು ಸಲ್ಲಿಸಿತ್ತು. ಇದೀಗ ಪಿಎಫ್‍ಐ ಸಂಘಟನೆ ಮುಂದಿನ 5 ವರ್ಷ ಬ್ಯಾನ್ ಆಗಿದೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

Advertisements

ಮುಂದೇನು ಮಾಡುತ್ತೆ ಸರ್ಕಾರ?
ಪಿಎಫ್‍ಐ ಮತ್ತು ಅದರ ಸಹ ಸಂಸ್ಥೆಗಳ ವಿರುದ್ಧ ತನಿಖೆ ನಡೆಸಲು ಸರ್ಕಾರ ಮುಂದಾಗುತ್ತದೆ. ಎನ್‍ಐಎ (NIA) ಮತ್ತು ಇಡಿಯಿಂದ (ED) ವಿಸ್ತೃತ ತನಿಖೆ ನಡೆಯಲಿದೆ. ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಿಎಫ್‍ಐ ಪಾತ್ರದ ಬಗ್ಗೆ ತನಿಖೆ ನಡೆಸಲಿದೆ. ಪಿಎಫ್‍ಐ ಖಾತೆಗೆ ವರ್ಗಾವಣೆಯಾಗುತ್ತಿರುವ ಅಕ್ರಮದ ಬಗ್ಗೆ ಇಡಿ ತನಿಖೆ ನಡೆಸಲಿದೆ. ಎರಡು ತನಿಖೆಗಳ ಅಂತಿಮ ವರದಿ ಬಳಿಕ ಕೇಂದ್ರ ಸರ್ಕಾರ ತನ್ನ ಮುಂದಿನ ನಿರ್ಧಾರ ಕೈಗೊಳ್ಳಬಹುದು. ಇದನ್ನೂ ಓದಿ: PFI ಬ್ಯಾನ್ – ‘ಕೈ’ ಪಾಳಯದಲ್ಲಿ ನಡುಕ, ಆಕ್ಷನ್ ಪ್ಲಾನ್‍ಗೆ ಸಿದ್ಧತೆ!

Advertisements

ಪಿಎಫ್‍ಐ ಮೇಲಿನ ಈಗಿರುವ ಎಲ್ಲ ಆರೋಪಗಳು ಸಾಬೀತಾದಲ್ಲಿ ಶಾಶ್ವತ ನಿಷೇಧ ಮಾಡುವ ಬಗ್ಗೆ ಸರ್ಕಾರ ನಿರ್ಧಾರಿಸುವ ಸಾಧ್ಯತೆಯೂ ಇದೆ. ಮುಖ್ಯವಾಗಿ ರಾಜಕೀಯವಾಗಿ ಅಂಗವಾಗಿರುವ ಎಸ್‍ಡಿಪಿಐ (SDPI) ನಿಷೇಧಕ್ಕೂ ಕಾರ್ಯತಂತ್ರಗಳನ್ನು ರೂಪಿಸಬಹುದು. ನ್ಯಾಯಂಗದ ಮೂಲಕವೇ ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬಹುದು. ಪಿಎಫ್‍ಐ ಮೇಲಿನ ಆರೋಪ, ಪಿಎಫ್‍ಐ, ಎಸ್‍ಡಿಪಿಐ ನಂಟು ಉಲ್ಲೇಖಿಸಿ ಮುಂಬರುವ ದಿನಗಳಲ್ಲಿ ಎಸ್‍ಡಿಪಿಐ ನಿಷೇಧಕ್ಕೂ ಪ್ರಯತ್ನ ನಡೆಯುವ ಸಾಧ್ಯತೆ ಹೆಚ್ಚಿದೆ.

Live Tv

Advertisements
Exit mobile version