ಬೆಂಗಳೂರು: ಪಿಎಫ್‌ಐ(PFI) ಕಾರ್ಯಕರ್ತರ ಬಂಧನ ಪ್ರಕರಣಕ್ಕೆ ದಿನಕ್ಕೊಂದು ಸ್ಫೋಟಕ ಟ್ವಿಸ್ಟ್ ಸಿಗುತ್ತಿದ್ದು ಒಂದು ಅಪ್ಲಿಕೇಶನ್‌ಲ್ಲಿ ಎಲ್ಲ ಮಾಹಿತಿಯನ್ನು ಇಡುತ್ತಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.
ಬಂಧಿತರ ಮೊಬೈಲ್ ಡೇಟಾ ರಿಟ್ರೀವ್ ಮಾಡಲಾಗಿದ್ದು, 1 ಸಾವಿರ ಜಿಬಿಯಷ್ಟು ಡೇಟಾ ಸಿಕ್ಕಿದೆ. ಮೊಬೈಲ್‌ನಲ್ಲಿ ಮಂಗಳೂರು, ಕೇರಳದಲ್ಲಿ ನಡೆದ ಕೇಡರ್ ಟ್ರೈನಿಂಗ್ ಫೋಟೋಗಳು ಲಭ್ಯವಾಗಿದೆ. ಈ ಫೋಟೋಗಳ ಜೊತೆ ಬಹಳ ಸೂಕ್ಷ್ಮ ಮಾಹಿತಿಗಳನ್ನು iShredder ಅಪ್ಲಿಕೇಶನ್‌ನಲ್ಲಿ ಇಡಲಾಗುತ್ತಿದ್ದ ವಿಚಾರ ಈಗ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
iShredder ಆಂಡ್ರಾಯ್ಡ್ ಅಪ್ಲಿಕೇಶನ್‌ನಲ್ಲಿ ಯಾವುದೇ ಒಬ್ಬ ಮುಖಂಡ, ಹತ್ಯೆ ಮಾಡುವವರ ಟಾರ್ಗೆಟ್ ಮಾಹಿತಿಯನ್ನು ಸೇವ್ ಮಾಡುತ್ತಿದ್ದರು. ಪಿಎಫ್‌ಐನಿಂದ ಹತ್ಯೆಯಾದ ನಾಲ್ಕು ಜನರ ಫೋಟೋ ಈ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಿದೆ.
ಹತ್ಯೆಯಾದವರು ಅಲ್ಲದೇ ನಾಲ್ಕು ಜನರನ್ನು ಹತ್ಯೆ ಮಾಡಿದವರ ಮೊಬೈಲ್ ಸಂಖ್ಯೆ ಮತ್ತು ಅವರ ಡಿಟೈಲ್ಸ್ ಇಟ್ಟುಕೊಂಡಿದ್ದರು. ಅಷ್ಟೇ ಅಲ್ಲ ಹತ್ಯೆಯ ಸಂಪೂರ್ಣ ಮಾಹಿತಿಯೂ ಆ ಅಪ್ಲಿಕೇಶನ್‌ನಲ್ಲಿ ಲಭ್ಯವಾಗಿದೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI
ಕೊನೆಗೆ ಹತ್ಯೆಯಾದವರು ಬಂಧನಕ್ಕೆ ಒಳಗಾದರೆ ಆ ಎಲ್ಲಾ ಮಾಹಿತಿಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಮೊಬೈಲ್ ರಿಟ್ರೀವ್ ಮಾಡಿದಾಗ ಈ ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು ತನಿಖೆಗೆ ಮತ್ತಷ್ಟು ಸಾಕ್ಷ್ಯಗಳು ಸಿಕ್ಕಂತಾಗಿದೆ.
iShredder ವಿಶೇಷತೆ ಏನು?
ಸುರಕ್ಷಿತವಾಗಿ ಡೇಟಾವನ್ನು ಅಳಿಸಬಹುದು. ಪಾಸ್‌ವರ್ಡ್, ವೀಡಿಯೊಗಳು, ಫೋಟೋಗಳನ್ನು ಡಿಲೀಟ್ ಮಾಡಬಹುದು. ಬಳಸಿದ ಆಂಡ್ರಾಯ್ಡ್ ಫೋನ್ ಮಾರಾಟ ಅಥಾವ ಬೇರೆಯವರ ಬಳಕೆಗೆ ನೀಡುವ ಮೊದಲು ಈ ಅಪ್ಲಿಕೇಶನ್ ಬಳಸಿ ಎಲ್ಲಾ ಡೇಟಾಗಳನ್ನು ಅಳಿಸಿಹಾಕಬಹುದು.