ಬೆಂಗಳೂರು: ಪಿಎಫ್‍ಐ (PFI) ಸಂಘಟನೆ ಬ್ಯಾನ್ ಆದ ಬಳಿಕ ಅ ಸಂಘಟನೆಯನ್ನು ಸಂಪೂರ್ಣ ನಿರ್ಣಾಮ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುಂದಾಗಿವೆ.
ಪಿಎಫ್‍ಐ ಬ್ಯಾನ್ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರ ಅಧಿಕಾರ ನೀಡಿದ ಬೆನ್ನಲ್ಲೇ ರಾಜ್ಯ ಸರ್ಕಾರ ಅಲರ್ಟ್ ಆಗಿದೆ. ಪಿಎಫ್‍ಐ ಬ್ಯಾನ್ ಬಳಿಕ ಆ ಸಂಘಟನೆಯ ಆಸ್ತಿ (Property) ಮೇಲೂ ರಾಜ್ಯ ಸರ್ಕಾರ ಕಣ್ಣು ಹಾಕಿದೆ. ಪಿಎಫ್‍ಐ ಸಂಘಟನೆಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ರಾಜ್ಯ ಸರ್ಕಾರ (Government) ಪ್ರಕ್ರಿಯೆ ಶುರು ಮಾಡಿದೆ. ಇದನ್ನೂ ಓದಿ: CBI ರೇಡ್ ಹಿನ್ನೆಲೆ- ಗೇಟ್‍ಗೆ ಬೀಗ ಹಾಕಿ ಮನೆಯಲ್ಲಿ ಕುಳಿತ ಡಿಕೆಶಿ ತಾಯಿ ಗೌರಮ್ಮ
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ (Araga Jnanendra), ಪಿಎಫ್‍ಐ ಸಂಘಟನೆಗಳ ಆಸ್ತಿ ಬಗ್ಗೆ ಸರ್ವೆ ಕಾರ್ಯ ನಡೆಯುತ್ತಿದೆ. ರಾಜ್ಯಾದ್ಯಂತ ಎಷ್ಟು ಆಸ್ತಿ ಇದೆ ಎಂದು ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಸರ್ವೆ ಕಾರ್ಯದ ಬಳಿಕ ಆಸ್ತಿಯ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಸರ್ವೆಯ ಬಳಿಕ ಪಿಎಫ್‍ಐನ ಸಂಪೂರ್ಣ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ನಡೆಯುತ್ತೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೇರಳ, ತಮಿಳುನಾಡಿನಲ್ಲೂ PFI ಬ್ಯಾನ್