ತೆಲುಗು, ತಮಿಳು ಸಿನಿಮಾಗಳ ಮೂಲಕ ಸದ್ದು ಮಾಡಿರುವ ಮೇಘಾ ಆಕಾಶ್ (Megha Akash) ಅವರು ಬಹುಕಾಲದ ಗೆಳೆಯನ ಜೊತೆ ಮದುವೆಗೆ ಸಿದ್ಧವಾಗಿದ್ದಾರೆ. ಇದರ ನಡುವೆ ಶ್ರೀಲಂಕಾದಲ್ಲಿ ‘ಪೆಟ್ಟಾ’ (Petta) ನಟಿ ಮೇಘಾ ಆಕಾಶ್ ಬ್ಯಾಚುಲರ್ ಪಾರ್ಟಿ ಆಚರಿಸಿಕೊಂಡಿದ್ದಾರೆ. ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.
ಬ್ಯಾಚುಲರ್ ಪಾರ್ಟಿ (Bachelore Party) ಸೆಲೆಬ್ರೇಟ್ ಮಾಡಲು ಶ್ರೀಲಂಕಾಗೆ (Sri Lanka) ಸ್ನೇಹಿತೆಯರ ಜೊತೆ ಮೇಘಾ ಆಕಾಶ್ ವಿಸಿಟ್ ಮಾಡಿದ್ದಾರೆ. ಬಿಳಿ ಬಣ್ಣದ ಗೌನ್ ಧರಿಸಿ ಮುದ್ದಾಗಿ ನಟಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಬ್ಯಾಚುಲರ್ ಲೈಫ್‌ಗೆ ನಟಿ ಗುಡ್ ಬೈ ಹೇಳ್ತಿದ್ದಾರೆ. ಇದನ್ನೂ ಓದಿ:ನಿಮ್ಮನ್ನು ತಾಯಿಯಾಗಿ ಪಡೆದಿರುವುದು ನನ್ನ ಪುಣ್ಯ- ಜೈಲಿನಲ್ಲಿರುವ ಪವಿತ್ರಾರನ್ನು ನೆನೆದು ಮಗಳು ಭಾವುಕ ಪೋಸ್ಟ್
View this post on Instagram
ಅಂದಹಾಗೆ, ಆಗಸ್ಟ್‌ನಲ್ಲಿ ಬಹುಕಾಲದ ಗೆಳೆಯ ಸಾಯಿ ವಿಷ್ಣು ಜೊತೆ ಮೇಘಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇದೇ ಸೆ.14 ಮತ್ತು 15ರಂದು ನಟಿ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.
ಚೆನ್ನೈನಲ್ಲಿ ನಡೆಯಲಿರುವ ಈ ಮದುವೆಗೆ ಸ್ಟಾರ್ ನಟ ರಜನಿಕಾಂತ್ (Rajanikanth), ನಟ ನಿತಿನ್, ಅದಿತ್ ಅರುಣ್ ಸೇರಿದಂತೆ ಅನೇಕರಿಗೆ ನಟಿ ಮೇಘಾ ಆಹ್ವಾನ ನೀಡಿದ್ದಾರೆ. ಸಿನಿಮಾ ಸೆಲೆಬ್ರಿಟಿಗಳ ಜೊತೆ ರಾಜಕೀಯ ರಂಗದ ಗಣ್ಯರಿಗೂ ಆಹ್ವಾನ ನೀಡಿದ್ದಾರೆ.