ಬೆಳಗಾವಿ: ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್ ಬಂಕ್ ಮಾಲೀಕನಿಗೆ ಬರೋಬ್ಬರಿ 44 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
Advertisement
ಬೆಳಗಾವಿಯ ಮಚ್ಚೆಯಲ್ಲಿರುವ ಸೋಮನಾಥ್ ಪೆಟ್ರೋಲ್ ಬಂಕ್‌ನ ಮಾಲೀಕ ಸುನೀಲ್ ಶಿಂಧೆ ಮೋಸ ಹೋದವರು. ಬೆಳಗಾವಿಯ ನಿವಾಸಿ ರೋಹಿತ್ ರಾಜು ಎಂಬಾತ ಕಳೆದ ಮೂರು ವರ್ಷದಿಂದ ಸುನೀಲ್ ಶಿಂಧೆಯ ಪೆಟ್ರೋಲ್ ಬಂಕ್‍ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಒಂದೂವರೆ ವರ್ಷದಲ್ಲಿ ಮಾಲೀಕರಿಗೆ 44 ಲಕ್ಷ ರೂ. ಹಣವನ್ನು ಫೋನ್ ಪೇ ಮೂಲಕ ವಂಚನೆ ಮಾಡಿ ಸಿಕ್ಕಿಹಾಕಿಕೊಂಡಿದ್ದಾನೆ. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು
Advertisement
ಪೆಟ್ರೋಲ್ ಬಂಕ್‌ಗಳಲ್ಲಿ ಫೋನ್ ಪೇ, ಗೂಗಲ್ ಪೇ ಮೂಲಕ ಜನ ಪೇಮೆಂಟ್ ಮಾಡುತ್ತಿದ್ದಾರೆ. ವ್ಯಾಪಾರಸ್ಥರಿಗೆ ಅಂತಾ ಮಾತ್ರ ಈ ಫೋನ್ ಪೇ ಆ್ಯಪ್ ನವರು ಫಂಡ್ ರಿಟರ್ನ್ ಅನ್ನೋ ಆಪ್ಷನ್ ಇಟ್ಟಿದ್ದಾರೆ. ಕೆಲವೊಮ್ಮೆ ವಾಹನ ಸವಾರರು ನೂರು ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಸಾವಿರ ರೂಪಾಯಿ ಫೋನ್ ಪೇ ಮಾಡ್ತಾರೆ. ಆಗ ಅವರಿಗೆ ಹಣವನ್ನು ಹಿಂತಿರುಗಿಸಬೇಕಾಗುತ್ತದೆ. ಇದನ್ನೇ ದುರ್ಬಳಕೆ ಮಾಡಿಕೊಂಡ ರೋಹಿತ್ ರಿಫಂಡ್ ಆಪ್ಷನ್ ಬಳಸಿಕೊಂಡು ನಿತ್ಯವೂ ತನ್ನ ನಂಬರ್‌ನಿಂದ ಪಂಪ್‍ನ ನಂಬರ್‌ಗೆ ಎಂಟು, ಹತ್ತು ಸಾವಿರ ಫೋನ್ ಪೇ ಮಾಡಿ ಮಾಲೀಕನಿಗೆ ಲೆಕ್ಕವನ್ನೂ ಕೊಡುತ್ತಿದ್ದ. ಇದಾದ ಬಳಿಕ ರಾತ್ರಿ ಮನೆಗೆ ವಾಪಾಸ್ ಆಗುವಾಗ ಪಂಪ್‍ನ ನಂಬರ್‌ನಿಂದ ಮತ್ತೆ ತನ್ನ ಅಕೌಂಟ್‍ಗೆ ತಾನು ಹಾಕಿದ ಹಣವನ್ನು ರಿಫಂಡ್ ಮಾಡಿಕೊಂಡು ಕಳೆದ ಒಂದೂವರೆ ವರ್ಷದಲ್ಲಿ 44 ಲಕ್ಷ ರೂ.ಹಣವನ್ನು ಎಗರಿಸಿದ್ದಾನೆ.
Advertisement
Advertisement
ಇತ್ತ ದಿನೇ ದಿನೇ ಲಾಸ್ ಆಗುವ ಕಾರಣಕ್ಕೆ ಕಂಗಾಲಾದ ಮಾಲೀಕ ಬೆಳಗಾವಿಯ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೆಟ್ರೋಲ್ ಬಂಕ್ ಸಿಬ್ಬಂದಿ ರೋಹಿತ್‍ನನ್ನು ಪೊಲೀಸರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದ್ದು, ಈಗಾಗಲೇ ಆತನಿಂದ ಸುಮಾರು 28 ಲಕ್ಷ ರೂ.ಹಣವನ್ನು ವಸೂಲಿ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಚೈತ್ರಾ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಿದ ಡಿಸಿ