– ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಅರ್ಜಿ
– ಲೋಕಾಯುಕ್ತ ತನಿಖೆಗೆ ತಡೆ ನೀಡದ ಹೈಕೋರ್ಟ್
ಧಾರವಾಡ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಹಗರಣದ (MUDA Scam) ತನಿಖೆಯನ್ನು ಸಿಬಿಐಗೆ (CBI) ನೀಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ (High Court) ಧಾರವಾಡ ಪೀಠ ಜ.27ಕ್ಕೆ ಮುಂದೂಡಿದೆ.
Advertisement
ಲೋಕಾಯುಕ್ತ ತನಿಖೆಯಿಂದ (Lokayukta Enquiry) ಸತ್ಯಾಂಶ ಪ್ರಕಟವಾಗುವುದಿಲ್ಲ. ಹೀಗಾಗಿ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಹೈಕೋರ್ಟ್‌ನಲ್ಲಿ ದೂರು ಸಲ್ಲಿಸಿದ್ದರು.
Advertisement
Advertisement
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಲೋಕಾಯುಕ್ತ ಪೊಲೀಸರಲ್ಲಿ ತನಿಖಾ ವರದಿ ಎಲ್ಲಿ ಎಂದು ಕೇಳಿದರು. ಇದಕ್ಕೆ ಲೋಕಾ ಪರ ವಕೀಲರು ತನಿಖಾ ವರದಿ ಪೂರ್ಣಗೊಂಡಿಲ್ಲ ಎಂದು ಹೇಳಿದರು. ಈ ವೇಳೆ ನಾಗಪ್ರಸನ್ನ ಅವರು ಜ.26ರ ಸಂಜೆಯ ಒಳಗಡೆ ಎಷ್ಟು ತನಿಖೆ ನಡೆದಿದೆಯೋ ಅಷ್ಟು ತನಿಖಾ ವರದಿಯನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕೆಂದು ಸೂಚಿಸಿ ವಿಚಾರಣೆಯನ್ನು ಜ.27ಕ್ಕೆ ಮುಂದೂಡಿದರು. ಅಷ್ಟೇ ಅಲ್ಲದೇ ಲೋಕಾಯುಕ್ತ ತನಿಖೆಗೆ ತಡೆ ನೀಡುವುದಿಲ್ಲ. ತನಿಖೆ ಮುಂದುವರಿಯಲಿ ಎಂದು ಸೂಚಿಸಿದರು.
Advertisement
ಇಂದು ವಿಚಾರಣೆಗೆ ಸ್ನೇಹಮಯಿ ಕೃಷ್ಣ ಪರ ಮಣಿಂದರ್ ಸಿಂಗ್, ಸಿದ್ದರಾಮಯ್ಯ ಪರ ರವಿಕುಮಾರ ವರ್ಮಾ ಕುಮಾರ್, ವಿಡಿಯೋ ಕಾನ್ಫರೆನ್ಸ್ ಮೂಲಕ ಅಭಿಷೇಕ್ ಮನು ಸಿಂಘ್ವಿ, ಕಪಿಲ್ ಸಿಬಲ್ ಹಾಜರಾಗಿದ್ದರು. ಮುಡಾ ಪ್ರಕರಣದ ವಿಚಾರಣೆ ಹಿನ್ನೆಲೆಯಲ್ಲಿ ಇಂದು ಕೋರ್ಟ್ ಹಾಲ್ ವಕೀಲರಿಂದ ಕಿಕ್ಕಿರಿದು ತುಂಬಿತ್ತು.
ಮಣಿದರ್ ಸಿಂಗ್ ವಾದ ಏನಿತ್ತು?
ರಾಜಕಾರಣಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಪೊಲೀಸರು ತನಿಖೆಯನ್ನು ಪಾರದರ್ಶಕವಾಗಿ ಮಾಡಲು ಸಾಧ್ಯವಿಲ್ಲ. ಲೋಕಾಯುಕ್ತದ ತನಿಖೆ ಮೇಲೆ ಸ್ಪಷ್ಟ ನಂಬಿಕೆ ಇಲ್ಲ. ಈಗಾಗಲೇ ಪರಿವರ್ತನೆ ಆಗಿದ್ದ ಭೂಮಿಯನ್ನು ಮತ್ತೆ ಕೃಷಿ ಭೂಮಿ ಮಾಡಿದ್ದಾರೆ. ಕೃಷಿ ಭೂಮಿಯನ್ನು ವಾಪಸ್ ಮುಡಾ ತೆಗೆದುಕೊಂಡಿದೆ.
ವಿಜಯನಗರದ ಡೆವಲಪ್ಮೆಂಟ್ ಏರಿಯಾದಲ್ಲಿ 14 ಸೈಟ್‌ಗಳನ್ನು ಸಿಎಂ ಪತ್ನಿ ಪಾರ್ವತಿ ಅವರಿಗೆ ನೀಡಲಾಗಿದೆ. ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಸಂಪೂರ್ಣ ಅಪರಾಧ ಬೆಳಕಿಗೆ ಬಂದಿದೆ. ಪಾರ್ವತಿಯವರು ಈ ಪ್ರಕರಣ ತನಿಖೆ ಆರಂಭವಾಗುತ್ತಿದ್ದಂತೆ ಸೈಟ್‌ಗಳನ್ನು ಮರಳಿಸಿದ್ದಾರೆ. ಡಿವೈಎಸ್‌ಪಿ ಫೈಲ್‌ಗಳನ್ನು ಎತ್ತಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಮುಡಾಗೆ ಹೋಗಿ ದಾಖಲೆ ಎತ್ತಿಕೊಂದು ಹೋಗುರುವ ಬಗ್ಗೆಯೂ ತನಿಖೆ ಮಾಡಿಲ್ಲ ಎಂದು ವಾದಿಸಿದರು.