ತುಮಕೂರು: ನನ್ನ ಇಬ್ಬರು ಮಕ್ಕಳನ್ನು (Children) ದತ್ತು ತೆಗೆದುಕೊಳ್ಳಿ. ನನಗೂ, ನನ್ನ ಪತ್ನಿಗೆ (Wife) ದಯಾಮರಣ ಕೊಡಿ ಎಂದು ತುಮಕೂರು (Tumkur) ಜಿಲ್ಲಾಧಿಕಾರಿ (District Collector) ಕಚೇರಿ ಎಂದು ನೊಂದ ಬಾಡಿಗೆದಾರ ಅಳಲು ತೋಡಿಕೊಂಡರು.
ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಮಕ್ಕಳೊಂದಿಗೆ ಹಾಗೂ ಸಂಬಂಧಿಕರ ಜೊತೆ ಬಂದ ನೊಂದ ಬಾಡಿಗೆದಾರ ಅಂತರಾಜು ಹಾಗೂ ಪತ್ನಿ ತೇಜಸ್ವಿನಿ ದಯಾಮರಣದ ಅರ್ಜಿಯನ್ನು ಮಾಧ್ಯಮದವರಿಗೆ ಪ್ರದರ್ಶಿಸಿ ನಂತರ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್‍ಗೆ ಸಲ್ಲಿಸಿದರು.
Advertisement
Advertisement
ನಂತರ ಮಾಧ್ಯಮದವರ ಜೊತೆ ಮಾತನಾಡಿದ ಬಾಡಿಗೆದಾರ ಅಂತರಾಜು, ದೇಶದಲ್ಲಿ ನ್ಯಾಯಕ್ಕೆ ಬೆಲೆ ಇಲ್ಲ. ನೊಂದವರಿಗೆ ನ್ಯಾಯ ಕೊಡಿಸುವುದಕ್ಕೆ ಆಗಲ್ಲ. ನನ್ನ ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಳ್ಳಿ. ಅಷ್ಟಾದರೂ ಮಾಡಿ. ನನಗೆ ಹಾಗೂ ನನ್ನ ಪತ್ನಿ ತೇಜಸ್ವಿಗೆ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಮನವಿ ಮಾಡಿದರು.
Advertisement
ನಮಗೆ ಹೋಟೆಲ್ ಬಾಡಿಗೆ ಕೊಟ್ಟಂತಹ ಮಾಲೀಕರು ಎಷ್ಟು ಪ್ರಭಾವಶಾಲಿಯಾಗಿದ್ದಾರೆ ಅಂದ್ರೆ, ಸ್ಥಳೀಯ ಶಾಸಕರು, ಸಚಿವರು ಬರಲಿಲ್ಲ. ಜಿಲ್ಲಾಧಿಕಾರಿ, ಎಸ್ಪಿ ಕೂಡ ಬರಲಿಲ್ಲ. ಕೊನೆಗೆ ಒಬ್ಬ ಕಾರ್ಪೋರೇಟರ್ ಕೂಡ ಪ್ರತಿಭಟನೆಯ ಸ್ಥಳಕ್ಕೆ ಸುಳಿಯದಂತೆ ನೋಡಿಕೊಂಡಿದ್ದಾರೆ.
Advertisement
ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತನೆಂದುಕೊಂಡು ವೈ.ಸಿ. ಸಿದ್ದರಾಮಯ್ಯ ಹೋಟೆಲ್ ಬಾಡಿಗೆ ಕೊಟ್ಟು ಸುಮಾರು 2 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಭವಾನಿ ಅಕ್ಕ, ಪ್ರಜ್ವಲ್ ರೇವಣ್ಣ ನಶೆಯಲ್ಲಿರ್ತಾರೆ; ಥರ್ಟಿ, ಸಿಕ್ಸ್ಟಿ ಅಲ್ಲ 2 ಬಾಟ್ಲಿ ಕುಡಿತಾರೆ – ಪ್ರೀತಂ ಗೌಡ
ಬಸವರಾಜ್ ಎಂಬವರ ತ್ರಿಸ್ಟಾರ್ ಹೋಟೆಲ್‍ನ್ನು ಅಂತರಾಜ್ ಬಾಡಿಗೆಗೆ ತಗೊಂಡು ನಡೆಸುತ್ತಿದ್ದರು. ಹೊಟೇಲ್ ಇಂಟಿರಿಯರ್ ಮತ್ತು ಪೀಠೋಪಕರಣಕ್ಕಾಗಿ ಅಂತರಾಜ್ 1 ಕೋಟಿ ರೂ. ಖರ್ಚು ಮಾಡಿದ್ದರು. ಜೊತೆಗೆ 50 ಲಕ್ಷ ರೂ. ಮುಂಗಡ ಹಣವನ್ನೂ ನೀಡಿದ್ದರೂ ಎನ್ನಲಾಗಿದೆ. ಆದರೆ ಹೊಟೇಲ್ ಆರಂಭವಾಗುತ್ತಿದ್ದಂತೆ ಅಂತರಾಜ್ ಜೊತೆ ಹೊಟೇಲ್ ಮಾಲೀಕ ಬಸವರಾಜ್ ಹಾಗೂ ವೈ.ಸಿ.ಸಿದ್ದರಾಮಯ್ಯ ಕ್ಯಾತೆ ತೆಗೆದಿದ್ದಾರೆ. ನಂತರ ಅಂತರಾಜ್‍ರನ್ನು ಹೋಟೆಲ್‍ನಿಂದಲೇ ಹೊರಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತರಾಜ್ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದನ್ನೂ ಓದಿ: ಸ್ನೇಹ ನಂಬಿ ಕೋಟಿ ಕೋಟಿ ಸುರಿದ- ಹಣ ಆಗ್ತಿದ್ದಂತೆ ಉಲ್ಟಾ ಹೊಡೆದ ಮಿತ್ರದ್ರೋಹಿ