ಬೆಂಗಳೂರು: ಕಬ್ಬನ್ ಪಾರ್ಕ್‍ನಲ್ಲಿ ಈಗ ನಾಯಿಗಳಿಗಾಗಿ ಬಿಗ್ ಫೈಟ್ ನಡೆಯುತ್ತಿದೆ. ತೋಟಗಾರಿಕಾ ಇಲಾಖೆಯ ವಿರುದ್ಧ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಂದ ಹಿಡಿದು ಶ್ವಾನ ಪ್ರೇಮಿಗಳು ಕೂಡ ಕಿಡಿಕಾರುತ್ತಿದ್ದಾರೆ.
Advertisement
ಮುಂಜಾವಿನಲ್ಲಿ ಇಳಿಸಂಜೆಯಲ್ಲಿ ಪಾರ್ಕ್‍ಗೆ ವಾಕಿಂಗ್ ಹೋಗೋರು ಜೊತೆಗೆ ಸಾಕು ನಾಯಿಯನ್ನು ಕರೆದುಕೊಂಡು ಹೋಗ್ತಾರೆ. ಅದ್ರಲ್ಲೂ ಬೆಂಗಳೂರಿನ ಕಬ್ಬನ್ ಪಾರ್ಕ್‍ನಲ್ಲಂತೂ ಬೌ ಬೌ ಗಳದ್ದೇ ದರ್ಬಾರ್. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿಯವರು ಇಲ್ಲಿನ ಹಣ ತಗೊಂಡು ಹೋಗಿ ಅಲ್ಲಿ ಕೊಡ್ತಾರೆ: ಸಿ.ಎಂ.ಇಬ್ರಾಹಿಂ ಕಿಡಿ
Advertisement
Advertisement
ಕಬ್ಬನ್ ಪಾರ್ಕ್‍ನ ಒಂದು ಭಾಗ ಸಂಪೂರ್ಣ ನಾಯಿಗಳಿಗೆ ಮೀಸಲಿಡಲಾಗಿದೆ. ಕಬ್ಬನ್ ಪಾರ್ಕ್‍ಗೆ ಹೈಬ್ರೀಡ್ ನಾಯಿಗಳ ಜೊತೆ ಔಟಿಂಗ್ ರೀತಿಯಲ್ಲಿ ಜನ ಬರ್ತಾರೆ. ಆದರೆ ಈ ನಾಯಿಗಳು ಪಾರ್ಕ್‍ನ ಫುಟ್ ಪಾತ್, ಸ್ಥಳವನ್ನು ಗಲೀಜು ಮಾಡುತ್ತೆ. ಕೆಲವರು ಕ್ಲೀನ್ ಮಾಡಲ್ಲ ಅಂತಾ ಈಗ ತೋಟಗಾರಿಕ ಇಲಾಖೆ ಬೌ ಬೌ ಹಾವಳಿ ಬ್ರೇಕ್‍ಗೆ ನೋ ಎಂಟ್ರಿ ಅಸ್ತ್ರವನ್ನು ಪ್ರಯೋಗಿಸಲು ಪ್ರಸ್ತಾವನೆ ಸಿದ್ಧಮಾಡಿದೆ. ಜುಲೈ-1 ರಿಂದ ಕಬ್ಬನ್ ಪಾರ್ಕ್‍ಗೆ ನಾಯಿಗಳಿಗೆ ಸಂಪೂರ್ಣ ನಿಷೇಧ ಹೇರಲು ತಯಾರು ಮಾಡಿದೆ.
Advertisement
#PetDogBan is proposed at Cubbon Park wef 1 July.While we realise it mayb due to uncivic pet parents who neither leash nor pick up the poop at the park,it’s sad that responsible Petizens & their pets suffer!We request Horticulture Dept to reconsider this https://t.co/hUrklIKuZT pic.twitter.com/LycGuWh2vn
— Aindrita Ray (@AindritaR) June 25, 2022
ಈ ಪ್ರಸ್ತಾವನೆಗೆ ಶ್ವಾನ ಪ್ರಿಯರು ಸಿಟ್ಟಿಗೆದ್ದಿದ್ದಾರೆ. ತೋಟಗಾರಿಕಾ ಇಲಾಖೆಯ ಈ ಪ್ರಸ್ತಾವನೆ ಸರಿಯಲ್ಲ ಇದನ್ನು ಹಿಂಪಡೆಯಬೇಕು ಅಂತಾ ಆಗ್ರಹಪಡಿಸಿದ್ದಾರೆ. ನಟಿ ಐಂದ್ರಿತಾ ರೇ ಕೂಡ ಇದು ಸರಿಯಲ್ಲ ಕಬ್ಬನ್ ಪಾರ್ಕ್ ಗೆ ನಾಯಿಗಳ ಎಂಟ್ರಿಯನ್ನು ಬ್ಯಾನ್ ಮಾಡಿದ್ರೇ ಎಲ್ಲಿ ಹೋಗಬೇಕು ಅಂತಾ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದಾರೆ.
ಲಾಲ್‍ಬಾಗ್‍ನಲ್ಲಿ ಈಗಾಗಲೇ ನಾಯಿಗಳ ಎಂಟ್ರಿಗೆ ನಿಷೇಧ ಹೇರಲಾಗಿದೆ. ಆದರೆ ಕಬ್ಬನ್ ಪಾರ್ಕ್‍ನ ಹೊಸ ನಿರ್ಧಾರಕ್ಕೆ ಆರಂಭದಲ್ಲಿಯೇ ದೊಡ್ಡ ಮಟ್ಟದ ವಿರೋಧ ಮೂಡಿದೆ. ಸರ್ಕಾರ ಶ್ವಾನ ಪ್ರಿಯರ ಬೇಡಿಕೆಗೆ ಮಣಿಯುತ್ತಾ ಅಥವಾ ನೋ ಅನ್ನುತ್ತಾ ಕಾದುನೋಡಬೇಕು.