ಬೆಂಗಳೂರು: ಕಾಂಗ್ರೆಸ್-ಬಿಜೆಪಿ ಅವರು ರಾಜ್ಯದ ಹಣ ತೆಗೆದುಕೊಂಡು ಹೋಗಿ ದೆಹಲಿಗೆ ಕೊಡ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಿಡಿಕಾರಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಡೆ ಹಣವಿಲ್ಲ, ದೆಹಲಿಯಿಂದ ಸೂಟ್ ಬರಲ್ಲ. ಅದಕ್ಕೆ ನಮ್ಮ ಕಡೆ ಐಟಿ, ಇಡಿ ಬಂದಿಲ್ಲ. ಹಣವಿದ್ದರೆ ನಾಯಿಯೂ ಬೆನ್ನು ಹತ್ತುತ್ತವೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ಸ್ಟಾರ್ ನಟರ ಸಿನಿಮಾ ನಿರ್ಮಾಣ ಮಾಡಿದ್ದ ಖ್ಯಾತ ನಿರ್ಮಾಪಕನ ಕಾರು ಅಪಘಾತ
Advertisement
Advertisement
ಕಾಂಗ್ರೆಸ್, ಬಿಜೆಪಿಯವರು ಕರ್ನಾಟಕದ ಹಣ ತಗೊಂಡುಹೋಗಿ ದೆಹಲಿಗೆ ಕೊಡ್ತಾರೆ. ಆದರೆ ನಾವು ಪ್ರಧಾನಿ ಮೋದಿ, ಸೋನಿಯಾ ಗಾಂಧಿ ಅವರಿಗೆ ಶರಣಾಗೋದು ಬೇಡ. ನಾವೆಲ್ಲ ಕರ್ನಾಟಕ ತಾಯಿಗೆ ಶರಣಾಗಬೇಕು. ಹಿಂದೂ-ಮುಸ್ಲಿಮರು ಒಂದೇ ತಾಯಿ ಮಕ್ಕಳಂತೆ ಬಾಳಬೇಕು ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ಸಮಸ್ಯೆಯಿಂದ ಕೋವಿಡ್ ಕೇಸ್ ಕಡಿಮೆ ದಾಖಲು – ಇಂದು 133 ಮಂದಿಗೆ ಸೋಂಕು
Advertisement
ಜೆಡಿಎಸ್ ಎಂದಿಗೂ ಟಿಕೆಟ್ ಮಾರುವುದಿಲ್ಲ. ಬಡವನಿಗೆ ಟಿಕೆಟ್ ಕೊಡುತ್ತೆ. ರಾಜಕಾರಣ ಜಾಸ್ತಿ ಮಾತಾಡಲ್ಲ. ಸಯ್ಯದ್ ಮೋಹಿದ್ ಅಲ್ತಾಪ್‌ರಂತಹ ಸಾಧಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದೆ ಎಂದು ಹೇಳಿದ್ದಾರೆ.
Advertisement
ಒಕ್ಕಲುತನ ಮಾಡುವವರೆಲ್ಲ ಒಕ್ಕಲಿಗರು. ಲಿಂಗಾಯತರು, ಕುರುಬರು, ಯಾರೇ ಒಕ್ಕಲುತನ ಮಾಡಿದರೂ ಒಕ್ಕಲಿಗರೇ. ನಾನು ಕೇವಲ ಮುಸ್ಲಿಮರ ಲೀಡರ್ ಅಲ್ಲ. ರಾಜ್ಯದ ಆರೂವರೆ ಕೋಟಿ ಜನರಿಗಾಗಿ ಇದ್ದೇನೆ ಎಂದಿದ್ದಾರೆ.
ಇದೇ ವೇಳೆ ರಾಜ್ಯಸಭೆ ಚುನಾವಣೆ ಸೋಲಿನ ಕುರಿತು ಪ್ರತಿಕ್ರಿಯಿಸಿದ ಅವರು, ಡಿ.ಕೆ.ಸುರೇಶ್ ಅವರಿಗೆ ನೀವು ಕೇಳಬೇಕು. ರಾಜ್ಯಸಭೆ ಚುನಾವಣೆಯಲ್ಲಿ 2ನೇ ಪ್ರಾಶಸ್ತ್ಯದ ಮತ ಯಾರಿಗೆ ಕೊಟ್ರು? ಸಿದ್ದಣ್ಣ(ಸಿದ್ದರಾಮಯ್ಯ) ಯಾರಿಗೆ ಕೊಟ್ರು? ಎಂದು ಕೇಳಬೇಕು ಎಂದು ಕುಟುಕಿದ್ದಾರೆ.