ಬೈಕ್ ರಿಪೇರಿ ಹಣ ಕೊಡದೆ ಸತಾಯಿಸಿದ್ದಕ್ಕೆ ವ್ಯಕ್ತಿ ಹತ್ಯೆ- ಅಪ್ರಾಪ್ತ ಸೇರಿ ನಾಲ್ವರು ಅರೆಸ್ಟ್

Public TV
1 Min Read
ARREST

ಚಿಕ್ಕಬಳ್ಳಾಪುರ: ಬೈಕ್ (Bike) ರಿಪೇರಿ ಹಣದ ವಿಚಾರದಲ್ಲಿ ನಡೆದ ಗಲಾಟೆ ಬೈಕ್ ಮಾಲೀಕನ ಕೊಲೆಯಲ್ಲಿ ಅಂತ್ಯವಾದ ಘಟನೆ ಗೌರಿಬಿದನೂರಿನ  (Gauribidanur) ಚನ್ನಬೈರನಹಳ್ಳಿಯಲ್ಲಿ ನಡೆದಿದೆ.

ಚನ್ನಬೈರನಹಳ್ಳಿಯ ಸತ್ಯನಾರಾಯಣ (45) ಹತ್ಯೆಯಾದ ವ್ಯಕ್ತಿ. ಮೆಕ್ಯಾನಿಕ್ ಚೇತನ್ ಆತನ ಸ್ನೇಹಿತ ಜ್ವಾಲೇಂದ್ರ, ಓರ್ವ ಅಪ್ರಾಪ್ತ ಸೇರಿದಂತೆ ನಾಲ್ವರು ಸೇರಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಆತ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾನೆ. ಇದನ್ನೂ ಓದಿ: 20 ಕೋಟಿ ಬಳಿಕ 200 ಕೋಟಿಗೆ ಬೇಡಿಕೆ- ಅಂಬಾನಿಗೆ ಬಂತು ಮತ್ತೊಂದು ಜೀವಬೆದರಿಕೆ ಇಮೇಲ್

ಕಲ್ಲೋಡಿ ಎಂಬಲ್ಲಿ ಚೇತನ್ ಗ್ಯಾರೆಜ್ ನಡೆಸುತ್ತಿದ್ದ. ಈತನ ಬಳಿ ಹತ್ಯೆಗೀಡಾದ ಸತ್ಯನಾರಾಯಣ ಬೈಕ್ ರಿಪೇರಿ ಮಾಡಿಸಿ ಹಣ ಕೊಟ್ಟಿರಲಿಲ್ಲ. ತನಗೆ ಬರಬೇಕಿದ್ದ ಹಣದ ವಸೂಲಿಗೆ ಚೇತನ್ ಹಾಗೂ ಸ್ನೇಹಿತರು ಆತನ ಮನೆಯ ಬಳಿಗೆ ಹೋಗಿದ್ದಾಗ ಇಬ್ಬರ ನಡುವೆ ಗಲಾಟೆ ನಡೆದಿದೆ. ಈ ವೇಳೆ ಸತ್ಯನಾರಾಯಣ ದೊಣ್ಣೆಯಿಂದ ಚೇತನ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಅದೇ ದೊಣ್ಣೆಯನ್ನು ಚೇತನ್‍ನ ಸ್ನೇಹಿತ ಜ್ವಾಲೇಂದ್ರ ಎಂಬಾತ ಕಸಿದುಕೊಂಡು ಆತನ ಮೇಲೆ ಹಲ್ಲೆ ನಡೆಸಿದ್ದಾನೆ. ಇದರಿಂದ ಸತ್ಯನಾರಾಯಣ ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೆ ಆತ ಸಾವಿಗೀಡಾಗಿದ್ದಾನೆ.

ಪೊಲೀಸರು (Police) ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕೆರೆಗೆ ಧುಮುಕಿದ ಕಾರು- ಓರ್ವ ಪಾರು, ಇಬ್ಬರು ನೀರುಪಾಲು

Web Stories

Share This Article