ದಾವಣಗೆರೆ: ವ್ಯಕ್ತಿಯೊಬ್ಬ ಸಂಚಾರಿ ನಿಯಮವನ್ನು ಉಲ್ಲಂಘಿಸಿದ್ದಕ್ಕೆ ಬರೋಬ್ಬರಿ 16 ಸಾವಿರ ರೂ. ದಂಡವನ್ನು (Fine) ಸಂಚಾರಿ ಪೊಲೀಸರು (Traffic Police) ವಿಧಿಸಿದ್ದಾರೆ.
ದಾವಣಗೆರೆ (Davanagere) ನಗರದ ನಿವಾಸಿ ವೀರೇಶ್ ಎಂಬಾತ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ವ್ಯಕ್ತಿ. ವೀರೇಶ್ ಒಟ್ಟು 26 ಬಾರಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಈತನ ವಿರುದ್ಧ 23 ಬಾರಿ ಈತ ಹೆಲ್ಮೆಟ್ ಇಲ್ಲದೇ ಬೈಕ್ (Bike) ಸಂಚಾರ ಹಾಗೂ ಮೂರು ಬಾರಿ ಬೈಕ್ ಚಲಿಸುವಾಗ ಮೊಬೈಲ್ (Mobile) ಬಳಕೆ ಮಾಡಿದ್ದ ಕೇಸ್ ದಾಖಲಿಸಲಾಗಿತ್ತು. ಇದನ್ನೂ ಓದಿ: ಆಸ್ಪತ್ರೆಗೆ ದಾಖಲಾಗಿದ್ದ ನಿರ್ಮಲಾ ಸೀತಾರಾಮನ್ ಆರೋಗ್ಯ ಸ್ಥಿರ
ಘಟನೆಗೆ ಸಂಬಂಧಿಸಿ ಸಂಚಾರಿ ನಿಯಮ ಉಲ್ಲಂಘನೆಯ ವಿರುದ್ಧ ದಾವಣಗೆರೆ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವೀರೇಶ್‍ನನ್ನು ಸಂಚಾರಿ ಪೊಲೀಸರು ವಶಕ್ಕೆ ಪಡೆದು ಬರೋಬ್ಬರಿ 16 ಸಾವಿರ ರೂ. ದಂಡವನ್ನು ಕಟ್ಟಿಸಿದ್ದಾರೆ. ಇದನ್ನೂ ಓದಿ: ಬೇನಾಮಿ ಆಸ್ತಿ ಮಾಡೋಕೆ ನಮ್ಮಪ್ಪ ಸಿಎಂ ಆಗಿರಲಿಲ್ಲ- ಸಿ.ಟಿ ರವಿ ತಿರುಗೇಟು