ಬೆಂಗಳೂರು: ಮಹಾರಾಣಿ ಕಾಲೇಜಿನ ವಿದ್ಯಾರ್ಥಿನಿಯರಿಗೆ ಹಾಗೂ ಮಹಿಳಾ ಉಪನ್ಯಾಸಕಿಯರಿಗೆ ಕಾಮುಕನೊಬ್ಬ ಕಿರುಕುಳ ನೀಡುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕ್ಯಾಂಟಿನ್ ಒಳಗಡೆ ಮನೆ ಮಾಡಿಕೊಂಡಿರುವ ನವೀನ್ ತಾನು ಆರ್ ಟಿಐ ಕಾರ್ಯಕರ್ತ ಎಂದು ಹೇಳಿಕೊಂಡು ಕಾಟ ನೀಡುತ್ತಿದ್ದಾನೆ ಎಂದು ವಿದ್ಯಾರ್ಥಿನಿಯರ ಪರವಾಗಿ ಪ್ರಾಂಶುಪಾಲರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು.
Advertisement
ನವೀನ್ ನನ್ನ ಎದುರಲ್ಲೇ ಚೇಂಬರ್ ಗೆ ನುಗ್ಗಿ ಚೇರ್ ಎಳೆದು ಕುಳಿತು ಅಸಭ್ಯದಿಂದ ಮಾತಾನಾಡಿದಲ್ಲದೇ, ನಿಮ್ಮ ಲೇಡಿ ಲೆಕ್ಚರ್ ಬೇರೆಯವರ ಜೊತೆ ಕಾರಲ್ಲಿ ಹೋಗ್ತಾ ಇದ್ದಾರೆ. ಅಲ್ಲದೇ ನಾನೊಬ್ಬ ಆರ್ ಟಿಐ ಕಾರ್ಯಕರ್ತ ಎಂದು ಹೇಳಿ ಏನು ಮಾಡ್ಕೊಳ್ಳೋಕ್ಕೆ ಆಗಲ್ಲ ಅಂತಾ ಬೆದರಿಕೆ ಹಾಕುತ್ತಾನೆ. ನವೀನ್ ಕ್ಯಾಂಟಿನ್ ಬರೋ ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ಮಾತುಕತೆ ನಡೆಸುತ್ತಾನೆ. ಕೆಲವೊಮ್ಮೆ ವಿದ್ಯಾರ್ಥಿನಿಯರ ಫೋಟೋ ಕೂಡ ತೆಗೆಯುತ್ತಾನೆ ಎಂದು ಪ್ರಾಂಶುಪಾಲೆ ದೂರು ನೀಡಿದ್ದಾರೆ.
Advertisement
ದೂರು ದಾಖಲಿಸಿಕೊಂಡ ಮಹಿಳಾ ಆಯೋಗ ಕೂಡಲೇ ಪೊಲೀಸರಿಗೆ ಸೂಚಿಸಿ ಕ್ಯಾಂಟಿನ್ ತೆರವಿಗೆ ಸೂಚನೆ ನೀಡಿದ್ದರು. ಕಾಮುಕ ನವೀನ್ ನಡುರಾತ್ರಿಯಲ್ಲಿ ಹಾಸ್ಟೆಲ್ ಕ್ಯಾಂಪಸ್ ಅಸುಪಾಸು ಸುತ್ತಾಡುತ್ತಿರುವ ದೃಶ್ಯ ಸಿಸಿಟವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Advertisement
ದೂರು ಬಂದ ಹಿನ್ನಲೆಯಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಕಾಲೇಜಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮೊಬೈಲ್ ಹಿಡ್ಕೊಂಡು ಬ್ಯುಸಿಯಾಗಿದ್ದ ಮಹಾರಾಣಿ ವಿದ್ಯಾರ್ಥಿನಿಗೆ ಬುದ್ದಿ ಮಾತು ಹೇಳಿದ್ದಾರೆ. ಬುದ್ದಿ ಮಾತು ಹೇಳಿದ್ದಾಗ ವಿದ್ಯಾರ್ಥಿನಿಯರು ಕೂಡಲೇ ಮೊಬೈಲ್ ಅನ್ನು ಬ್ಯಾಗ್‍ನೊಳಗೆ ಹಾಕಿದ್ದಾರೆ.
Advertisement
ಕಾಲೇಜ್ ಸಮಸ್ಯೆ ಕೇಳೋಕೆ ಬಂದ ಮಹಿಳಾ ಆಯೋಗದ ಅಧ್ಯಕ್ಷೆಯನ್ನು ವಿದ್ಯಾರ್ಥಿಗಳು ಮೇಡಂ ಬಸ್ ಪಾಸ್ ಮಾಡ್ಕೊಡಿ ಎಂದು ಕೇಳಿಕೊಂಡಿದ್ದಾರೆ. ಕಾಲೇಜ್ ಸಮಸ್ಯೆ ಸೈಡಿಗಿರಲಿ ನಮ್ಗೆ ಸರ್ಕಾರ ಬಸ್ ಪಾಸ್ ಮಾಡಿಕೊಟ್ಟಿಲ್ಲ. ಸರ್ಕಾರ ಏನ್ ಮಾಡ್ತಿಲ್ಲ ಅಂತಾ ಬಂದ ತಕ್ಷಣವೇ ವಿದ್ಯಾರ್ಥಿನಿಯರು ಅಳಲು ತೋಡಿಕೊದ್ದಾರೆ.