ಬೆಂಗಳೂರು: ಮೊದಲನೆ ಹೆಂಡತಿಗೆ ತಲಾಖ್ ನೀಡಿದ್ದೀನಿ ಅಂತ ಎರಡನೇ ಮದುವೆಯಾದವನು ಈಗ ಎರಡನೇ ಹೆಂಡತಿಗೂ ಕೈ ಕೊಟ್ಟು ಮೂರನೇ ಮದುವೆಯಾಗಿದ್ದಾನೆ.
ಬೆಂಗಳೂರಿನ ನಿವಾಸಿ ಇಮ್ರಾನ್ ಖಾನ್‍ಗೆ ಮದುವೆಯಾಗೋದೆ ಕಾಯಕ. ನಾನು ಮೊದಲನೇ ಹಂಡತಿಗೆ ತಲಾಖ್ ನೀಡಿದ್ದೀನಿ ಅಂತ ಶೇಖ್ ಹುಸೇನ್ ಎಂಬವರ ಮಗಳು ಅರ್ಶಿಯಾಳನ್ನು 5 ವರ್ಷದ ಹಿಂದೆ ವರಿಸಿದ್ದ.
ಇದನ್ನೂ ಓದಿ: ತ್ರಿವಳಿ ತಲಾಖ್ ನಿಷೇಧ – ಸುಪ್ರೀಂನಿಂದ ಮಹತ್ವದ ತೀರ್ಪು
ಬಡ ಕುಟುಂಬದವರಾಗಿದ್ರಿಂದ ಹುಸೇನ್ ಆತುರಾತುರದಲ್ಲಿ ಮದುವೆ ಮಾಡಿಕೊಟ್ಟಿದ್ರು. ಈ ಮದುವೆಗೆ ಸಾಕ್ಷಿಯಾಗಿ ಮುದ್ದಾದ ಒಂದು ಗಂಡು ಮಗುವಿದೆ. ಈಗ ಅರ್ಶಿಯಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ. ಈ ಹೊತ್ತಲ್ಲಿ ಈಕೆಯನ್ನು ಬಿಟ್ಟುಹೋಗಿದ್ದಾನೆ. ಎಲ್ಲಿಂದಲೋ ಫೋನ್ ಮಾಡಿ ನಾನು ಮೂರನೇ ಮದುವೆಯಾಗಿದ್ದೀನಿ. ಯಾರಿಗೂ ಹೇಳ್ಬೇಡ ಹೇಳಿದ್ರೆ ನಿನ್ನಕಡೆ ತಲೆಹಾಕಲ್ಲ ಅಂತ ಧಮ್ಕಿ ಹಾಕಿದ್ದಾನೆ.
ಇದನ್ನೂ ಓದಿ: 4 ಮದುವೆಯಾಗಿ ಮತ್ತೊಂದು ಮದುವೆಗೆ ಸಿದ್ಧವಾಗಿರೋ ಶಾಸಕರ ಬಂಟ
ಸದ್ಯ ತನ್ನ ಗಂಡನ ವರ್ತನೆಯಿಂದ ನೊಂದ ಆರ್ಶಿಯಾ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ಅಮೆರಿಕಾದಲ್ಲಿ ಇದ್ದುಕೊಂಡೇ ಪತ್ನಿಗೆ ತಲಾಖ್: ಪತಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್
ಇದನ್ನೂ ಓದಿ: ಸ್ಪೀಡ್ ಪೋಸ್ಟ್ ನಲ್ಲಿ ತಲಾಖ್ ನೀಡಿದ್ದ ಪತಿ ವಿರುದ್ಧ ಗೆದ್ದು ಅನಿಷ್ಟ ಪದ್ದತಿಗೆ ಮುಕ್ತಿ ಹಾಡಿದ್ದು ಈ ಮಹಿಳೆ