ಧಾರವಾಡ: ಅಮೆರಿಕಾದಲ್ಲಿ ಇದ್ದುಕೊಂಡೇ ಧಾರವಾಡದ ಪತ್ನಿಗೆ ಇಮೇಲ್ ಮೂಲಕ ತಲಾಖ್ ನೀಡಿದ್ದ ಪತಿಗೆ ಧಾರವಾಡದ ಜೆಎಂಎಫ್‍ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.
ಮೆಹಬೂಬನಗರದ ಗುಲ್ಜಾರ್ ದಿಡಗುರ ಎಂಬುವನು 2010ರಲ್ಲಿ ಧಾರವಾಡದ ಮುಫ್ತಿನತಾಜ್ ಎಂಬ ಯುವತಿಯನ್ನು ಮದುವೆಯಾಗಿದ್ದನು. ಮದುವೆಯ ನಂತರ ಪತ್ನಿ ಮುಫ್ರಿನ್‍ತಾಜ್‍ಳನ್ನ ಹೇಳದೆ ಕೇಳದೇ ಬಿಟ್ಟು ಗುಲ್ಜಾರ್ ಅಮೇರಿಕಾಕ್ಕೆ ಹೋಗಿದ್ದನು.
Advertisement
ಮುಫ್ರಿನ್‍ತಾಜ್‍ಗೆ ಅಮೆರಿಕಾದಿಂದಲೇ ಇಮೇಲ್ ಮೂಲಕ ತಲಾಖ್ ನಾಮಾ ಕಳುಹಿಸಿದ್ದನು. ಇದನ್ನು ಪ್ರಶ್ನಿಸಿ ಮುಫ್ರಿನ್ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದರು. ಇನ್ನು ಪತಿ ಹಾಗೂ ಪತಿಯ ಮನೆಯವರು ನನಗೆ ವರದಕ್ಷಿಣೆ ಕಿರುಕುಳ ನೀಡಿದ್ದರು ಎಂದು ಮುಫ್ರಿನ್‍ತಾಜ್ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ಇಂದು ಜೆಎಂಎಫ್‍ಸಿ ನ್ಯಾಯಾಲಯ ಪತಿ ಗುಲ್ಜಾರ್ ಹಾಗೂ ಅವರ ತಂದೆ ತಾಯಿಗೆ ಕೂಡಾ ನ್ಯಾಯಾಲಯಕ್ಕೆ ಹಾಜರಾಗಲು ಸಮನ್ಸ್ ಜಾರಿ ಮಾಡಿದೆ.
Advertisement
ಪತಿ ಗುಲ್ಜಾರ್ ಮೇಲೆ ಕ್ರಿಮಿನಲ್ ಮೊಕದ್ದಮೆ ದೂರು ದಾಖಲು ಮಾಡಲು ನ್ಯಾಯಾಲಯ ಆದೇಶ ನೀಡಿದೆ. ಇನ್ನು ಈ ಸಮನ್ಸ್ ಮುಟ್ಟಿದ ಮೇಲೆ ಪತಿ ನ್ಯಾಯಾಲಯಕ್ಕೆ ಹಾಜರಾಗದೇ ಇದಲ್ಲಿ ಆತನ ಮೇಲೆ ರೆಡ್ ಕಾರ್ನರ್ ನೋಟಿಸ್ ಜಾರಿ ಆಗುವ ಸಾಧ್ಯತೆ ಇದೆ ಎಂದು ಮುಫ್ರಿನತಾಜ್ ಪರ ವಕೀಲರು ಹೇಳಿದರು.
Advertisement