ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 500ರೂ. ಹಾಗೂ 1,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ ಇಂದಿಗೆ 100 ದಿನ. ಹೊಸ 2000 ಸಾವಿರ ನೋಟ್ ಕೈಗೆ ಬಂದು ಮೂರು ತಿಂಗಳೇ ಕಳೆದಿವೆ. ಈ ಮಧ್ಯೆ ಮೈಸೂರಿನಲ್ಲಿ 2000 ನೋಟು ಪುಡಿ ಪುಡಿಯಾಗಿದ್ದ ಸುದ್ದಿ ನೋಡಿದ್ರಿ. ಅದೇ ರೀತಿಯ ಘಟನೆ ಬೆಂಗಳೂರಿನ ಪೀಣ್ಯದಲ್ಲೂ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಪೀಣ್ಯ ದಾಸರಹಳ್ಳಿಯ ನಿರಂಜನ್ ಹೆಗಡೆಯವರಿಗೆ ಸಿಕ್ಕಿರುವ 2000 ಸಾವಿರ ರೂ. ಹೊಸ ನೋಟ್ ಕೂಡ ಪುಡಿ ಪುಡಿಯಾಗಿ ಉದುರುತ್ತಿದೆ.
Advertisement
ಕಳೆದ ಮೂರು ದಿನಗಳ ಹಿಂದೆ ನಿರಂಜನ್ ಹೆಗಡೆಯವರ ಹಾರ್ಡ್‍ವೇರ್ ಶಾಪ್‍ಗೆ ಬಂದ ಗ್ರಾಹಕರೊಬ್ಬರು ಈ ನೋಟನ್ನ ಕೊಟ್ಟಿದ್ದಾರೆ. ಆದ್ರೆ ಇದೀಗ ಈ ನೋಟ್‍ನ್ನು ಬ್ಯಾಂಕ್‍ನವರಿಗೆ ತೋರಿಸಿದ್ರೆ ಇದು ನಕಲಿ ನೋಟ್ ಅಲ್ಲ ಒರಿಜಿನಲ್ ನೋಟು ಅದ್ರೆ ಯಾಕೆ ಹೀಗೆ ಆಗ್ತಿದೆ ಅಂತಾ ಗೊತ್ತಿಲ್ಲ ಅಂತಾರೆ ಎಂಬುವುದಾಗಿ ತಿಳಿದುಬಂದಿದೆ.