ದಾವಣಗೆರೆ/ಧಾರವಾಡ: ಒಬ್ಬರು ಜೀವ ತೆಗೆಯುತ್ತಾರೆ, ಇನ್ನೊಬ್ಬರು ಜೀವ ಉಳಿಸ್ತಾರೆ. ಚೆನ್ನಾಗಿದ್ದವರನ್ನ ಸಾಯಿಸೇಬಿಟ್ರು ಕಾಂಗ್ರೆಸ್‍ನ ಮಾಜಿ ಸಚಿವ. ರಕ್ತದ ಮಡುವಲ್ಲಿ ಬಿದ್ದ ಮಹಿಳೆಯ ಜೀವ ಉಳಿಸಿದ್ದು ಹಾಲಿ ಸಚಿವ. ಇದು ಹಾಲಿ ಮತ್ತು ಮಾಜಿ ಸಚಿವರ ಒಳ್ಳೆ ಕೆಲಸ, ಕೆಟ್ಟ ಕೆಲಸದ ಸ್ಟೋರಿ.
ಮಾಜಿ ಸಚಿವ ಪರಮೇಶ್ವರ್ ನಾಯ್ಕ್ ರಸ್ತೆಯಲ್ಲಿ ಹೋಗ್ತಿದ್ದ ಬಡಪಾಯಿ ಜೀವ ತೆಗೆದರೆ ಅತ್ತ ಧಾರವಾಡದಲ್ಲಿ ಅಪಘಾತದಲ್ಲಿ ನರಳುತ್ತಿದ್ದ ಮಹಿಳೆಗೆ ಸಚಿವ ವಿನಯ್ ಕುಲಕರ್ಣಿ ಮರುಜೀವ ಕೊಟ್ಟಿದ್ದಾರೆ.
Advertisement
ಕಾಂಗ್ರೆಸ್ ಸರ್ಕಾರದಲ್ಲಿ ಮಾಡಬಾರದ್ದನ್ನೆಲ್ಲಾ ಮಾಡಿ ಸಚಿವ ಸ್ಥಾನ ಕಳೆದುಕೊಂಡ ಪರಮೇಶ್ವರ್ ನಾಯ್ಕ್ ಬಡ ಯುವಕನ ಜೀವ ತೆಗೆದಿದ್ದಾರೆ. ಡಿಸೆಂಬರ್ 4ರಂದು ಚಿತ್ರದುರ್ಗದ ಸಿಬಾರ್ ಬಳಿ ಪರಮೇಶ್ವರ್ ನಾಯ್ಕ್ ಇದ್ದ ಕಾರು 24 ವರ್ಷದ ಓಬಳೇಶ್ ಎಂಬ ಯುವಕನಿಗೆ ಗುದ್ದಿತ್ತು.
Advertisement
Advertisement
ಆದ್ರೆ ಆ ಪುಣ್ಯಾತ್ಮ ಯುವಕನನ್ನ ಆಸ್ಪತ್ರೆಗೆ ಸೇರಿಸದೇ ಹೊರಟು ಹೋಗಿದ್ರು. ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಇವತ್ತು ಜೀವ ಬಿಟ್ಟಿದ್ದಾನೆ.
Advertisement
ಅತ್ತ ಧಾರವಾಡದ ಹೈಕೋರ್ಟ್ ಬಳಿ ಅಪರಚಿತ ವಾಹನ ಮಹಿಳೆಗೆ ಡಿಕ್ಕಿ ಹೊಡೆದಿತ್ತು. ಅದೇ ದಾರಿಯಲ್ಲಿ ಬರ್ತಿದ್ದ ಸಚಿವ ವಿನಯ್ ಕುಲಕರ್ಣಿ ಆಕೆಯನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಕಾರಿನಿಂದ ಕೆಳಗಿಳಿದು ತಮ್ಮ ಕಾರಿನಲ್ಲಿ ಮಹಿಳೆಯನ್ನ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದಾರೆ.