ಗದಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಬಸವೇಶ್ವರ ಕಾಲೋನಿಯಲ್ಲಿ ನಡೆದಿದೆ.
28 ವರ್ಷದ ಚನ್ನಪ್ಪ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಚನ್ನಪ್ಪ ಮನೆ ಮೇಲಿಂದ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವಾಗ ಮನೆಯ ಕರೆಂಟ್ ಸರ್ವೀಸ್ ವೈರ್ ಗೆ ಕುತ್ತಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.
ಮೃತ ಚನ್ನಪ್ಪನ ಕುಟುಂಬದಲ್ಲಿ ಮೂರು-ನಾಲ್ಕು ವರ್ಷಗಳಿಂದ ಭಿನ್ನಾಭಿಪ್ರಾಯ ಇತ್ತು. ಚನ್ನಪ್ಪ ಪ್ರತಿದಿನ ಕುಡಿದು ಗಲಾಟೆ ಮಾಡುತ್ತಿದ್ದ. ಇದರಿಂದ ಈತನ ಪತ್ನಿ ತವರು ಮನೆಗೆ ಹೋಗಿದ್ದರು.
ಇತ್ತೀಚೆಗಷ್ಟೆ ಚನ್ನಪ್ಪ ತವರು ಮನೆಯಿಂದ ಮತ್ತೆ ಪತ್ನಿಯನ್ನು ಕರೆದುಕೊಂಡು ಬಂದಿದ್ದ. ಆದರೆ ಬುಧವಾರ ರಾತ್ರಿ ಮತ್ತೆ ಚನ್ನಪ್ಪ ಕುಡಿದು ಗಲಾಟೆ ಮಾಡಿದ್ದಾನೆ. ಆದ್ದರಿಂದ ಪತ್ನಿ ನಾನು ನಿನ್ನ ಜೊತೆ ಇರುವುದಿಲ್ಲ ಎಂದು ಹೇಳಿ ವಿಚ್ಛೇದನ ನೀಡುವುದಾಗಿ ಹೇಳಿದ್ದಾರೆ. ಇದರಿಂದ ಮನನೊಂದ ಚನ್ನಪ್ಪ ತಡರಾತ್ರಿ ಸುಮಾರು 1 ಗಂಟೆ ವೇಳೆಯಲ್ಲಿ ಮನೆಯ ಮಾಳಿಗೆಯಿಂದ ಹಾರಿ ಪ್ರಾಣ ಕಳೆದುಕೊಳ್ಳಲು ಯತ್ನಸಿದ್ದ. ಅಷ್ಟರಲ್ಲಿ ಕರೆಂಟ್ ವೈರ್ ಗೆ ಕುತ್ತಿಗೆ ಸಿಲುಕಿಕೊಂಡು ಮೃತಪಟ್ಟಿದ್ದಾನೆ.
ಮೃತನ ದೇಹ ವೈರ್ ಗೆ ಸಿಲುಕಿಕೊಂಡು ನೇತಾಡುತ್ತಿದ್ದು, ಕೆಳಗೆ ಇಳಿಸಲು ಶರಹರ ಠಾಣೆಯ ಪೋಲಿಸರು ಹಾಗೂ ಸ್ಥಳಿಯರು ರಾತ್ರಿಯಿಡೀ ಹರಸಾಹಸ ಪಟ್ಟಿದ್ದಾರೆ. ಇತ್ತ ಕಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಈ ಘಟನೆ ಸಂಬಂಧ ಗದಗ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.