ತರಬೇತಿಗೆ ಬಂದಾಕೆಯನ್ನ ಗರ್ಭಿಣಿ ಮಾಡಿದ ಜಿಮ್ ಟ್ರೈನರ್

Public TV
2 Min Read
CKB GYM CASE

– ಮಗನ ಕೃತ್ಯಕ್ಕೆ ಅಪ್ಪನ ಸಾಥ್

ಚಿಕ್ಕಬಳ್ಳಾಪುರ: ದೈಹಿಕ ಫಿಟ್ ನೆಸ್ ಗಾಗಿ ಬಂದ ಯುವತಿ ಜೊತೆ ಲವ್ವಿಡವ್ವಿ ಅಂತ ಶುರುವಿಟ್ಟುಕೊಂಡು ಆಕೆಯನ್ನು ಗರ್ಭಿಣಿಯಾಗಿಸಿ ಕೈಕೊಡಲು ಯತ್ನಿಸಿದ್ದ ಜಿಮ್ ಟ್ರೈನರ್ ಜೈಲು ಪಾಲಾಗಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗೌತಮ್ ಎಂಬಾತನೇ ಮೋಸ ಮಾಡಿದ ಜಿಮ್ ಟ್ರೈನರ್. ದೊಡ್ಡಬಳ್ಳಾಪುರ ನಗರದ ಕೋರ್ಟ್ ರಸ್ತೆಯಲ್ಲಿರುವ ಬುಲೆಟ್ ಜಿಮ್ ಮಾಲೀಕ ಹಾಗೂ ಟ್ರೈನರ್ ಆಗಿರುವ ಗೌತಮ್ ಮಹಿಳೆಯರು ಮತ್ತು ಪುರುಷರಿಗೆ ಫಿಟ್ ನೆಸ್ ತರಬೇತಿ ಕೊಡುತ್ತಿದ್ದನು. ತರಬೇತಿಗೆ ಬರುತ್ತಿದ್ದ ಯುವತಿಯರನ್ನು ಟಾರ್ಗೆಟ್ ಮಾಡಿಕೊಂಡಿದ್ದ ಗೌತಮ್ ಪ್ರೀತಿ ನಾಟಕವಾಡಿ ಅವರನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದನು ಎಂಬ ಆರೋಪಗಳು ಕೇಳಿ ಬಂದಿವೆ.

CKB GYM CASE 1

ಅರ್ಚನಾ (ಹೆಸರು ಬದಲಾಯಿಸಲಾಗಿದೆ) ಎಂಬ ಯುವತಿ ಕಳೆದ ಒಂದು ವರ್ಷದಿಂದ ಗೌತಮ್ ಬಳಿ ತರಬೇತಿಗೆ ಬರುತ್ತಿದ್ದಳು. ಅರ್ಚನಾ ಜೊತೆ ಪ್ರೀತಿಯ ನಾಟಕವಾಡಿದ ಗೌತಮ್ ಮದುವೆಯಾಗುವುದಾಗಿ ನಂಬಿಸಿ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿ ಮಾಡಿದ್ದಾನೆ.

ಅರ್ಚನಾ ಗರ್ಭಿಣಿ ಎಂಬ ವಿಷಯ ತಿಳಿಯುತ್ತಿದ್ದಂತೆ ಆಕೆಯೊಂದಿಗೆ ಅಂತರ ಕಾಯ್ದುಕೊಂಡ ಗೌತಮ್, ಜಿಮ್ ಟ್ರೈನಿಂಗ್ ಗೆ ಬರುತ್ತಿದ್ದ ಮತ್ತೋರ್ವ ಶ್ರೀಮಂತ ಕುಟುಂಬದ ಯುವತಿ ಜೊತೆ ಲವ್ವಿ ಡವ್ವಿ ಶುರು ಹಂಚಿಕೊಂಡು ಆಕೆಯನ್ನು ರಹಸ್ಯವಾಗಿ ಮದುವೆಯಾಗಲು ನಿರ್ಧರಿಸಿದ್ದನು. ಮದುವೆ ವಿಷಯ ತಿಳಿಯುತ್ತಿದ್ದಂತೆ ಗೌತಮ್ ತಂದೆ ರಾಜಣ್ಣ ಬಳಿ ಹೋದ ಅರ್ಚನಾ ನ್ಯಾಯ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾಳೆ. ಅರ್ಚನಾಳ ಮಾತಿಗೆ ಬೆಲೆ ಕೊಡದ ರಾಜಣ್ಣ, ನನ್ನ ಮಗನ ಮದುವೆ ಬೇರೆ ಯುವತಿ ಜೊತೆ ಮಾಡಿಸುತ್ತೇನೆ ಏನು ಬೇಕಾದ್ರೂ ಮಾಡಿಕೋ ಎಂದು ಅವಾಜ್ ಹಾಕಿದ್ದಾನೆ.

love complaint 1

ಗೌತಮ್ ತಂದೆಯಿಂದಲೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಅರ್ಚನಾ ನೇರವಾಗಿ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಕೂಡಲೇ ಎಚ್ಚೆತ್ತ ದೊಡ್ಡಬಳ್ಳಾಪುರ ವೃತ್ತ ನೀರಿಕ್ಷಕ ಸಿದ್ದರಾಜು ಆ್ಯಂಡ್ ಟೀಂ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಕದ್ದು ಮುಚ್ಚಿ ಮದುವೆಯ ಅರತಕ್ಷತೆಗೆ ಸಿದ್ಧವಾಗಿದ್ದ ಗೌತಮ್ ನನ್ನ ಬಂಧಿಸಿದ್ದಾರೆ. ಇತ್ತ ಮಗನ ಕೃತ್ಯಕ್ಕೆ ಸಹಾಯ ಮಾಡಿದ್ದ ತಂದೆ ರಾಜಣ್ಣನನ್ನು ಸಹ ಪೊಲೀಸರು ಜೈಲಿಗೆ ಅಟ್ಟಿದ್ದಾರೆ. ಇನ್ನು ಗೌತಮ್ ಜೊತೆ ಮದುವೆ ಆಗಲು ಬಂದಿದ್ದ ಯುವತಿ ಮನೆಯಲ್ಲಿ ಯಾರಿಗೂ ತಿಳಿಸದೇ ಚಿನ್ನಾಭರಣದೊಂದಿಗೆ ಬಂದಿದ್ದಳು ಎಂಬ ಮಾಹಿತಿ ಲಭಿಸಿದೆ.

Share This Article
Leave a Comment

Leave a Reply

Your email address will not be published. Required fields are marked *