ಕಲಬುರಗಿ: ಸಿಎಂ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಹೆಸರಲ್ಲಿ ಅಭಿಮಾನಿ ಸಂಘಟನೆಯೊಂದು ಹುಟ್ಟಿಕೊಂಡಿದೆ. ಬರೀ ಸಂಘ ಆಗಿದ್ರೆ ಸುದ್ದಿ ಆಗ್ತಿರಲಿಲ್ಲವೇನೋ. ಆದ್ರೆ ರಾಕೇಶ್ ಹೆಸರಲ್ಲಿ ಕೋಟ್ಯಂತರ ರೂಪಾಯಿ ದೋಖಾ ಬೆಳಕಿಗೆ ಬಂದಿದೆ.
Advertisement
ಯಾದಗಿರಿಯ ಶಹಾಪುರ ತಾಲೂಕಿನ ತಡಬಡಿ ಗ್ರಾಮದ ನಿವಾಸಿ ಮಾಳಪ್ಪ ಪೂಜಾರಿ ಅನ್ನೋ ಖತರ್ನಾಕ್ ಆಸಾಮಿ, 2012-13ರಲ್ಲಿ “ರಾಕೇಶ ಸಿದ್ದರಾಮಯ್ಯ ಅಭಿಮಾನಿಗಳ ಒಕ್ಕೂಟ” ಕಟ್ಟಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತ್ತು ಸೇಡಂ ತಾಲೂಕಿನ ಹಲವು ಗ್ರಾಮೀಣ ಪ್ರದೇಶದ ಜನರಿಗೆ ವಂಚಿಸಿದ್ದಾನೆ. ಸಂಘದ ಹೆಸರಲ್ಲಿ ಬ್ಯಾಂಕ್ ಸಾಲ, ಸರ್ಕಾರಿ ಕೆಲಸ, ನಿವೇಶನದ ಆಮಿಷವೊಡ್ಡಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಪರಾರಿಯಾಗಿದ್ದಾನೆ.
Advertisement
Advertisement
ದುರಂತ ಅಂದ್ರೆ ಸಂಗೀತಾ ಎಂಬವರ ಕುಟುಂಬದ 20 ಎಕರೆ ಜಮೀನನ್ನ ತನ್ನ ಹೆಸರಿಗೆ ಮಾಡಿಸಿಕೊಂಡಿದ್ದಾನೆ. 2016ರ ಜುಲೈನಲ್ಲಿ ವಿದೇಶದಲ್ಲಿ ರಾಕೇಶ್ ನಿಧನರಾದ ಸುದ್ದಿ ಬಳಿಕ ಆತಂಕಕ್ಕೀಡಾದ ಜನ ಹಣ ನೀಡುವಂತೆ ಮಾಳಪ್ಪನ ಬೆನ್ನು ಬಿದ್ದು, ಸ್ಟೇಷನ್ ಮೆಟ್ಟಿಲೇರಿ ಕೆಲವರು ಅಲ್ಪ-ಸ್ವಲ್ಪ ಹಣ ವಾಪಸ್ ಪಡೆದಿದ್ದಾರೆ. ಆದ್ರೆ ಉಳಿದ ಹಣ ಇನ್ನೂ ಕೊಟ್ಟಿಲ್ಲ.
Advertisement
ಈ ಬಗ್ಗೆ ಪಬ್ಲಿಕ್‍ಟಿವಿ ಪ್ರಶ್ನಿಸಿದಾಗ ಅಧಿಕಾರಿಯ ಮಾತು ನಂಬಿ ಹಣ ಪಡೆದಿದ್ದು ನಿಜ. ಆದ್ರೆ ಎಲ್ಲರ ಹಣ ವಾಪ್ ನೀಡಿದ್ದೇನೆ ಅಂತ ಮಾಳಪ್ಪ ಸಬೂಬು ಕೊಡ್ತಿದ್ದಾನೆ.