ಬಾಗಲಕೋಟೆ: ಖಾಸಗಿ ಕಂಪನಿಯ ಉದ್ಯೋಗಿ ಅಂತಾ ಹೇಳಿಕೊಂಡು 4 ಲಾಡ್ಜ್ ನಲ್ಲಿ ಎರಡೆರಡು ರೂಂ ಬುಕ್ ಮಾಡಿದ ಖತರ್ನಾಕ್ ವ್ಯಕ್ತಿಯೊಬ್ಬ ಕಳ್ಳತನ ಮಾಡಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ನಗರದ ಕೃಪಾ, ವಿಸ್ತಾ, ನವನಗರದ ಅಕ್ಷಯ್ ಹಾಗೂ ಆನಂದ್ ಲಾಡ್ಜ್‍ಗಳಲ್ಲಿ 8ನೇ ತಾರೀಖಿನಂದು ಕಳ್ಳ ತನ್ನ ಕೈ ಚಳಕ ತೋರಿದ್ದಾನೆ. ವಾಸುದೇವ್ ಕೆ.ಎನ್ ಎಂಬ ಹೆಸರಿನಲ್ಲಿ ನಕಲಿ ಓಟರ್ ಐಡಿ ಕೊಟ್ಟು ರೂಂ ಪಡೆದ ಕಳ್ಳ, ಲೆಡ್ಜರ್ ಬುಕ್‍ನಲ್ಲಿ ಬೆಂಗಳೂರಿನ ವಿಳಾಸ ನೀಡಿದ್ದಾನೆ. ರೂಂ ಕೀ ಸೇರಿದಂತೆ ಲಾಡ್ಜ್‍ನಲ್ಲಿದ್ದ ಎಲ್‍ಇಡಿ ಟಿವಿಗಳನ್ನು ಎಗರಿಸಿದ್ದಾನೆ.
ಕಳ್ಳನ ಚಲನವಲನ ಸಿಸಿಟಿವಿ ಫುಟೇಜ್‍ನಲ್ಲಿ ದಾಖಲಾಗಿದ್ದು ಈ ಬಗ್ಗೆ ನವನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.