– ಹೊಸ ನೀತಿ ಉಲ್ಲಂಘನೆ ಮಾಡಿದ್ರೆ ಕ್ರಮ, ಡಿಸಿ ಆದೇಶ
ಕೋಲಾರ: ಬಳ್ಳಾರಿ ಬ್ಯಾನರ್ ಗಲಾಟೆ ಬಳಿಕ ಎಚ್ಚೆತ್ತ ಕೋಲಾರ (Kolar) ಜಿಲ್ಲಾಡಳಿತ ಜಿಲ್ಲೆಗೆ ಅನ್ವಯವಾಗುವಂತೆ ಫ್ಲೆಕ್ಸ್ (Flex), ಬ್ಯಾನರ್ ಅಳವಡಿಕೆಗೆ ಹೊಸ ನೀತಿ ಜಾರಿ ಮಾಡಿದೆ.
ಕೋಲಾರದಲ್ಲಿ ಇನ್ಮುಂದೆ ಫ್ಲೆಕ್ಸ್ ಅಳವಡಿಕೆಗೆ ಅನುಮತಿ ಕಡ್ಡಾಯವಾಗಿದ್ದು, ಯಾವುದೇ ಕಾರ್ಯಕ್ರಮವಿದ್ದರೂ ಮೂರು ದಿನ ಮಾತ್ರ ಫ್ಲೆಕ್ಸ್ ಬ್ಯಾನರ್ ಅಳವಡಿಕೆಗೆ ಅನುಮತಿ ನೀತಿಯನ್ನ ಜಾರಿ ಮಾಡಲಾಗಿದೆ. ಕಾರ್ಯಕ್ರಮದ ಮುನ್ನಾ ದಿನ, ಕಾರ್ಯಕ್ರಮದ ದಿನ ಹಾಗೂ ನಂತರ ಒಂದು ದಿನ ಮಾತ್ರ ಫ್ಲೆಕ್ಸ್ ಇರಬೇಕು ಎಂದು ಉಲ್ಲೇಖ ಮಾಡಿದ್ದು, ನಗರದ ಸೌಂದರ್ಯ ಹಾಳು ಮಾಡುವ, ಎಲ್ಲೆಂದರಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಸ್ಥಳದಲ್ಲಿ ಫ್ಲೆಕ್ಸ್ ಹಾಕುವಂತಿಲ್ಲ ಎಂದು ಆದೇಶಿಸಲಾಗಿದೆ. ಇದನ್ನೂ ಓದಿ: ಮಂಗಳೂರು| ತಂದೆ-ಚಿಕ್ಕಪ್ಪನ ಗಲಾಟೆ ಬಿಡಿಸಲು ಹೋಗಿ ಅಪ್ಪನ ಕತ್ತಿಯೇಟಿಗೆ ಮಗಳು ಬಲಿ
ಒಂದು ವೇಳೆ ನಿಯಮ ಮೀರಿ ಫ್ಲೆಕ್ಸ್ ಹಾಕಿದರೆ ದಂಡದ ಜೊತೆಗೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ಸಹ ನೀಡಲಾಗಿದೆ. ಕೋಲಾರ ಜಿಲ್ಲಾಧಿಕಾರಿ (Kolar DC) ಎಂ.ಆರ್.ರವಿ ಅವರಿಂದ ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಆದೇಶ ಮಾಡಿದ್ದು, ಇದರಿಂದ ನಗರದ ಸೌಂದರ್ಯ ಸೇರಿದಂತೆ ಅಹಿತಕರ ಘಟನೆಗಳು ಆಗದಂತೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಉದ್ಯಮಿಯನ್ನು ಹೆಲ್ಮೆಟ್‌ನಿಂದಲೇ ಹೊಡೆದು ಕೊಂದ ಮೂವರು ಡೆಲಿವರಿ ಬಾಯ್ಸ್

