`ಅಖಂಡ’ (Akanda) ಸಿನಿಮಾದ ಸಕ್ಸಸ್ ನಂತರ `ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದ ಮೂಲಕ ಬಾಲಯ್ಯ ಸದ್ದು ಮಾಡ್ತಿದ್ದಾರೆ. ಈ ಸಿನಿಮಾ ರಿಲೀಸ್ ಬೆನ್ನಲ್ಲೇ ಬಾಲಯ್ಯ ಅವರಿಗೆ ಸಂಕಷ್ಟವೊಂದು ಎದುರಾಗಿದೆ. ಈ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮಕ್ಕೆ ಸರ್ಕಾರ ಬ್ರೇಕ್ ಹಾಕಿದೆ.
Advertisement
ಆಂಧ್ರ ಪ್ರದೇಶದಲ್ಲಿ ಸಿನಿಮಾ ಮತ್ತು ರಾಜಕೀಯ ಎರಡು ಒಟ್ಟಿಗೆ ಬೆರೆತು ಹೋಗಿದೆ. ಈಗ ರಾಜಕೀಯದವರು ಸಿನಿಮಾದವರ ವಿರುದ್ಧ ರಾಜಕೀಯ ಮಾಡ್ತಿದ್ದಾರೆ. ಸಿಎಂ ಜಗನ್ (Chief Minister Jagan) ಸರ್ಕಾರಕ್ಕೆ ಸಿನಿಮಾ ರಂಗದವರ ಮೇಲೆ ಅದೇನೋ ಸಿಟ್ಟಿದ್ದಂತಿದೆ. ಈ ಹಿಂದೆ ಪವನ್ ಕಲ್ಯಾಣ್ (Pawan Kalyan) ಅವರ ಸಿನಿಮಾಗಳ ವಿರುದ್ಧ ಸಮರ ನಡೆಸಿದ ಜಗನ್, ಈಗ ನಂದಮೂರಿ ಬಾಲಕೃಷ್ಣ ಚಿತ್ರದ ವಿರುದ್ಧ ತಮ್ಮ ರಾಜಕೀಯ ವರಸೆಗಳನ್ನು ಪ್ರಯೋಗಿಸುತ್ತಿದ್ದಾರೆ. ಟಿಡಿಪಿ ಪಕ್ಷದ ಶಾಸಕರೂ ಆಗಿರುವ ಬಾಲಯ್ಯ ಅವರ ಹೊಸ ಸಿನಿಮಾ ಶೀಘ್ರದಲ್ಲಿಯೇ ಬಿಡುಗಡೆ ರೆಡಿಯಾಗಿದೆ. `ಅಖಂಡ’ ಸೂಪರ್ ಸಕ್ಸಸ್ ನಂತರ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆಯಿದೆ. ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಆಂಧ್ರದಲ್ಲಿ ಜಗನ್ ಸರ್ಕಾರ ಅನುಮತಿ ನಿರಾಕರಿಸಿದೆ.
Advertisement
Advertisement
ನಂದಮೂರಿ ಬಾಲಕೃಷ್ಣ ನಟನೆಯ `ವೀರ ಸಿಂಹ ರೆಡ್ಡಿ’ (Veera Simha Reddy) ಸಿನಿಮಾವು ಜನವರಿ 12ರಂದು ತೆರೆಗೆ ಬರಲಿದೆ. ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಅನ್ನು ಆಂಧ್ರದ ಒಂಗೋಲು ಪಟ್ಟಣದ ಎಬಿಎಂ ಗ್ರೌಂಡ್ನಲ್ಲಿ ಆಯೋಜಿಸಲು ಸಿನಿಮಾದ ನಿರ್ಮಾಪಕರಾದ ಮೈತ್ರಿ ಮೂವಿ ಮೇಕರ್ಸ್ (Mytri Movie Makers) ಸಿದ್ಧರಾಗಿದ್ದರು. ಕಳೆದ ಎರಡು ದಿನಗಳಿಂದ ಪ್ರೀರಿಲೀಸ್ಗಾಗಿ ಸಿದ್ಧತೆಯೂ ಭರದಿಂದ ಸಾಗಿತ್ತು. ಮೈದಾನವನ್ನು ಸಜ್ಜು ಮಾಡಲಾಗುತ್ತಿತ್ತು. ಭಾರಿ ಸಂಖ್ಯೆಯಲ್ಲಿ ಪಾಸುಗಳನ್ನು ಪ್ರಿಂಟ್ ಮಾಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಅಧಿಕಾರಿಗಳು ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ್ದಾರೆ. ಇದನ್ನೂ ಓದಿ:ರೆಸಾರ್ಟ್ನಲ್ಲಿ ರೂಪೇಶ್- ಸಾನ್ಯ ಸಂಬಂಧ ಸ್ಟ್ರಾಂಗ್ ಆಯ್ತು: ರಾಕೇಶ್ ಅಡಿಗ
Advertisement
ಸಿನಿಮಾ ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳು ಜಮಾಯಿಸುವುದರಿಂದ ಟ್ರಾಫಿಕ್ ಸಮಸ್ಯೆ ಎದುರಾಗಲಿದೆ ಎಂಬ ಕಾರಣ ನೀಡಿ, ಕಾರ್ಯಕ್ರಮಕ್ಕೆ ತಡೆ ನೀಡಲಾಗಿದೆ. ಇವೆಂಟ್ ಮಾಡಲು ಅಧಿಕಾರಿಗಳು ಬೇರೇ ಜಾಗವನ್ನು ಸೂಚಿಸಿದ್ದಾರೆ. ಈ ಎಲ್ಲಾ ಅಡೆತಡೆ ಮೀರಿ ಬಾಲಯ್ಯ ಸಿನಿಮಾ ಕಾರ್ಯಕ್ರಮ ನಡೆಯುತ್ತಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k