ಎಎಪಿ ಅಧಿಕಾರಕ್ಕೇರಿದ ರಾಜ್ಯಗಳಲ್ಲಿ ಗುತ್ತಿಗೆ ನೌಕರರ ಹುದ್ದೆ ಖಾಯಂ: ಕೇಜ್ರಿವಾಲ್

Public TV
1 Min Read
Arvind Kejriwal

ನವದೆಹಲಿ: ಎಎಪಿ(AAP) ನೇತೃತ್ವ ಪಂಜಾಬ್ ಸರ್ಕಾರ ರಾಜ್ಯದ 8,736 ಶಿಕ್ಷಕರನ್ನು ಖಾಯಂಗೊಳಿಸಿರುವುದಕ್ಕೆ ದೆಹಲಿ(Delhi) ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ಎಲ್ಲಾ ರಾಜ್ಯ ಸರ್ಕಾರಗಳೂ ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿ ಮನವಿ ಮಾಡಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಅತಿಥಿ ಶಿಕ್ಷಕರನ್ನು ಖಾಯಂಗೊಳಿಸಲು ದೆಹಲಿ ಸರ್ಕಾರ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿದೆ. ಆದರೆ ಕೇಂದ್ರ ಅದನ್ನು ಅಂಗೀಕರಿಸಿಲ್ಲ. ಆದರೆ ಎಎಪಿ ಅಧಿಕಾರಕ್ಕೆ ಬರುವ ಎಲ್ಲಾ ರಾಜ್ಯಗಳಲ್ಲೂ ಗುತ್ತಿಗೆ ಸರ್ಕಾರಿ ನೌಕರರನ್ನು ಖಾಯಂಗೊಳಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಇದನ್ನೂ ಓದಿ: ಮೋದಿ ಪ್ರಧಾನಿಯಾಗಿ ಇರುವವರೆಗೂ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಬಿಡಲ್ಲ, ಇದು ನಮ್ಮ ಶಪಥ – ಬಿಎಸ್‌ವೈ

Punjab Chandigarh Arvind Kejriwal 1

ಅತಿಥಿ ಮತ್ತು ತಾತ್ಕಾಲಿಕ ಶಿಕ್ಷಕರ ಶ್ರಮದಿಂದ ದೆಹಲಿಯಲ್ಲಿ ಶಿಕ್ಷಣ ಕ್ರಾಂತಿಯಾಗಿದೆ. ನಮ್ಮ ಸಾಮಾನ್ಯ ಆಸ್ಪತ್ರೆಯ ಸಿಬ್ಬಂದಿ ದೆಹಲಿಯ ಆಸ್ಪತ್ರೆಗಳು ಮತ್ತು ಸ್ಥಳೀಯ ಚಿಕಿತ್ಸಾಲಯಗಳಲ್ಲಿ ಅದ್ಭುತವಾದ ಕೆಲಸಗಳನ್ನೇ ಮಾಡಿದ್ದಾರೆ. ದೆಹಲಿಯ ಈ ತಾತ್ಕಾಲಿಕ ಶಿಕ್ಷಕರು ಮತ್ತು ವೈದ್ಯರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ಮಾಡಲು ನಮಗೆ ಸಹಾಯ ಮಾಡಿದ್ದಾರೆ ಎಂದರು. ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್ ಇದ್ದರೆ, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು

arvind kejriwal

ಒಪ್ಪಂದದ ಉದ್ಯೋಗ ವ್ಯವಸ್ಥೆ ಅತ್ಯಂತ ಶೋಚನೀಯ. ನಮ್ಮಲ್ಲಿ ಆರ್ಥಿಕತೆ ಬೆಳೆಯುತ್ತಿದ್ದರೂ ಸರ್ಕಾರಿ ಉದ್ಯೋಗಗಳನ್ನು ರಾಜ್ಯ ಹಾಗೂ ಕೇಂದ್ರಗಳು ಏಕೆ ಕಡಿತಗೊಳಿಸುತ್ತಿವೆ? ಎಲ್ಲಾ ರಾಜ್ಯ ಸರ್ಕಾರಗಳು ತಮ್ಮ ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುವಂತೆ ನಾನು ಒತ್ತಾಯಿಸುತ್ತೇನೆ. ಆಮ್ ಆದ್ಮಿ ಪಕ್ಷದ ಕಡೆಯಿಂದ, ನಮ್ಮ ಸರ್ಕಾರ ರಚನೆಯಾದಲ್ಲೆಲ್ಲಾ ನಾವು ತಾತ್ಕಾಲಿಕ ಉದ್ಯೋಗಿಗಳನ್ನು ಖಾಯಂಗೊಳಿಸುತ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದರು.

Live Tv
[brid partner=56869869 player=32851 video=960834 autoplay=true]

Share This Article