ಮೈಸೂರು: ಪ್ರೀತಿಸಿ ಮದುವೆಯಾಗಿದ್ದ ಯುವ ಜೋಡಿಗೆ ಪೋಷಕರೇ ಕೊಲೆ ಬೆದರಿಕೆ ಹಾಕಲಾಗಿದ್ದು, ಸದ್ಯ ನಮಗೇ ಯಾವುದೇ ತೊಂದರೆಯಾದರೂ ಪೋಷಕರೇ ಕಾರಣ ಎಂದು ಯುವ ಜೋಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಜಿಲ್ಲೆಯ ಪಿರಿಯಾಪಟ್ಟಣ ಪಟ್ಟಣದ ನಿವಾಸಿಗಳಾದ ಇಬ್ಬರು ಕಳೆದ 7 ವರ್ಷಗಳಿಂದ ಪ್ರೀತಿಸಿದ್ದರು. ಆದರೆ ಇವರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅದ್ದರಿಂದ ಯುವ ಜೋಡಿ ಜೂನ್ 4 ರಂದು ಮನೆಯಿಂದ ಹೊರ ಬಂದಿರುವುದಾಗಿ ತಿಳಿಸಿದ್ದಾರೆ.
ಸದ್ಯ ಇಬ್ಬರು ತಮ್ಮ ಜೀವಕ್ಕೆ ಅಪಾಯವಿದೆ ಎಂದು ತಿಳಿಸಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ 7 ವರ್ಷಗಳಿಂದ ನಾವು ಪ್ರೀತಿ ಮಾಡುತ್ತಿದ್ದು, ಜೂನ್ 4ರಂದು ಮನೆ ಬಿಟ್ಟು ಬಂದು ಬೇರೆ ವಾಸವಿದ್ದೇವು. ಆದರೆ ಯುವತಿ ತಂದೆ ನಮ್ಮ ಮನೆಗೆ ಬಂದು ಆಕೆಯನ್ನು ಕರೆದುಕೊಂಡು ಹೋಗಿ ಸಂಬಂಧಿಗಳ ಮನೆಯಲ್ಲಿ ಕೂಡಿಹಾಕಿದ್ದರು. ಬಳಿಕ ನಾನು ಅಲ್ಲಿಂದ ಆಕೆಯನ್ನು ಕರೆದುಕೊಂಡು ಬಂದಿದ್ದೇನೆ. ಆದರೆ ಸದ್ಯ ನಮಗೆ ಪೋಷಕರ ಕಡೆಯಿಂದ ಜೀವ ಬೆದರಿಕೆ ಇದ್ದು, ರಕ್ಷಣೆ ನೀಡಲು ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಯುವತಿಯ ಪೋಷಕರು ಇಬ್ಬರನ್ನು ಕೊಲೆ ಮಾಡಲು ಕೇರಳದಿಂದ ರೌಡಿಗಳನ್ನು ಕರೆಸಿದ್ದಾರೆ ಎಂದು ಆರೋಪಿಸಿದ್ದು, ಇದರಿಂದ ಸ್ವಗ್ರಾಮಕ್ಕೆ ಹೋಗಲು ಹೆದರಿಕೆಯಾಗುತ್ತಿದೆ. ನಮಗೆ ಸಹಾಯ ಮಾಡಿ ಎಂದು ಇಬ್ಬರು ಮನವಿ ಮಾಡಿದ್ದಾರೆ.