ಬೆಂಗಳೂರು: ಪರ್ಫ್ಯೂಮ್ ಫಿಲ್ಲಿಂಗ್ ವೇಳೆ ಬ್ಲಾಸ್ಟ್‌ಗೊಂಡು ಪರ್ಫ್ಯೂಮ್ ಗೋಡೌನ್‌ಗೆ (Perfume Godown) ಬೆಂಕಿ ತಗುಲಿದ ಪರಿಣಾಮ ಮೂವರು ಸಜೀವ ದಹನವಾಗಿದ್ದು, 5 ಮಂದಿ ಗಾಯಗೊಂಡ ಘಟನೆ ಕುಂಬಳಗೋಡು (Kumbalagodu) ಠಾಣಾ ವ್ಯಾಪ್ತಿಯ ರಾಮಸಂದ್ರದಲ್ಲಿ (Ramasandra) ನಡೆದಿದೆ.
ಕೆಂಗೇರಿಯ (Kengeri) ರಾಮಸಂದ್ರದಲ್ಲಿ ಈ ಅವಘಡ ಸಂಭವಿಸಿದೆ. ಘಟನೆಯಿಂದ ಅಕ್ಕಪಕ್ಕದ ಮನೆಗಳಿಗೂ ಹಾನಿ ಉಂಟಾಗಿದ್ದು, ಒಂದು ಬೈಕ್ ಬೆಂಕಿಗಾಹುತಿಯಾಗಿದೆ. ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಸಜೀವ ದಹನವಾಗಿದ್ದಾರೆ. ಇನ್ನು ಘಟನೆಯಿಂದ 5 ಮಂದಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಯುಪಿ ಟೈಂ ಬಾಂಬ್ ಪ್ರಕರಣ – ಮುಂಗಡವಾಗಿ 10 ಸಾವಿರ ನೀಡಿದ್ದ ಮಹಿಳೆ ಅರೆಸ್ಟ್
ಮನೆಯೊಂದರಲ್ಲಿ ಫರ್ಪೂಮ್ ಕೆಮಿಕಲ್ ಫಿಲ್ಲಿಂಗ್ ಮಾಡುತ್ತಿದ್ದ ಸಂದರ್ಭ ಸ್ಫೋಟಗೊಂಡು ಅವಘಡ (Fire Accident) ಸಂಭವಿಸಿದೆ. ಘಟನೆ ನಡೆಯುವ ವೇಳೆ ಒಟ್ಟು 8 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಫಿಲ್ಲಿಂಗ್ ವೇಳೆ ಸ್ಫೋಟಗೊಂಡಿದ್ದು, ಇಡೀ ಮನೆಯನ್ನು ಆವರಿಸಿದೆ. ಘಟನೆಯಲ್ಲಿ ಮೂವರು ಸಜೀವ ದಹನ ಆಗಿದ್ದು, ಉಳಿದ ಐವರು ಗೋಡೌನ್‌ನಿಂದ ಹೊರಗಡೆ ಓಡಿಬಂದಿದ್ದಾರೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಸದ್ಯ ಮಾಲೀಕರು ಯಾರು ಅನ್ನೋದರ ಪತ್ತೆ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಕುಂಬಳಗೋಡು ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ಆರ್‌ಆರ್ ಆಸ್ಪತ್ರೆಗೆ ರವಾನಿಸಲಾಗಿದೆ. ಇದನ್ನೂ ಓದಿ: ರಂಭಾಪುರಿ ಶ್ರೀಗಳ ಕಾರಿನತ್ತ ಚಪ್ಪಲಿ ಎಸೆತ ಪ್ರಕರಣ- 59 ಮಂದಿ ವಿರುದ್ಧ ಎಫ್‍ಐಆರ್
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ಮುಂದುವರೆದಿದೆ. ಕ್ಷಣಕ್ಷಣಕ್ಕೂ ಬೆಂಕಿ ಹೆಚ್ಚುತ್ತಿದ್ದು, ಅಕ್ಕಪಕ್ಕದ ಮನೆಯವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿದೆ. ಸುಗಂಧ ದ್ರವ್ಯ ತಯಾರಿಸುವ ಕೆಮಿಕಲ್‌ನಿಂದ ಸ್ಫೋಟಗೊಂಡು ಘಟನೆ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ – ಕೊಡಲಿಯಿಂದ ಕೊಚ್ಚಿ ಸಶಸ್ತ್ರ ಪಡೆ ಕಮಾಂಡರ್ ಹತ್ಯೆ
ಇದಕ್ಕೂ ಮೊದಲು ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್‌ನಿಂದಾಗಿ ಘಟನೆ ಸಂಭವಿಸಿದೆ ಎಂದು ಶಂಕಿಸಲಾಗಿತ್ತು. ಈ ಕುರಿತು ಕೆಂಗೇರಿ ವಿಭಾಗ ಬೆಸ್ಕಾಂ ಎಇ ಪ್ರತಿಕ್ರಿಯಿಸಿದ್ದು, ಟ್ರಾನ್ಸ್‌ಫಾರ್ಮರ್‌ನಿಂದ ಬೆಂಕಿ ಸಂಭವಿಸಿಲ್ಲ. ಗೋಡೌನ್‌ನಲ್ಲೇ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು