ಮುಂಗಾರು ಮಳೆ ಪ್ರಾರಂಭವಾಗಿದೆ. ಪ್ರತಿದಿನ ಜಿಟಿ ಜಿಟಿ ಮಳೆಯಾಗುತ್ತಿರುತ್ತದೆ. ಜೊತೆಗೆ ಬೆಚ್ಚನೆಯ ವಾತಾವರಣ. ಹೀಗಾಗಿ ಮೆನೆಯಲ್ಲಿ ಮಕ್ಕಳಿಗೆ, ಮನೆಯವರಿಗೆ ನೆಗಡಿ, ಕೆಮ್ಮು ಮತ್ತು ಗಂಟಲು ಕಿರಿಕಿರಿ ಉಂಟಾಗುತ್ತಾರೆ. ಇವುಗಳೆಲ್ಲವನ್ನು ತಡೆಯಬೇಕಾದರೆ ಮನೆಯಲ್ಲಿ ಆಗಾಗ ಮೆಣಸಿನ ರಸಂ ಮಾಡಿ ಕೊಡಿ. ಇದರಿಂದ ಕೆಮ್ಮು ಮತ್ತು ಗಂಟಲು ಕಿರಿಕಿರಿ ಕಡಿಮೆಯಾಗುತ್ತದೆ. ಮುಂಗಾರಿನ ವಾತಾವರಣಕ್ಕೂ ತುಂಬಾ ರುಚಿಯಾಗಿರುತ್ತದೆ. ಆದ್ದರಿಂದ ನಿಮಗಾಗಿ ಮೆಣಸಿನ ರಸಂ ಮಾಡುವ ವಿಧಾನ ಇಲ್ಲಿದೆ….
ಬೇಕಾಗುವ ಸಾಮಾಗ್ರಿಗಳು:
1. ಕಾಳು ಮೆಣಸು – 2 ಚಮಚ
2. ಜೀರಿಗೆ – 1 ಚಮಚ
3. ಶುಂಠಿ -ಸ್ವಲ್ಪ
4. ಬೆಳ್ಳುಳ್ಳಿ – 6-7
5. ಅರಿಶಿಣ -ಚಿಟಿಕೆ
6. ಹುಣಸೆ ರಸ – 2 ಚಮಚ
7. ಉಪ್ಪು – ರುಚಿಗೆ ತಕ್ಕಷ್ಟು
8. ಬೆಲ್ಲ – 2 ಚಮಚ
9. ಕೊತ್ತಂಬರಿ ಸುಪ್ಪು -ಸ್ವಲ್ಪ
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಮೆಣಸು, ಜೀರಿಗೆ, ಶುಂಠಿ, ಬೆಳ್ಳುಳ್ಳಿ ಎಲ್ಲವನ್ನೂ ಜಜ್ಜಿಕೊಂಡು ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಒಂದು ಪ್ಯಾನ್‍ಗೆ ಎರಡು ಲೋಟ ನೀರು ಹಾಕಿ ಕ್ಯಾಪ್ ಮುಚ್ಚಿ 2 ರಿಂದ 3 ನಿಮಿಷ ಕಾಯಿಸಿ.
* ನೀರು ಕುದಿಯುತ್ತಿದ್ದಾಗ ಜಜ್ಜಿಕೊಂಡಿದ್ದ ಮಿಶ್ರಣ, ಚಿಟಿಕೆ ಅರಿಶಿಣ, ಹುಣಸೆ ರಸ, ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಹಾಕಿ ಎಲ್ಲವನ್ನು ಮಿಕ್ಸ್ ಮಾಡಿ. ಕ್ಯಾಪ್ ಮುಚ್ಚಿ 5 ನಿಮಿಷ ಬೇಯಿಸಿ. ನಂತರ ಒಗ್ಗರಣೆ ಹಾಕಿ.
Advertisement
ಒಗ್ಗರಣೆಗೆ ಬೇಕಾಗುವ ಸಾಮಾಗ್ರಿಗಳು
1. ತುಪ್ಪ – 1 ಚಮಚ
2. ಸಾಸಿವೆ – 1 ಚಮಚ
3. ಒಣ ಮೆಣಸಿನ ಕಾಯಿ – 1
4. ಕರಿಬೇವು – 3-4
5 ಇಂಗು – ಚಿಟಿಕೆ
Advertisement
* ಒಂದು ಸಣ್ಣ ಬೌಲ್‍ಗೆ ತುಪ್ಪ, ಸಾಸಿವೆ, ಒಣ ಮೆಣಸಿನ ಕಾಯಿ, ಕರಿಬೇವು, ಇಂಗು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಕುದಿಯುದ್ದಿದ್ದ ರಸಂಗೆ ಒಗ್ಗರಣೆ ಹಾಕಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿದರೆ ರುಚಿ ರುಚಿಯಾದ ಪೆಪ್ಪರ್ ರಸಂ ಸವಿಯಲು ಸಿದ್ಧ.
* ಈ ರಸಂ ಅನ್ನು ಅನ್ನಕ್ಕೆ ಮಿಕ್ಸ್ ಮಾಡಿಕೊಂಡು ತಿನ್ನಬಹುದು. ಜೊತೆಗೆ ಬರಿ ರಸಂ ಅನ್ನು ಸವಿಯಬಹದು. ಇದು ಆರೋಗ್ಯಕ್ಕೂ ಒಳ್ಳೆಯದು.