ಬೆಂಗಳೂರು: ಚನ್ನಪಟ್ಟಣದಲ್ಲಿ (Channapatna) ಈ ಬಾರಿಯೂ ಜನರು ಜೆಡಿಎಸ್ (JDS) ಕೈ ಹಿಡಿಯುತ್ತಾರೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವಿಶ್ವಾಸ ವ್ಯಕ್ತಪಡಿಸಿದರು.
ಬಿಡದಿ ತೋಟದ ಮನೆಯಲ್ಲಿ ಚನ್ನಪಟ್ಟಣ ಮುಖಂಡರು, ನಾಯಕರ ಸಭೆ ಬಳಿಕ ಮಾತನಾಡಿದ ಅವರು, ಒಂದು ವಾರದಿಂದ ಕುಮಾರಸ್ವಾಮಿ ಅವರು ಚನ್ನಪಟ್ಟಣದಲ್ಲಿ 5 ಜಿಲ್ಲಾ ಪಂಚಾಯಿತಿ, ಟೌನ್‌ನಲ್ಲಿ ಸಭೆ ಮಾಡಿದ್ದಾರೆ. ಅನೇಕ ವರ್ಷಗಳಿಂದ ಚನ್ನಪಟ್ಟಣದಲ್ಲಿ ಜನರು ನಮ್ಮ ಪರ ನಿಂತಿದ್ದಾರೆ. ಕಾರ್ಯಕರ್ತರು ಪಕ್ಷದ ಪರ ದುಡಿಮೆ ಮಾಡಿದ್ದಾರೆ. ಈ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಚನ್ನಪಟ್ಟಣ ಅಭ್ಯರ್ಥಿ ಫೈನಲ್: ಹೆಚ್‌ಡಿಕೆ
Advertisement
Advertisement
ಇವತ್ತು ಬಿಡದಿ ಮನೆಯಲ್ಲಿ ಕುಮಾರಸ್ವಾಮಿ ಅವರು ಮನಸು ಬಿಚ್ಚಿ ಮಾತಾಡಿದ್ದಾರೆ. ವಾಸ್ತವ ಅಂಶ ಕಾರ್ಯಕರ್ತರ ಮುಂದೆ ಇಟ್ಟಿದ್ದಾರೆ. ಹಿಂದಿನಿಂದಲೂ ಕಾರ್ಯಕರ್ತರು ಚುನಾವಣೆ ಮಾಡಿಕೊಂಡು ಬರ್ತಿದ್ದಾರೆ. ಅವರ ಮನಸಿನ ಭಾವನೆ ಕ್ರೋಡೀಕರಿಸೋ ಕೆಲಸ ಮಾಡಿದ್ದೇವೆ. ಸಭೆ ಯಶಸ್ವಿಯಾಗಿ ಆಗಿದೆ. ಚನ್ನಪಟ್ಟಣದಲ್ಲಿ ಜೆಡಿಎಸ್‌ನ 80 ಸಾವಿರ ಮತಗಳು ಇವೆ. ನಮಗೆ ಗೆಲ್ಲಲು, ಹೋರಾಟ ಮಾಡಲು 20-25 ಸಾವಿರ ಮತ ಮಾತ್ರಬೇಕು ಒಳ್ಳೆ ಲೀಡ್ ಕಾಣೋಕೆ. NDA ಅಭ್ಯರ್ಥಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆಯೋ ಕೆಲಸ ಆಗಿದೆ ಎಂದರು.
Advertisement
Advertisement
ತಾವೇ ಅಭ್ಯರ್ಥಿ ಆಗೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾರೇ ಅಭ್ಯರ್ಥಿ ಆದರೂ 80 ಸಾವಿರ ಮತ ಪಕ್ಷದ ಚಿಹ್ನೆ ಅಡಿಯಿದೆ. ದೇವೇಗೌಡರ ಅನೇಕ ಕೆಲಸಗಳು, ದೂರದೃಷ್ಟಿ ಇಟ್ಟುಕೊಂಡು ಇಗಲೂರು ಬ್ಯಾರೇಜ್ ಕಟ್ಟಿದ್ದಾರೆ. ಈ ಎಲ್ಲಾ ಕೆಲಸಗಳು ಈ ಭಾಗದ ರೈತರು, ಜನರ ಮನಸಿನಲ್ಲಿ ಇವೆ. ಕುಮಾರಸ್ವಾಮಿ ಅವರು ಚನ್ನಪಟ್ಟಣಕ್ಕೆ 1,500 ಕೋಟಿ ಅನುದಾನ ತಂದು ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತ ನಿಂತರೂ ನೂರಕ್ಕೆ ನೂರು ಜೆಡಿಎಸ್‌ಗೆ ಜನ ಆಶೀರ್ವಾದ ಮಾಡ್ತಾರೆ. ನಿಖಿಲ್ ಕುಮಾರಸ್ವಾಮಿ ನಿಲ್ಲಬೇಕು ಅಂತಾ ಏನಿಲ್ಲ. ನಾನೊಬ್ಬ ಕಾರ್ಯಕರ್ತನಾಗಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಮನಸಿನಲ್ಲಿ ಏನಾದ್ರು ನೋವುಗಳು ಇದ್ದರೆ ಅವುಗಳನ್ನು ಸರಿ ಮಾಡೋ ಕೆಲಸ ಪ್ರಾಮಾಣಿಕವಾಗಿ ಮಾಡ್ತೀನಿ ಎಂದು ತಿಳಿಸಿದರು. ಇದನ್ನೂ ಓದಿ: ದುಷ್ಟ ಶಕ್ತಿ ಯಾರಾದರೂ ರಾಜ್ಯದಲ್ಲಿ ಇದ್ದಾರೆ ಅಂದರೆ ಅದು ಸಿದ್ದರಾಮಯ್ಯ: ಛಲವಾದಿ ನಾರಾಯಣಸ್ವಾಮಿ